Tuesday, May 21, 2024

ಪ್ರಾಯೋಗಿಕ ಆವೃತ್ತಿ

ಲೋಕಸಭೆ ಚುನಾವಣೆ | ಮಹಿಳೆಗೆ ಪ್ರತಿ ವರ್ಷ ₹1 ಲಕ್ಷ ; ದೇಶದ ಜನತೆಗೆ ಭರಪೂರ ಗ್ಯಾರಂಟಿಗಳನ್ನು ಘೋಷಿಸಿದ ಕಾಂಗ್ರೆಸ್

ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಹಲವಾರು ಗ್ಯಾರಂಟಿ, ಸಂಕಲ್ಪಗಳನ್ನು ಘೋಷಿಸುತ್ತಿದೆ. ಈ ಹಿಂದೆ ಐದು ಗ್ಯಾರಂಟಿಗಳನ್ನು ಮತ್ತು ಆದಿವಾಸಿ ಸಮಾಜಕ್ಕಾಗಿ ಆರು ಸಂಕಲ್ಪಗಳನ್ನು ಘೋಷಿಸಿದ್ದ ಕಾಂಗ್ರೆಸ್ ಈಗ ಮಹಿಳೆಯರಿಗಾಗಿ ಐದು ಗ್ಯಾರಂಟಿಗಳನ್ನು ಘೋಷಿಸಿದೆ.

“ನಾರಿ ನ್ಯಾಯ ಗ್ಯಾರಂಟಿ” ಅಡಿಯಲ್ಲಿ ಕಾಂಗ್ರೆಸ್ ಮಹಾಲಕ್ಷ್ಮೀ, ಆಧಿ ಆಬಾದಿ ಪೂರಾ ಹಖ್, ಶಕ್ತಿ ಕಾ ಸಮ್ಮಾನ್, ಅಧಿಕಾರ್ ಮೈತ್ರಿ ಮತ್ತು ಸಾವಿತ್ರಿಬಾಯಿ ಫುಲೆ ಹಾಸ್ಟೆಲ್ ಯೋಜನೆ ಎಂಬ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಈ ಐದು ಗ್ಯಾರಂಟಿಗಳ ವಿವರವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ನೀಡಿದ್ದಾರೆ. “ನಾರಿ ಶಕ್ತಿಗೆ ನನ್ನ ಪ್ರಣಾಮ. ದೇಶದಲ್ಲಿ ಮಹಿಳೆಯರ ಜೀವನ ಬದಲಾಗುವಂತಹ ಗ್ಯಾರಂಟಿಗಳನ್ನು ನಿಮಗೆ ಕಾಂಗ್ರೆಸ್ ನೀಡಲಿದೆ,” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಗ್ಯಾರಂಟಿ 1- ಮಹಾಲಕ್ಷ್ಮೀ: ಬಡ ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ವರ್ಷ 1 ಲಕ್ಷ ರೂಪಾಯಿ.

ಗ್ಯಾರಂಟಿ 2- ಅರ್ಧದಷ್ಟು ಜನಸಂಖ್ಯೆ, ಸಂಪೂರ್ಣ ಹಕ್ಕು: ಕೇಂದ್ರ ಸರ್ಕಾರದ ಎಲ್ಲಾ ಹೊಸ ನೇಮಕಾತಿಗಳಲ್ಲಿ ಅರ್ಧದಷ್ಟು ಮಹಿಳೆಯರಿಗೆ ಮೀಸಲು.

ಗ್ಯಾರಂಟಿ 3- ಶಕ್ತಿಗೆ ಗೌರವ: ಆಶಾಗಳು, ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಮಹಿಳೆಯರ ವೇತನದಲ್ಲಿ ಕೇಂದ್ರ ಸರ್ಕಾರದ ಪಾಲು ದುಪ್ಪಟ್ಟು.

ಗ್ಯಾರಂಟಿ 4- ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್: ದೇಶದಲ್ಲಿ ಉದ್ಯೋಗಿ ಮಹಿಳೆಯರಿಗಾಗಿ ಹಾಸ್ಟೆಲ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಮೂಲಕ, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಹಾಸ್ಟೆಲ್.

ಗ್ಯಾರಂಟಿ 5- ಅಧಿಕಾರ ಮೈತ್ರಿ – ಎಲ್ಲಾ ಪಂಚಾಯತಿಗಳಲ್ಲಿ ಅಧಿಕಾರ ಮೈತ್ರಿಯ ನೇಮಕದ ಮೂಲಕ ಮಹಿಳೆಯರಿಗೆ ಅವರ ಕಾನೂನು ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಮತ್ತು ಅವರು ಈ ಹಕ್ಕುಗಳನ್ನು ಪಡೆಯಲು ಸಹಾಯ.

“>

ಇನ್ನು ಉದ್ಯೋಗ ಸೃಷ್ಟಿ, ಅಪ್ರೆಂಟಿನ್‌ಶಿಪ್, ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ, ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಕಠಿಣ ಕ್ರಮ, ಕಾರ್ಮಿಕರಿಗೆ (ನಿರ್ದಿಷ್ಟ ಅವಧಿಗೆ ದುಡಿಯುವವರು) ಸ್ಟಾರ್ಟ್‌ಅಪ್ ಫಂಡ್‌ಗಳು ಮತ್ತು ಸಾಮಾಜಿಕ ಭದ್ರತೆ ನೀಡುವ ಐದು ಗ್ಯಾರಂಟಿಗಳನ್ನು ಈಗಾಗಲೇ ಕಾಂಗ್ರೆಸ್ ಘೋಷಿಸಿದೆ. ಆದಿವಾಸಿ ಸಮಾಜಕ್ಕೆ ಕಾಂಗ್ರೆಸ್‌ ಉತ್ತಮ ಆಡಳಿತ, ಸುಧಾರಣೆಗಳು, ಭದ್ರತೆ, ಸ್ವ-ಆಡಳಿತ, ಆತ್ಮಗೌರವ, ಉಪ ಯೋಜನೆ ಎಂಬ ಆರು ಸಂಕಲ್ಪಗಳನ್ನು ಘೋಷಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!