ನಾಗಮಂಗಲ ತಾಲ್ಲೂಕಿನ ದೇವಲಾಪುರ ಪ್ರಾದೇಶಿಕ ವಲಯದ ಎಚ್.ಎನ್. ಕಾವಲ್ ಮೀಸಲು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರವನ್ನು ಕಡಿಯುತ್ತಿದ್ದ ತಮಿಳುನಾಡಿನ ಕೃಷ್ಣಗಿರಿಯ ಶಿವಕುಮಾರ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ನಿನ್ನೆ ಸಂಜೆ ದೇವಲಾಪುರದ ಎಚ್ಎನ್ ಕಾವಲು ಮೀಸಲು ಅರಣ್ಯದ ಬಳಿ ಗಸ್ತು ನಡೆಸುತ್ತಿದ್ದಾಗ ಶಿವಕುಮಾರ್ ಎಂಬ ವ್ಯಕ್ತಿ ಮರ ಕಡಿಯುವುದು ಕಾಣಿಸಿದೆ. ಕೂಡಲೇ
ಅರಣ್ಯಾಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಮರ ಕಡಿಯುತ್ತಿದ್ದ ಶಿವಕುಮಾರನಿಂದ ಮಚ್ಚು ಹಾಗೂ ಕುಡುಗೋಲು ವಶ ಪಡಿಸಿಕೊಂಡಿದ್ದಾರೆ. ವಲಯ ಅರಣ್ಯಾಧಿಕಾರಿ ಸತೀಶ್, ಉಪವಲಯ ಅರಣ್ಯಾಧಿಕಾರಿ ಮಂಜು, ಪ್ರಮೋದ್ ಅರಣ್ಯ ರಕ್ಷಕರಾದ ಸಾಕಯ್ಯ, ರಂಗಸ್ವಾಮಿ, ದಿಲೀಪ್,ಅರಣ್ಯ ವೀಕ್ಷಕರಾದ ಪುಟ್ಟಸ್ವಾಮಿ, ಕೃಷ್ಣ,ಮರಿಗೌಡ,ಬಸವರಾಜು, ಮುಕುಂದ,ಡ್ರೈವರ್ ಮೋಹನ್ ರವರು ಹಾಜರಿದ್ದರು.