ನಾಗೇಗ್ವಡ ಕೆ.ಎಸ್
ಸಮಾನತೆಯ ದೃಸ್ಟಿಯಿಂದ ಒಂದನೇ ತರಗತಿಯಿಂದಲೇ ಇಂಗ್ಲಿಶ್ ಅನ್ನು ಒಂದು ಬಾಶೆಯಾಗಿ ಎಲ್ಲರಿಗೂ ಕಲಿಸಬೇಕು ಅನ್ನುವ ವಿಚಾರದಲ್ಲಿ ನನಗೆ ಯಾವುದೇ ತಕರಾರು ಇಲ್ಲ.
ಇನ್ನೂ ಉಳಿದ ವಿಶಯ ಗಳಾದ ಸಮಾಜ ವಿಜ್ನಾನ, ವಿಜ್ನಾನ ಮತ್ತು ಗಣಿತವನ್ನು ಕನ್ನಡದಲ್ಲಿ ಕಲಿಸಬೇಕೆ ಅತವಾ ಇಂಗ್ಲಿಶ್ ನಲ್ಲಿ ಕಲಿಸಬೇಕೆ ಅನ್ನೋದು ಚರ್ಚೆಯ ವಿಚಾರ.
1. ನಾವೆಲ್ಲರೂ ಸಮಾಜ ವಿಜ್ನಾನ ವನ್ನು ಕನ್ನಡ ಅತವಾ ಇಂಗ್ಲಿಶ್ ಮಾದ್ಯಮದ ಮುಕಾಂತರ ಕಲಿತಿದ್ದೇವೆ. ಒಂದೇ ರೀತಿಯ ಸಮಾಜ ವಿಜ್ನಾನ ಕಲಿತ ನಾವುಗಳು ಇವತ್ತು ವಾಟ್ಸಾಪ್ ಯೂನಿವರ್ಸಿಟಿ ಸಮಾಜ ವಿಜ್ನಾನದ ಬಲಿ ಪಶುಗಳು ಆಗಿದ್ದೇವೆ. ಕನ್ನಡ ಅತವಾ ಇಂಗ್ಲಿಶ್ ನಲ್ಲಿ ಕಲಿತ ನಾವುಗಳು ಸರಿಯಾದ ಸಮಾಜ ವಿಜ್ನಾನದ ತಿಳುವಳಿಕೆ ಬೆಳೆಸಿಕೊಂಡಿದ್ದೇವೆಯೇ ಅನ್ನುವುದನ್ನು ನಮಗೆ ನಾವೇ ಪರೀಕ್ಶಿಸಿಕೊಳ್ಳಬೇಕು. ಶಿಕ್ಶಣ ವ್ಯವಸ್ತೆಯಲ್ಲಿ ಕಾಲದಿಂದಲೂ ಸಮಾಜ ವಿಜ್ನಾನ ಆ ಕಾಲಗಟ್ಟದ ರಾಜಕೀಯಕ್ಕೆ ಒಳಗಾಗುತ್ತಲೇ ಬಂದಿದೆ. ರಾಜಕೀಯ ಪ್ರೇರಿತ ಸಮಾಜ ವಿಜ್ನಾನ ವನ್ನು ಕನ್ನಡ ಅತವಾ ಇಂಗ್ಲಿಶ್ ನಲ್ಲಿ ಕಲಿಸಬೇಕೆ ಅಂತ ತೀರ್ಮಾನ ಮಾಡುವ ಮೊದಲು ಸಮಾಜ ವಿಜ್ನಾನ ವನ್ನು ರಾಜಕೀಯದಿಂದ ಹೊರಗೆ ತರೋದು ಹೇಗೆ ಅಂತ ಅಲೋಚಿಸಬೇಕು.
2. ಇನ್ನು ಪ್ರಾತಮಿಕ ಶಿಕ್ಶಣದ ಗಣಿತ ಏನಿದೆ ಅದು ಹೆಚ್ಚು ಕಮ್ಮಿ Numbers and counting. ಸರ್ಕಾರದ ರಿಪೋರ್ಟ ಗಳ ಪ್ರಕಾರವೇ ಐದನೇ ಕ್ಲಾಸ್ ಮಕ್ಕಳಿಗೆ ಎರಡನೇ ಕ್ಲಾಸ್ ನ ಗಣಿತ ಮತ್ತು ವಿಜ್ನಾನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಬರಲ್ಲ. ಇನ್ನು ಹತ್ತನೇ ತರಗತಿ ಮಕ್ಕಳಿಗೆ ಐದು ಏಳನೇ ಕ್ಲಾಸಿನ ಗಣಿತ ಮತ್ತು ವಿಜ್ನಾನದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಬರಲ್ಲ. ಸಮಸ್ಯೆ ಇರೋದು ಗಣಿತದ ಪರಿಕಲ್ಪನೆಯಾದೆ Counting numbers ನ ಇಂಗ್ಲೀಶ್ ನಲ್ಲಿ ಕಲಿಸುತ್ತಿಲ್ಲ ಅನ್ನುವುದಲ್ಲ.
ನಮ್ಮ ಓದುವಯ್ಯರಿಗೆ(ಟೀಚರ್) counting numbers ನ ಹೇಗೆ ಕಲಿಸಬೇಕು ಅನ್ನೋದು ಗೊತ್ತಿಲ್ಲದೆ ಇರೋದು. ಅದರಲ್ಲೂ ಬಿನ್ನರಾಶಿ ( Fraction numbers) ಅಂಕಗಣಿತ ವನ್ನು ನಮ್ಮ ಮಕ್ಕಳಿಗೆ ಬಹಳ ಅಂದರೆ ಬಹಳ ಕೆಟ್ಟದಾಗಿ ಕಲಿಸುತ್ತಿದ್ದೇವೆ. ನನ್ನ ಮಗಳಿಗೆ ನಾನು Fractions ಕಲಿಸಲು ಸ್ವತಃ ನಾನೇ ಹತ್ತು ಗಂಟೆಗಳಿಗಿಂತ ಜಾಸ್ತಿ ಟೈಮ್ ಓದಿ ಕಲಿತು ಕಲಿಸಿದ್ದೆ.
ಗಣಿತವನ್ನು ಕನ್ನಡ ಮಾಧ್ಯಮದಲ್ಲಿ ಕಲಿಸೋದು ಅಂದರೆ ಏನು…
ಮಕ್ಕಳೇ ಇವತ್ತು ಕೂಡುವುದು ಅಂದರೆ ಏನು ಎಂದು ಕಲಿಯೋಣ…
ಇಂಗ್ಲಿಶ್ ಮಾದ್ಯಮದಲ್ಲಿ ಕಲಿಸೋದು ಅಂದರೆ ಏನು…
Students today we learn about addition…..
ಇಂಗ್ಲಿಶ್ ನಲ್ಲಿ learn about addition ಅಂದ ತಕ್ಶಣ ಯಾವ ಮಗುವು ಕೂಡುವುದನ್ನು ಕಲಿಯಲು ಸಾದ್ಯವಿಲ್ಲ ಏಕೆಂದರೆ ಆ ಮಗುವಿಗೆ Numbers ಅಂದರೆ ಏನು ಅನ್ನುವುದರ ಐಡಿಯಾವನ್ನು ನಮ್ಮ ಓದುವಯ್ಯರು ಕಲಿಸಲ್ಲ. ಇವರು ಏಕೆ ಕಲಿಸಲ್ಲ ಅಂದರೆ ಓದುವಯ್ಯರ ಓದುವಯ್ಯರು ಕಲಿಸಿರಲ್ಲ.
ಇದೇ ಡಿಟ್ಟೊ ಹಣೆಬರಹ ರೇಕಾಗಣಿತದ್ದು, ವಿಜ್ನಾನದ್ದೂ ಕೂಡ. ಇವತ್ತು ಏಸಿಯಾದ ಚೀನಾ, ಮಲೇಶಿಯಾ ಮಕ್ಕಳಿಗೆ ಅಸ್ಟು ಇಸ್ಟು Functional English ಬರುತ್ತೆ, ಆದರೆ ಈ ಮಕ್ಕಳು ಗಣಿತ, ವಿಜ್ನಾನ ವನ್ನು ಹೆಂಗೆ ಕಲಿಯುತ್ತಿದ್ದಾರೆ ಅಂದರೆ ನಮ್ಮ ಮಕ್ಕಳು (ಇಂಗ್ಲಿಶ್ ಮಾದ್ಯಮದಲ್ಲಿ ಓದುವ ಮಕ್ಕಳನ್ನು ಒಳಗೊಂಡು) ಆ ಮಕ್ಕಳ ಮುಂದೆ ಪೆದ್ದರ ತರ ನಿಲ್ಲುತ್ತಾರೆ.
ಆದ್ದರಿಂದ ಕೂಡುವುದು ಬೇಡ… Addition ಇರಲಿ ಅನ್ನುವ ಮೊದಲು ನಮ್ಮ ಮಕ್ಕಳಿಗೆ ಅಂಕಿಗಳು ಅಂದರೆ ಏನು… ಅದನ್ನು ಏಕೆ counting ಮಾಡುತ್ತೇವೆ, ಅದರಲ್ಲೂ fraction ಗಳು ಎಸ್ಟು ವಿಶಿಸ್ಟವಾದ ಅಂಕಿಗಳು… ಇವುಗಳ ಐಡಿಯಾ ಇರಲಿಲ್ಲ ಅಂದಿದ್ದರೆ ನಾವು ಹೇಗೆ counting ಮಾಡೋದು ಕಸ್ಟ ಆಗುತ್ತಿತ್ತು ಅಂತ ಮನವರಿಕೆ ಮಾಡಬೇಕು.
ಈ ರೀತಿಯ ಮನವರಿಕೆ ಮಾಡಬೇಕು ಅಂದರೆ ನಮ್ಮ ಓದುವಯ್ಯರ ಗಣಿತದ ತಿಳುವಳಿಕೆ ಅತ್ಯದ್ಬುತವಾಗಿರಬೇಕಿರುತ್ತೆ. ತಿಳುವಳಿಕೆಯನ್ನು ಕನ್ನಡದಲ್ಲಿ ಮೂಡಿಸೋದು ಸ್ವಲ್ಪ ಸುಲಬ, ಇಂಗ್ಲಿಶ್ ನಲ್ಲಿ ಮೂಡಿಸೋದು ಅತಿ ಬಯಂಕರ ಚಾಲೆಂಜ್. ಆದ್ದರಿಂದ ಬಾಶಾ ಮಾದ್ಯಮ ಬದಲಾದರೆ ಪರಿಕಲ್ಪನೆಗಳ ತಿಳುವಳಿಕೆ ಮೂಡುತ್ತದೆ ಅನ್ನೋದು ನಿಜ ಅಲ್ಲ….




