ಹೊಸ ಸರ್ಕಾರದ ರಚನೆಗೆ ಎನ್ಡಿಎ ಮೈತ್ರಿ ಪಕ್ಷಗಳು ಮೋದಿಜೀ ಅವರನ್ನು ನಾಯಕನನ್ನಾಗಿ ಪರಿಗಣಿಸಿವೆ. ಹೀಗಾಗಿ ಹೊಸ ಸರ್ಕಾರದ ರಚನೆಯ ಕಸರತ್ತು ಸಹ ಪ್ರಾರಂಭವಾಗಿದ್ದು, ಜೂನ್ 8 ರಂದು ಪದಗ್ರಹಣ ಸಮಾರಂಭ ನಡೆಯಲಿದೆ ಎಂಬುದು ಗೊತ್ತಾಗಿದೆ.
ಆದರೆ ದೆಹಲಿ ಮೂಲಗಳ ಪ್ರಕಾರ ಕಳೆದ ಹತ್ತು ವರ್ಷಗಳಿಂದ ಒಂದೇ ಒಂದು ಸುದ್ದಿಗೋಷ್ಠಿಯನ್ನು ನಡೆಸದೇ ಎಲ್ಲಾ ವಿಷಯಗಳಿಂದ ತಪ್ಪಿಸಿಕೊಂಡಿದ್ದ ಮೋದಿ, ಈಗ ಹೊಸ ಸರ್ಕಾರದಲ್ಲಿ ಸುದ್ದಿಗೋಷ್ಠಿ ನಡೆಸದೇ ಹೇಗೆ ನಿಭಾಯಿಸುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಎನ್ ಡಿ ಎ ಮೈತ್ರಿಕೂಟದಲ್ಲಿರುವ ಇಬ್ಬರು ಪ್ರಮುಖ ನಾಯಕರಾದ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸುವುದರಲ್ಲಿ ಪರ್ತಕರ್ತರನ್ನು ಎದುರಿಸಿ, ಲೀಲಾಜಾಲವಾಗಿ ಉತ್ತರ ಕೊಡುವುದರಲ್ಲಿ ಬಹಳಷ್ಟು ಪಳಗಿದವರಾಗಿದ್ದಾರೆ. ಆದರೆ ಈ ಇಬ್ಬರೂ ನಾಯಕರು ಪತ್ರಕರ್ತರನ್ನು ಬಹಳ ಲೀಲಾಜಾಲವಾಗಿ ಎದುರಿಸುವಾಗ, ಮೋದಿಜೀ ಏನು ಮಾಡುತ್ತಾರೆ ಎನ್ನುವುದು ಈಗ ಯಕ್ಷ ಪ್ರಶ್ನೆಯಾಗಿದೆ.




