Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿತ್ತನೆ ಬೀಜ- ರಸಗೊಬ್ಬರ ದಾಸ್ತಾನು ವಿವರ ಅನಾವರಣಗೊಳಿಸಿ : ಜಿಲ್ಲಾಧಿಕಾರಿ ಸೂಚನೆ

ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಮಾರಾಟಗಾರರು ತಮ್ಮ ಬಳಿ ಇರುವ ದಾಸ್ತಾನುಗಳ ವಿವರವನ್ನು ಪ್ರತಿ ದಿನ ಅಂಗಡಿಯ ಮುಂಭಾಗ ಅನಾವರಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟಗಾರರ ಸಭೆ ನಡೆಸಿ ಅವರು ಮಾತನಾಡಿದರು. ಪ್ರತಿ ದಿನ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಲಭ್ಯವಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ದಾಸ್ತಾನು ವಿವರದ ಬುಲೆಟನ್ ಅನ್ನು ರೈತರ ಮಾಹಿತಿಗಾಗಿ ಬಿಡುಗಡೆ ಮಾಡಬೇಕು. ಇದರಿಂದ‌ ಬಿತ್ತನೆ ಬೀಜ ಅಥವಾ ರಸಗೊಬ್ಬರ ಕ್ಕಾಗಿ ನೂಕು ನುಗ್ಗಲು ಉಂಟಾಗುವುದಿಲ್ಲ ಎಂದರು.

ದರಗಳ ಅನಾವರಣ ಕಡ್ಡಾಯ ಮಾರಾಟಗಾರರು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದರವನ್ನು ಕಡ್ಡಾಯವಾಗಿ ಅನಾವರಣಗೊಳಿಸಬೇಕು. ರೈತರು ಕೂಡ ಖರೀದಿಸಿದಾಗ ಅಧಿಕೃತ ಬಿಲ್ ನ್ನು ಪಡೆದುಕೊಳ್ಳಬೇಕು. ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಗುಣಮಟ್ಟವನ್ನು ಸಹ ಪರೀಕ್ಷಿಸಬೇಕು ಎಂದರು.

ಮಾರಟಗಾರರು ರೈತರಿಗೆ ಹೆಚ್ಚು ಇಳುವರಿ ನೀಡುವಂತಹ ಹಾಗೂ ಜಿಲ್ಲೆಯ ಹವಾಮಾನಕ್ಕೆ ತಕ್ಕಂತಹ ಬಿತ್ತನೆ ಬೀಜ ಮಾರಾಟ ಮಾಡಿ. ಬೇಸಾಯ ಕ್ರಮಗಳ ಬಗ್ಗೆ ತಿಳಿಸಿ. .ಹೆಚ್ಚು ಲಾಭ ಗಳಿಸುವ ದೃಷ್ಠಿಯಿಂದ ರಸಗೊಬ್ಬರ ಮಾರಾಟಗಾರರು ಬೇರೆ ವಿಧದ ರಸಗೊಬ್ಬರವನ್ನು ರೈತರು ಖರೀದಿಸುವಂತೆ ಉತ್ತೇಜನೆ ಮಾಡುವುದು ಬೇಡ. ರೈತರ ಬೇಡಿಕೆಯಂತೆ ರಸಗೊಬ್ಬರವನ್ನು ನೀಡಿ ಎಂದರು.

ಬಿತ್ತನೆ ಬೀಜಕ್ಕಾಗಿ ಕೆಲವು ದಿನ ಅಥವಾ ವಾರ ಬೇಡಿಕೆ ಹೆಚ್ಚಿರುತ್ತದೆ. ಇಂತಹ ದಿನಗಳನ್ನು ತಿಳಿದುಕೊಂಡು ರೈತ ಸಂಪರ್ಕ ಕೇಂದ್ರಗಳು ಬೆಳಿಗ್ಗೆ 8 ಗಂಟೆಯಿಂದಲೇ ತೆರೆದು ಕಾರ್ಯನಿರ್ವಹಿಸಿ. ರೈತರೊಂದಿಗೆ ಶಾಂತ ಚಿತ್ತ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಿ ಕೃಷಿಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಒದಗಿಸಿ ಎಂದರು.

ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕರು ತಾಲ್ಲೂಕು ಮಟ್ಟದಲ್ಲಿ ರೈತ ಸಂಘಗಳೊಂದಿಗೆ ಸಭೆ ನಡೆಸಿ, ಕುಂದು ಕೊರತೆಗಳನ್ಯ ಪರಿಹರಿಸಿ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಳ್ಳಿ. ಯಾವುದೇ ಸಮಸ್ಯೆ ಇದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಪರಿಹರಿಸಿ ಎಂದರು.

ಕೃಷಿ ಇಲಾಖೆಯ ಪಾಂಡವಪುರ ವಿಭಾಗದ ಉಪನಿರ್ದೇಶಕಿ ಮಮತಾ ಅವರು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಬೇಡಿಕೆ, ಮಳೆ, ಬಿತ್ತನೆಯ ವಿವರನ್ನು ಸಭೆಗೆ ನೀಡಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಅಶೋಕ್, ಉಪನಿರ್ದೇಶಕಿ ಮಾಲತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!