Tuesday, May 14, 2024

ಪ್ರಾಯೋಗಿಕ ಆವೃತ್ತಿ

ಡೇರೆ ಶಾಮಿಯಾನ ಬಿಡೋಣ ಸುಸಜ್ಜಿತ ರಂಗಮಂದಿರ ನಿರ್ಮಿಸೋಣ – ಉದಯ್

ತಾಲೂಕು ಕೇಂದ್ರ ಮದ್ದೂರು ಪಟ್ಟಣದಲ್ಲಿ ಗ್ರಾಮೀಣಾ ನಾಟಕೋತ್ಸವ ನಡೆಯುತ್ತಿರುವುದು ಶ್ಲಾಘನೀಯಾ. ಆದರೆ ಇಷ್ಠೆಲ್ಲಾ ಸೌಕರ್ಯ ಲಭ್ಯ ಇರುವ ಈ ಕಾಲಮಾನದಲ್ಲಿ ಡೇರೆ ಶಾಮಿಯಾನ ಹಾಕಿಕ್ಕೊಂಡು ನಾಟಕ ಅಭಿನಯ ಮಾಡೋದನ್ನ ಬಿಡೋಣ ನಾವು ನೀವು ಸೇರಿ ಸುಸಜ್ಜಿತ ರಂಗಮಂದಿರ ನಿರ್ಮಿಸೋಣ ಎಂದು ಸಮಾಜ ಸೇವಕ ಕದಲೂರು ಉದಯ್ ಕರೆನೀಡಿದರು.

ಮದ್ದೂರಿನಲ್ಲಿ ಆರು ದಿನಗಳಿಂದ ಸಿಎ ಕೆರೆ ರಂಗಭೂಮಿ ಕಲಾವಿದರ ಸಂಘ, ಮದ್ದೂರು ರಂಗಭೂಮಿ ಕಲಾವಿದರ ಸಂಘ, ಸುಮುಖ ಟ್ರಸ್ಟ್ ಸಹಯೋಗದಲ್ಲಿ ನಡೆಯುತ್ತಿರುವ ಗ್ರಾಮಿಣಾ ನಾಟಕೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ಭಾಗವಹಿಸಿದ್ದರು.

ಮದ್ದೂರು ಅಸಂಖ್ಯಾತ ಕಲಾವಿದರನ್ನು ಪರಿಚಯಿಸಿದೆ. ಇಷ್ಠೆಲ್ಲಾ ಕಲಾವಿದರು ಸಂಘ-ಸಂಸ್ಥೆಯವರು ಇದ್ದೀರಿ, ತಮಗೆ ಹಲವರ ಪರಿಚಯ ಇದೆ, ಹೀಗಿದ್ದರು ಒಂದು ರಂಗಮಂದಿರ ಇಲ್ಲಾ ಎನ್ನುವ ಕೊರಗು ಹಾಗೆ ಉಳಿದಿದೆ ಎಂದರೆ ನೀವುಗಳು ಆ ನಿಟ್ಟಿನಲ್ಲಿ ಪ್ರಯತ್ನಿಸಿಲ್ಲಾ ಎಂಬುದು ನನ್ನ ಭಾವನೆ ಎಂದ ಅವರು
ಇನ್ನು ಹೀಗೆ ಡೇರೆ ಹಾಕಿ, ಶಾಮಿಯಾನ ಹಾಕಿ, ರಂಗಕಲೆ ಪ್ರದರ್ಶನ ಮಾಡಿದರೆ ಮಳೆ-ಗಾಳಿಯ ಭೀತಿ ಕಾಡುತ್ತದೆ. ಅದಾಗದಿರುವಂತೆ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಶ್ರಮಿಸೋಣ, ಅದಕ್ಕೆ ಬೇಕಾದ ಆರ್ಥಿಕ ನೆರವನ್ನು ಮೊದಲಿಗನಾಗಿ ನಾನೆ ನೀಡಲಿದ್ದೇನೆ. ಉಳಿಕೆ ಹಣ ಹೊಂದಿಸಿ ರಂಗಮಂದಿರ ನಿರ್ಮಾಣ ಮಾಡಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನ.ಲಿ.ಕೃಷ್ಣರವರು ನಾಟಕಗಳು ಕೇವಲ ಮನರಂಜನೆಯಷ್ಠೆ ಅಲ್ಲದೆ ಮನೋವಿಕಾಸವನ್ನು ನೀಡಲಿವೆ. ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಸಂದೇಶಗಳು ಜೀವನಕ್ರಮವನ್ನು ತಿಳಿಸಿಕೊಡಲಿವೆ ಎಂದರು.

ಸುಮುಖ ಟ್ರಸ್ಟ್‌ ನ ಸಿದ್ದರಾಜು, ಸಿಎ ಕೆರೆ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಚಾಕನಹಳ್ಳಿ ಶಂಕರೇಗೌಡ, ಮಾಲಗಾರನಹಳ್ಳಿ ಮಲವರಾಜ್, ಕಲಾವಿದ ಕುಪ್ಪಸ್ವಾಮಿ, ಕುದರಗುಂಡಿ ನಿತ್ಯಾನಂದ, ಎನ್ ಆರ್ ರವಿ ನಗರಕೆರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!