Thursday, September 19, 2024

ಪ್ರಾಯೋಗಿಕ ಆವೃತ್ತಿ

ಕುಮಾರಸ್ವಾಮಿ, ಚಂದ್ರಬಾಬು ನಾಯ್ಡು ಅವರಿಂದ ಇಂಗ್ಲೀಷ್ ಭಾಷಣ

ಕಳೆದ ಮೋದಿ ಸರ್ಕಾರದ ಮೊದಲ ಅವಧಿ ಮತ್ತು ಎರಡನೇ ಅವಧಿಯಲ್ಲಿ ಮೋದಿಜೀ ಅವರಿಗೆ ಸ್ಪಷ್ಟವಾದ ಬಹುಮತವಿದ್ದ ಕಾರಣ ಎಲ್ಲಾ ಕಾರ್ಯಕ್ರಮಗಳಲ್ಲಿ ಮೋದಿಜೀ ಅವರ ಭಾಷಣ ಮಾತ್ರ ಇರುತ್ತಿತ್ತು. ಮೋದಿಜೀ ಅವರು ಕೇವಲ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರು. ಇದು ಹಿಂದಿ ಬೆಲ್ಟಿನ ರಾಜ್ಯಗಳ ಜನರಿಗೆ ಖುಷಿಕೊಟ್ಟರೂ,  ದಕ್ಷಿಣದ ರಾಜ್ಯಗಳ ಜನರಿಗೆ ಹಿಂದಿ ಅರ್ಥ ವಾಗದ ಕಾರಣ ಭಾಷಣದ ಸಾರಾಂಶ ತಿಳಿದು ಖುಷಿ ಪಡಬೇಕಿತ್ತು.

“>

ಇದರ ಜೊತೆಗೆ ಮೋದಿಜೀ ಅವರನ್ನು ಮೆಚ್ಚಿಸಲು ಕೆಲವು ಸಂಸತ್ತಿನ ಸದಸ್ಯರು ಮತ್ತು ಬಿಜೆಪಿ ನಾಯಕರು ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸಿ ನಗೆಪಾಟಲಿಗೆ ಈಡಾಗುತ್ತಿದ್ದ ಘಟನೆಗಳು ಸಹ ನಡೆದಿವೆ.

ಆದರೆ ಮೋದಿ ಸರ್ಕಾರದ ಮೂರನೇ ಅವಧಿಯಲ್ಲಿ, ಎನ್ಡಿಎ ಸರ್ಕಾರ ಇರುವುದರಿಂದ ದಕ್ಷಿಣ ಭಾರತದ ನಾಯಕರುಗಳಾದ ಚಂದ್ರಬಾಬು ನಾಯ್ಡು ಮತ್ತು ಮಾರಸ್ವಾಮಿ ಅವರಿಗೆ ಪ್ರಮುಖ್ಯತೆ ಸಿಗುತ್ತಿದೆ.

ಹಳೇ ಸಂಸತ್ ಭವನದಲ್ಲಿ ನಡೆದ ಎನ್ಡಿಎ ಸಂಸದರ ಸಭೆಯಲ್ಲಿ‌ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಅವರು ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಮಾಡಿ ಮತ್ತೆ ಸರ್ಕಾರದ ಮಟ್ಟದಲ್ಲಿ ಹಿಂದಿಮಯವಾಗಿದ್ದ ವಾತಾವರಣವನ್ನು ತಿಳಿಗೊಳಿಸಿರುತ್ತಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!