ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಯೂಟ್ಯೂಬ್ ಚಾನೆಲ್ ಕಳೆದ 1 ತಿಂಗಳಲ್ಲಿ 30 ಕೋಟಿ ವೀಕ್ಷಣೆ ಪಡೆದಿದೆ. ರಾಜಕೀಯ ವ್ಯಕ್ತಿ ಅಥವಾ ರಾಜಕೀಯ ಸುದ್ದಿ ಚಾನೆಲ್ ಗಳಲ್ಲೇ ಅತಿ ಹೆಚ್ಚು ವೀಕ್ಷಣೆ ಇದಾಗಿದ್ದು, ಮೋದಿ ಅವರ ಯೂಟ್ಯೂಬ್ ಚಾನೆಲ್ನ ವೀಕ್ಷಣೆಗಿಂತ ದುಪ್ಪಟ್ಟಾಗಿದೆ ಎಂದು ಕಾಂಗ್ರೆಸ್ ಪಕ್ಷವು ಹೇಳಿಕೊಂಡಿದೆ.
ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂನಲ್ಲಿ ರಾಹುಲ್ ಗಾಂಧಿ ಅವರ ವಿಡಿಯೋ ಹಾಗೂ ರೀಲ್ಗಳು ವೈರಲ್ ಆಗುತ್ತಿವೆ. ಕೋಟ್ಯಂತರ ಭಾರತೀಯರು ಅದರಲ್ಲೂ ಯುವ ಸಮುದಾಯ ಉದ್ಯೋಗ ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಆಸಕ್ತಿ ಹೊಂದಿದ್ದು, ಅತ್ಯಂತ ಮಹತ್ವದ ಘಟ್ಟದಲ್ಲಿ ರಾಹುಲ್ ಗಾಂಧಿ ಅವರ ಜನಪ್ರಿಯತೆ ಉತ್ತುಂಗಕ್ಕೆ ತಲುಪಿದೆ ಎಂದು ‘ಎಕ್ಸ್’ ನಲ್ಲಿ ಕಾಂಗ್ರೆಸ್ ಪಕ್ಷವು ಬರೆದುಕೊಂಡಿದೆ.
ರಾಹುಲ್ ಗಾಂಧಿ ಅವರ ಯೂಟ್ಯೂಬ್ ಚಾನೆಲ್ ಕಳೆದ 1 ತಿಂಗಳಲ್ಲಿ 30 ಕೋಟಿ ವೀಕ್ಷಣೆ ಪಡೆದಿದೆ.
ರಾಜಕೀಯ ವ್ಯಕ್ತಿ ಅಥವಾ ರಾಜಕೀಯ ಸುದ್ದಿ ಚಾನೆಲ್ ಗಳಲ್ಲೇ ಅತಿ ಹೆಚ್ಚು ವೀಕ್ಷಣೆ ಇದಾಗಿದ್ದು, ಮೋದಿ ಅವರ ಯೂಟ್ಯೂಬ್ ಚಾನೆಲ್ನ ವೀಕ್ಷಣೆಗಿಂತ ದುಪ್ಪಟ್ಟಾಗಿದೆ.
ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂನಲ್ಲಿ @RahulGandhi ಅವರ ವಿಡಿಯೋ ಹಾಗೂ ರೀಲ್ಗಳು… pic.twitter.com/OlcsvwaJ7U
— Karnataka Congress (@INCKarnataka) May 14, 2024
“>




