Wednesday, October 23, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿಯಲ್ಲೇ 261 ರೌಡಿಗಳಿದ್ದಾರೆ; ಮೋದಿಗೆ ತಿರುಗೇಟು ನೀಡಿ ಸ್ಟಾಲಿನ್

ತಮಿಳುನಾಡು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ “ನಿಮ್ಮ (ಬಿಜೆಪಿ) ಪಕ್ಷದಲ್ಲಿ 261 ರೌಡಿಗಳಿದ್ದಾರೆ” ಎಂದು ಹೇಳಿದರು.

ಸೇಲಂನಲ್ಲಿ ಸೇಲಂ ಡಿಎಂಕೆ ಅಭ್ಯರ್ಥಿ ಟಿಎಂ ಸೆಲ್ವಗಣಪತಿ ಮತ್ತು ಕಲ್ಲಕುರಿಚಿ ಡಿಎಂಕೆ ಅಭ್ಯರ್ಥಿ ಡಿ ಮಲೈಯರಸನ್ ಪರ ಪ್ರಚಾರ ನಡೆಸುತ್ತಿದ್ದ ಸಿಎಂ ಸ್ಟಾಲಿನ್ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.

ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರಧಾನಿ ಮೋದಿ ಈ ಹಿಂದೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಟಾಲಿನ್ “ಬಿಜೆಪಿಯ 261 ನಾಯಕರುಗಳು ಹಿಸ್ಟರಿ ಶೀಟರ್‌ಗಳು ಮತ್ತು ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವವರು ಆಗಿದ್ದಾರೆ” ಎಂದು ಆರೋಪಿಸಿದರು.

“ರೌಡಿಗಳು ತಮ್ಮ ಪಕ್ಷದೊಳಗೆ ಇರುವಾಗ ನಮ್ಮ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಮಾತನಾಡುವ ಹಕ್ಕು ಪ್ರಧಾನಿ ಮೋದಿಯವರಿಗೆ ಇದೆಯೇ” ಎಂದು ಪ್ರಶ್ನಿಸಿದ ಎಂಕೆ ಸ್ಟಾಲಿನ್ ಅವರು, “ಎಲ್ಲಾ ರೌಡಿಗಳು ನಿಮ್ಮ (ಪಿಎಂ ಮೋದಿ) ಪಕ್ಷದಲ್ಲಿದ್ದಾರೆ. ಹಾಗಿದ್ದಾಗ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಮಾತನಾಡಲು ನಿಮಗೆ ಯಾವ ಹಕ್ಕಿದೆ? ಎಂದು ಕೇಳಿದರು. ಜೊತೆಗೆ ಬಿಜೆಪಿಯಲ್ಲಿರುವ ಹಿಸ್ಟರ್ ಶೀಟರ್‌ಗಳ ಹೆಸರು ಬರೆಯುತ್ತಾ ಹೋದರೆ 32 ಪುಟಗಳ ಪಟ್ಟಿ ಆಗುತ್ತದೆ ಎಂದು ಹೇಳಿದರು.

ಇನ್ನು “ಬಿಜೆಪಿಯಲ್ಲಿರುವ ಹಿಸ್ಟರ್ ಶೀಟ್‌ಗಳ ಪಟ್ಟಿಯಿದೆ. ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ನಿಮ್ಮ ಹೇಳಿಕೆಗೆ ಸರಿಯಾದ ಸಾಕ್ಷ್ಯ ನೀಡಿ” ಎಂದ ಎಂಕೆ ಸ್ಟಾಲಿನ್ ಅವರು “ಬಿಜೆಪಿ ನಾಯಕರ ವಿರುದ್ಧ ಒಟ್ಟು 1,977 ಪ್ರಕರಣಗಳಿವೆ” ಎಂದು ಬಹಿರಂಗಪಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!