Saturday, November 21, 2026

ಪ್ರಾಯೋಗಿಕ ಆವೃತ್ತಿ

ಕೊನೆಗೂ ನಟ ‌ದರ್ಶನ್ ಗೆ ಯಾರು ಬುದ್ದಿ‌ ಹೇಳಲೇ ಇಲ್ಲ !

ಸೂಪರ್ ಸ್ಟಾರ್ ದರ್ಶನ್ ಮನಸ್ಸು ಮಗುವಿನನಂತಹದು,‌ ದರ್ಶನ್ ಕೊಡುಗೈ ದಾನಿ, ದರ್ಶನ್ ಸ್ನೇಹಿತರಿಗಾಗಿ ಏನು ಬೇಕಾದರೂ ಮಾಡುತ್ತಾರೆ, ದರ್ಶನ್ ಎಂದರೆ ಇಂದ್ರ, ದರ್ಶನ್ ಎಂದರೆ ಚಂದ್ರ ಎನ್ನುತ್ತ ಇಡೀ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಅಭಿಮಾನಿಗಳು, ಸ್ನೇಹಿತರು ದರ್ಶನ್ ಎಂಬ ವ್ಯಕ್ತಿಯನ್ನು ಹಾಡಿ ಹೊಗಳಿ,‌ ಅಟ್ಟಕ್ಕೆ ಏರಿಸಿದರೆ ಹೊರತು ಆತನಲ್ಲಿದ್ದ ಧ್ರಾಷ್ಟ್ಯ, ಅಹಂಕಾರ, ಆತನಲ್ಲಿದ್ದ ಸಾಮಾಜಿಕ ವರ್ತನೆಯಲ್ಲಿದ್ದ ಸಮಸ್ಯೆಗಳ ಬಗ್ಗೆ ಯಾರು ಮಾತನಾಡಲೇ ಇಲ್ಲ.

ಮಾತನಾಡಬೇಕಾದವರೂ ಆತನ ಅಭಿಮಾನಿಗಳಿಗೆ ಹೆದರಿ ನಮಗ್ಯಾಕೆ ಬೇಕು ಎಂದು ಸುಮ್ಮನಾಗಿರಬಹುದು, ಒಟ್ಟಿನಲ್ಲಿ ಕಣ್ಣಿನ ಎದುರಿಗೆ ಒಬ್ಬ ನಟ, ಸೂಪರ್ ಸ್ಟಾರ್ ಮಾಡಬಾರದ ಕೆಲಸಗಳನ್ನು‌ ಮಾಡಿ ಸಮಾಜಕ್ಕೆ ಅಭಿಮಾನಿಗಳಿಗೆ ತಪ್ಪು ಸಂದೇಶ ನೀಡುತ್ತಿದ್ದರೂ ಅವನಿಗೆ ಬುದ್ದಿ ಹೇಳುವ, ಅವನ ಸ್ಥಾನಮಾನದ ಬಗ್ಗೆ, ಜವಾಬ್ದಾರಿ ಬಗ್ಗೆ ಬುದ್ದಿ ಹೇಳಬೇಕಾದ, ಸಾಧ್ಯವಾದರೆ ಗದರಿಸಿ‌ ಹೇಳಬೇಕಾದ ವ್ಯಕ್ತಿಗಳು ಇಲ್ಲದೆ ಹೋದದ್ದು ದುರದೃಷ್ಟಕರ ವಿಚಾರ.

ದರ್ಶನ್ ಎಂಬ ನಟನ ಹುಂಬತನ, ದಿನನಿತ್ಯ ಅವನ ರಂಪಾಟಗಳು, ಹೆಣ್ಣು ಮಕ್ಕಳ ಬಗೆಗಿನ ಕೀಳು ಮಟ್ಟದ ಹೇಳಿಕೆ, ಸ್ವಂತ ಹೆಂಡತಿ ಮೇಲೆ ಹಲ್ಲೆ, ದೂರು,‌ ಜೈಲು, ಅಪವಿತ್ರ ಸಂಬಂಧ ಹೊಂದಿದ್ದ ದರ್ಶನ್ ತೀರಾ ಕೊಲೆಯಂತಹ ಕೇಸಿನಲ್ಲಿ ಜೈಲು ಪಾಲಾಗಿರುವುದು ಆಶ್ಚರ್ಯವೇನಲ್ಲ. ತೀರಾ ಹತ್ತಿರದಿಂದ ದರ್ಶನ್ ಅವರನ್ನು ಗಮನಿಸಿದ್ದ ಯಾವುದೇ ವ್ಯಕ್ತಿಯಾದರೂ ಈತನ ವರ್ತನೆಯಿಂದ ಏನಾದರೂ ಸಮಸ್ಯೆ ಮಾಡಿಕೊಳ್ಳಬಹುದು ಅನ್ನಿಸದೆ ಇರುತ್ತಿರಲಿಲ್ಲ. ರಾಜ್ ಕುಮಾರ್ ತರಹದ ಮೇರು‌ ನಟರು ತಮ್ಮ ಸ್ಟಾರ್ ಪಟ್ಟ ಕೇವಲ ಸಿನಿಮಾಗೆ ಮಾತ್ರ ಸೀಮಿತ, ನಿಜ ಜೀವನದಲ್ಲಿ ನಾವು ಸಹ ಸಾಮಾನ್ಯ ಮನುಷ್ಯರು ಎನ್ನುವಂತೆ ಬದುಕಿ ಕನ್ನಡ ನಾಡಿಗೆ ದೇಶಕ್ಕೆ ಕೀರ್ತಿ ತಂದರೆ,‌ ದರ್ಶನ್ ತರಹದವರು ನಾವು ನಿಜ ಜೀವನದಲ್ಲಿ ಸಹ ಸ್ಟಾರ್ ಗಳು ನಾವು ಏನು ಬೇಕಾದರೂ ಮಾಡಬಹುದು, ಏನು ಬೇಕಾದರೂ ಮಾಡಿ ಅರಗಿಸಿಕೊಳ್ಳಬಹುದು ಎಂದು‌ ಕೊಂಡಿರುವವರು.

ಇವರಿಗೆ ಇವನ ಸುತ್ತಮುತ್ತ ತುಂಬಿಕೊಂಡಿರುವ ವಂಧಿ ಮಾಗದರಿಗೆ ತಿಳಿಯದ ವಿಚಾರವೆಂದರೆ ಈ ದೇಶದಲ್ಲಿ ಈಗಲೂ ಕಾನೂನು‌ ಮತ್ತು ಸುವ್ಯವಸ್ಥೆ ಎನ್ನುವ ಒಂದು ಸಿಸ್ಟಮ್ ಇದೆ, ಅದು ಯಾರೇ ತಪ್ಪು ಮಾಡಿದರೂ ಕಾನೂನು ತನ್ನ ಕೆಲಸ ತಾನು ಮಾಡಿ ತಪ್ಪು ಮಾಡಿದವರನ್ನು ಜೈಲಿಗೆ ಕಳಿಸುತ್ತದೆ ಎಂಬುದನ್ನು ಕರ್ನಾಟಕದ ಪೊಲೀಸರು ಮಾಡಿದ್ದಾರೆ. ಆತ ಸ್ಟಾರ್ ನಟ ಎಂಬುದನ್ನು ನೋಡದೇ ದರ್ಶನ್ ನನ್ನು ಕಾನೂನಿನ ವ್ಯಾಪ್ತಿಗೆ ಒಳಪಡಿಸಿರುವುದು ಶ್ಲಾಘನೀಯ ವಿಚಾರ .

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ