Friday, November 20, 2026

ಪ್ರಾಯೋಗಿಕ ಆವೃತ್ತಿ

ಫೆ.12ರಂದು ತಗ್ಗಹಳ್ಳಿ ವೆಂಕಟೇಶ್ ಬೆಂಬಲಿಗರ ಸಭೆ

ಮುಂಬರುವ 2023 ರ ವಿಧಾನಸಭಾ ಚುನಾವಣೆಗೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜಿ.ಪಂ.ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌ ಬೆಂಬಲಿಗರ ಸಭೆಯನ್ನು ಫೆ.12ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ತಾಲ್ಲೂಕಿನ ಸಂತೆಕಸಲಗೆರೆ ಭೂಮಿಸಿದ್ದೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಮುಖಂಡ ಎಂ.ಬಿ.ಲೋಕೇಶ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ  ಕಾರ್ಯಕ್ರಮಕ್ಕೆ ಸುಮಾರು 8 ಸಾವಿರದಿಂದ 10 ಬೆಂಬಲಿಗರು, ಸ್ನೇಹಿತರು, ಹಿತೈಷಿಗಳು ಹಾಗೂ ನಿಷ್ಠಾವಂತ ಕಾರ್ಯಕರ್ತರುಗಳು ಬರುವ ನಿರೀಕ್ಷೆ ಇದೆ. ಈ ಸಭೆಗೆ ಆಗಮಿಸುವ ಎಲ್ಲರಿಗೂ ಊಟೋಪಚಾರ ಹಾಗೂ ಸಮಾರಂಭದ ಖರ್ಚು ವೆಚ್ಚಗಳನ್ನು ಬೆಂಬಲಿಗರು ಸ್ನೇಹಿತರು, ಹಿತೈಷಿಗಳು ಹಾಗೂ ನಿಷ್ಟಾವಂತ ಕಾರ್ಯಕರ್ತರುಗಳೇ ಭರಿಸುತ್ತಿದ್ದಾರೆ ಎಂದರು.

ಕಳೆದ 20 ದಿನಗಳ ಹಿಂದೆ ಆರತಿ ಉಕ್ಕಡದಲ್ಲಿ ಪಕ್ಷಾತೀತವಾಗಿ ಬೆಂಬಲಿಗರು ಸ್ನೇಹಿತರು, ಹಿತೈಷಿಗಳ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಶ್ರೀರಂಗಪಟ್ಟಣ ಟೌ‌ನ್, ಅರಕೆರೆ, ಬೆಳಗೊಳ, ಕೆ.ಕೆಟ್ಟಹಳ್ಳಿ ಹೋಬಳಿಯ ತಗ್ಗಹಳ್ಳಿ ವೆಂಟೇಶ್ ಬೆಂಬಲಿಗರು ಪಕ್ಷಾತೀತವಾಗಿ ಭಾಗವಹಿಸಿದ್ದರು. ಸಭೆಯು ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು ಎಂದರು.

ಫೆ.12ರ ಸಭೆಗೆ ಕೊತ್ತತ್ತಿ ಹೋಬಳಿ ಮಟ್ಟದ ತಗ್ಗಹಳ್ಳಿ ವೆಂಕಟೇಶ್‌ ಬೆಂಬಲಿಗರು, ಸ್ನೇಹಿತರು, ಹಿತೈಷಿಗಳು ಹಾಗೂ ನಿಷ್ಠಾವಂತ ಕಾರ್ಯಕರ್ತರು, ಜನಸಾಮಾನ್ಯರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಮುಖಂಡರಾದ ಲಂಕೇಶ್ ಮಂಗಲ, ಉಮೇಶ್, ಮಂಜು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ