Thursday, September 19, 2024

ಪ್ರಾಯೋಗಿಕ ಆವೃತ್ತಿ

ದಕ್ಷಿಣದ ಲಾಬಿಗೆ ಜಯ

ಈಗ ರಚನೆಯಾಗುತ್ತಿರುವ ಸರ್ಕಾರದಲ್ಲಿ ದಕ್ಷಿಣದ ಲಾಬಿ ಗುಜರಾತಿನ ಲಾಬಿ ವಿರುದ್ಧ ಮೇಲುಗೈ ಸಾಧಿಸುವುದು ಶತಸಿದ್ದ.

ಮೋದಿಜೀ ಅವರ ಕಳೆದ ಎರಡು ಸರ್ಕಾರಗಳಲ್ಲು ಸಹ ಗುಜರಾತ್ ಲಾಬಿ ಮೇಲುಗೈ ಪಡೆದಿತ್ತು. ಸರ್ಕಾರದ ಯಾವುದೇ ಯೋಜನೆ ಉದ್ಯಮ, ಗುತ್ತಿಗೆ,‌ ಟೆಂಡರ್ ಎಲ್ಲದರಲ್ಲೂ ಸಹ ಅಂಬಾನಿ ಮತ್ತು ಆದಾನಿ‌ ನೇತೃತ್ವದಲ್ಲಿ ಇರುವ 25 ಕಾರ್ಪೊರೇಟ್ ಹೌಸ್ ಗಳ ಗುಜರಾತಿ ಲಾಬಿ ಮೇಲುಗೈ ಸಾಧಿಸಿತ್ತು. ಈ ಲಾಬಿ ಎಷ್ಟು ಪ್ರಬಲವಾಗಿತ್ತು ಎಂದರೆ ಇವರ ಕಣ್ತಪ್ಪಿಸಿ ದೆಹಲಿ‌ ಸರ್ಕಾರದ ಹೊಸ ವೈನ್ ಸ್ಟೋರ್ ಮತ್ತು ಬಾರ್ ಗಳ ಸ್ಥಾಪನೆಯ ಒಂದು ಸಣ್ಣ ಡೀಲ್ ಮಾಡಲು ಹೋದ ದಕ್ಷಿಣದ ಲಾಬಿ ಅಥವಾ ಸೌತ್ ಲಾಬಿ ಎಂದು‌ ಕರೆಯಲ್ಪಡುವ ಜನರನ್ನು ಗುಜರಾತಿ ಲಾಬಿಯ ಜನ ಇಡಿ ಏಜೆನ್ಸಿಯಿಂದ ಒಬ್ಬೊಬ್ಬರನ್ನೆ ಹಿಡಿದು ಒಳಗೆ ಹಾಕಿ ಬಿಟ್ಟರು. ಅರವಿಂದ ಫಾರ್ಮ್ ನ ಅರವಿಂದ ಹಾದಿಯಾಗಿ ಕವಿತಾ ರೆಡ್ಡಿ,, ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವರು ಜೈಲುಪಾಲಾದರು,.

ದೆಹಲಿ‌ಯ ಅಬಕಾರಿ‌ ಡೀಲ್ ವ್ಯಾಪಾರದ ಜಗತ್ತಿನಲ್ಲಿ‌ ಅತ್ಯಂತ ಸಣ್ಣ ಡೀಲ್ ಆದರೂ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ನೋಡಿ ದಕ್ಷಿಣದ ಲಾಬಿಯ ಉದ್ಯಮಿಗಳು ಬೆಚ್ಚಿ‌ ಹೋದರು. ಇಡೀ ದೇಶವನ್ನು ಗುಜರಾತಿ ಲಾಬಿ ಅವರಿಸಿರುವ ರೀತಿಗೆ ಹೆದರಿಬಿಟ್ಟಿದ್ದರು.

ಆದರೆ 2024 ರ ಚುನಾವಣೆ ದಕ್ಷಿಣದ ಉದ್ಯಮಿಗಳ ಮುಖದಲ್ಲಿ‌ ಸಂತೋಷ ತಂದಿದೆ, ಈಗ ದಕ್ಷಿಣದ ಲಾಬಿಗೆ ರಕ್ಷಣೆ ನೀಡಲು ತೆಲಗು ದೇಶಂ ನಾಯಕ ಚಂದ್ರುಬಾಬು‌ನಾಯ್ಡು ಇದ್ದರೆ, ಗುಜರಾತಿ ಲಾಬಿ ನಡೆಸುವ ದೊಡ್ಡ ದೊಡ್ಡ ಡೀಲ್ ಗಳನ್ನು ನಡೆಸುವಷ್ಟು ಅವರಿಗೆ ಕೌಂಟರ್ ಮಾಡುವಷ್ಟು ದಕ್ಷಿಣದ ಲಾಬಿ ಆರ್ಥಿಕ ಸಮರ್ಥವಾಗಿ ಇಲ್ಲದಿದ್ದರು ಸಣ್ಣ ಪುಟ್ಟ ಹಾಗೂ ಮಧ್ಯಮ ಗಾತ್ರದ ವ್ಯವಹಾರಗಳನ್ನು ಈ ಸರ್ಕಾರದ ಅವಧಿಯಲ್ಲಿ ಗುಜಾರಾತಿ ಲಾಬಿಗೆ ಸರಿಸಮಾನವಾಗಿ ಕೌಂಟರ್ ಕೊಟ್ಟು ಕಿತ್ತುಕೊಳ್ಳುವುದು ಗ್ಯಾರಂಟಿ‌ ಎಂದು ಉದ್ಯಮ ವಲಯದಲ್ಲಿ ಚರ್ಚೆಯಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!