Tuesday, November 24, 2026

ಪ್ರಾಯೋಗಿಕ ಆವೃತ್ತಿ

ಯಡಿಯೂರಪ್ಪ ಬಿಜೆಪಿಯಲ್ಲಿ ನಂಬರ್ ಓನ್ !

ರಾಜ್ಯ ಬಿಜೆಪಿ ನಾಯಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಕೆ.ಎಸ್. ಈಶ್ವರಪ್ಪ, ಸಿ.ಟಿ. ರವಿ ಯಾರು ಎಷ್ಟೇ ಕೂಗಾಡಿಕೊಂಡರು, ಪೇಚಾಡಿಕೊಂಡರು ಸಹ ಕರ್ನಾಟಕದ ಬಿಜೆಪಿಗೆ ಯಡಿಯೂರಪ್ಪ ನಂಬರ್ ಓನ್ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.

ಲೋಕಾಸಭಾ ಚುನಾವಣೆಗಳಿಗಿಂತ ಮುಂಚಿತವಾಗಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ವಿಜೇಂದ್ರ ಅವರನ್ನು ಆಯ್ಕೆ ಮಾಡಿಸಿಕೊಂಡರು, ಹೆಚ್ಚು ಕಡಿಮೆ ದೇಶದ ಎಲ್ಲಾ ಕಡೆ ಬಿಜೆಪಿ ಕಳಪೆ ಪ್ರದರ್ಶನ ತೋರಿಸಿರುವಾಗ ಕರ್ನಾಟಕದಲ್ಲಿ 17 ಸೀಟುಗಳ ಗೆಲುವು ತಂದರು.

ಈಗ ತಮ್ಮ ಬಣದ ಶೋಭಾ ಕಾರಂದ್ಲಾಜೆ ಅವರಿಗೆ ಸಚಿವ ಸ್ಥಾನ ಕೊಡಿಸುವುದರಲ್ಲಿ ಸಹ ಸಫಲವಾದರು, ತಮ್ಮ ಮತ್ತೊಬ್ಬ ಮಗ ರಾಘವೇಂದ್ರ ಅವರನ್ನು ಎಂ.ಪಿ ಆಗಿ ಆಯ್ಕೆ ಮಾಡಿಸಿಕೊಂಡರು. ಹೀಗೆ ಒಂದರ ಮೇಲೊಂದು ಯಶಸ್ಸುಗಳ ಮೂಲಕ ತಮ್ಮ ವಿರುದ್ಧ ಬಿಜೆಪಿ ಪಕ್ಷದಲ್ಲಿ ಇರುವ ವಿರೋಧಿಗಳ ಬಾಯಿ ಮುಚ್ಚಿಸಿ, ತಾವು ಬಿಜೆಪಿಯ ನಂಬರ್ ಓನ್ ಎಂದು ರುಜುವಾತುಪಡಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ