Thursday, October 24, 2024

ಪ್ರಾಯೋಗಿಕ ಆವೃತ್ತಿ

77 ಕೋಟಿ ವೆಚ್ಚದ ಏತ ನೀರಾವರಿ ಕಾಮಗಾರಿ ಪರಿಶೀಲನೆ

ಮದ್ದೂರು ತಾಲ್ಲೂಕಿನ ಕೂಳಗೆರೆ ಗ್ರಾಮದ ಸಮೀಪ ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ, ಉದ್ಘಾಟನೆಗೆ ಸಿದ್ದವಾಗಿರುವ ಏತನೀರಾವರಿ ಕಾಮಗಾರಿಯನ್ನು ಇಂದು ವೀಕ್ಷಿಸಿದ ಶಾಸಕ ಡಿ.ಸಿ.ತಮ್ಮಣ್ಣ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಮತ್ತು ಸಿಎ ಕೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 18 ಕೆರೆಗಳಿಗೆ ನೀರು ತುಂಬಿಸುವ ಬಹುನಿರೀಕ್ಷಿತ ಏತ ನೀರಾವರಿ ಯೋಜನೆಯಿಂದ ಈ ಭಾಗದ ಅರೇಕಲ್ಲುದೊಡ್ಡಿ, ಗೊಲ್ಲರ ದೊಡ್ಡಿ, ಹಳ್ಳಿಕೆರೆ, ಕಬ್ಬಾರೆ,ಆರುವನಹಳ್ಳಿ, ಭೀಮನಕೆರೆ, ಬಾಣೋಜಿ ಪಂಥ್, ಬ್ಯಾಡರಹಳ್ಳಿ, ತಿಪ್ಪೂರು ಕೆರೆ.ರಾಜೇಗೌಡನ ದೊಡ್ಡಿ. ಮಾದನಾಯಕನಹಳ್ಳಿ, ತಿಪ್ಪೂರು, ಮಾದಾಪುರದೊಡ್ಡಿ, ರುದ್ರಾಕ್ಷಿಪುರ,ತೈಲೂರು ಹಾಗೂ ಸೋಮನಹಳ್ಳಿ, ತೊಪ್ಪನಹಳ್ಳಿ ಚಿಕ್ಕಕೆರೆ ಮತ್ತು ದೊಡ್ಡ ಕೆರೆಗಳಿಗೆ ಒಟ್ಟು18 ಕೆರೆಗಳಿಗೆ ತುಂಬಿಸುವ ಉದ್ದೇಶ ಈ ಯೋಜನೆ ಹೊಂದಿದೆ ಎಂದರು.

ಶಿಂಷಾ ನದಿ ಬಲ ದಂಡೆ ಈ ಭಾಗವು ಸಂಪೂರ್ಣ ಮಳೆಯಾಶ್ರಿತವಾಗಿದ್ದು, ಈ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ಧಿಸುವುದು ಮತ್ತು ಈ ಭಾಗದ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷಗಳು ಕಳೆದಿದೆ. ಈ ವರ್ಷ ಡಿಸೆಂಬರ್ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮುಂದಿನ ಮಾರ್ಚ್ ತಿಂಗಳಲ್ಲಿ ಉದ್ದೇಶಿಸಿದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಪ್ರಾರಂಭವಾಗಲಿದೆ. ಹದಿನೆಂಟು ಕೆರೆಗಳಿಗೆ ಪೈಪ್ ಲೈನ್ ಕೆಲಸ ತೊಪ್ಪನಹಳ್ಳಿವರೆಗೆ ಪೂರ್ಣಗೊಂಡಿದೆ.

ಐದು ಕಿ.ಮೀ.ಪೈಪ್ ಲೈನ್ ಅಳವಡಿಕೆ ಬಾಕಿ ಇದ್ದು, ಈಗ ಪಂಪ್ ಹೌಸ್ ಕಾಮಗಾರಿ ನಡೆಯುತ್ತಿದೆ. ಈ ವರ್ಷದ ಜುಲೈ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ 18 ಕೆರೆಗಳಿಗೆ ನೀರು ತುಂಬಿಸಲು ಸೂಚಿಸಿದ್ದೇನೆ ಎಂದರು.

ಕೆಲವು ಕಾರಣಗಳಿಂದ ಕಾಮಗಾರಿ ಪೂರ್ಣಗೊಳ್ಳಲು ತಡವಾಗಿದೆ. ಇನ್ನು ಮುಂದೆ ತಡೆ ಆಗದಂತೆ ಅಧಿಕಾರಿಗಳಿಗೆ ಕ್ರಮ ವಹಿಸಲು ಸೂಚಿಸಿದ್ದೇನೆ.

ಈ ಯೋಜನೆ ಪೂರ್ಣಗೊಂಡರೆ ಈ ಭಾಗದ ಜನರಿಗೆ ಅಂತರ್ಜಲ ವೃದ್ಧಿಯಾಗುತ್ತದೆ. ಈ ಭಾಗದ ಜನರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದರು.

ಅಧಿಕಾರಿಗಳಿಗೆ ತ್ವರಿತವಾಗಿ ಕಾಮಗಾರಿ ಪೂರ್ಣ ಗೊಳಿಸಲು ಸೂಚಿಸಿ ಪ್ರತಿನಿತ್ಯ ಇಲ್ಲಿ ನಡೆಯುವ ಕಾಮಗಾರಿ ಪ್ರಗತಿಯ ಪೋಟೋಗಳನ್ನು ನನಗೆ ಕಳಿಸಲು ಸೂಚಿಸಿದ್ದೇನೆ. ಈ ಕಾಮಗಾರಿಯಿಂದ ನೀರು ನದಿಗೆ ಸೇರುವುದನ್ನು ವೀಕ್ಷಿಸಲು 15 ದಿನಕ್ಕೆ ಒಮ್ಮೆ ಬರುತ್ತೇನೆ. ಕಾಮಗಾರಿ ಪ್ರಗತಿ ತ್ವರಿತವಾಗಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಅನಿಲ್, ಪಿಡಬ್ಲೂಡಿ ಎಂಜಿನಿಯರ್‌‌ ವೆಂಕಟೇಶ್,ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕತಮ್ಮೇಗೌಡ, ಉಪಾಧ್ಯಕ್ಷ ವೆಂಕಟೇಶ್ ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಕೆ.ಟಿ ಶೇಖರ್, ಕೆ ಟಿ .ಶೇಖರ್, ರಾಜಣ್ಣ, ಹೊನ್ನೆಗೌಡ,ರಾಮಲಿಂಗಯ್ಯ. ಚಿಕ್ಕತಮ್ಮೆಗೌಡ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಾದ ವಿಜಯಕುಮಾರ್.ಹೊನ್ನರಾಜು. ಸುರೇಶ್ ಕುಮಾರ್. ಶಿವರಾಜ್. ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ,ಕೆಂಗಲ್ ಗೌಡ, ಪಿ .ಹರೀಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!