ಲೋಕಸಭಾ ಚುನಾವಣೆಯಲ್ಲಿ ಮೋದಿ ಎಂಬ ನಾಮಬಲ ಒಂದಿದ್ದರೆ ಸಾಕು ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದರು ನರೇಂದ್ರ ಮೋದಿ.
ಆದರೆ ಫಲಿತಾಂಶದಲ್ಲಿ ಪೂರ್ಣ ಬಹುಮತ ಬಿಜೆಪಿಗೆ ಸಿಕ್ಕಿಲ್ಲ.ಹಾಗಾಗಿ ಈಗ ಮೋದಿಯವರು ತಮ್ಮ ಮಿತ್ರಪಕ್ಷಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ x ಖಾತೆಯಲ್ಲಿ ಅವರು, ಮತ್ತೊಮ್ಮೆ ಎನ್ಡಿಎ ಸರ್ಕಾರದ ಬಗ್ಗೆ ಭರವಸೆ ಇರಿಸಿದ ಜನತೆ ಎಂದು ತಿಳಿಸಿರುತ್ತಾರೆ.
Andhra Pradesh has given an exceptional mandate to NDA! I thank the people of the state for their blessings. I congratulate @ncbn Garu, @PawanKalyan Garu and the Karyakartas of @JaiTDP, @JanaSenaParty and @BJP4Andhra for this emphatic victory.
We will work for the all-round…
— Narendra Modi (@narendramodi) June 4, 2024
“>
ತಮ್ಮ ಚುನಾವಣಾ ಪ್ರಚಾರದ ಉದ್ದಕ್ಕೂ ಮೋದಿ ಸರ್ಕಾರ,ಮೋದಿ ಗ್ಯಾರಂಟಿ ಎಂದು ಚುನಾವಣೆಯಲ್ಲಿ ಅಬ್ಬರಿಸುತ್ತಿದ್ದ ಮೋದಿ ಎನ್ಡಿಎ ಸರ್ಕಾರ ಎಂದು ಹೇಳುತ್ತಿರಲಿಲ್ಲ.
ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನಡೆ ಆದ ನಂತರ ಮೋದಿಜೀ ಇದೇ ಪ್ರಥಮ ಬಾರಿಗೆ ಎನ್ಡಿಎ ಸರ್ಕಾರ ಎಂದು ಬಳಸಿದ್ದು, ಬಿಜೆಪಿ ಸ್ವಂತ ಶಕ್ತಿ ಪಡೆಯದಿರುವ ಕಾರಣವೇ ಈ ಬದಲಾವಣೆ ಎಂದು ನೆಟ್ಟಿಗರು ಕಾಲು ಎಳೆಯುತ್ತಿದ್ದಾರೆ.