ಸಂಜು ಆಲಕೆರೆ
ಪಂಚು : ಏನ್ ಮಗಾ ವಾಟ್ಸಪ್ಪ್ ಸ್ಟೇಟಸ್ ತುಂಬ ಘಿಬ್ಲಿ ಎಡಿಟ್ ಅಂತ ಫೋಟೋ ಹಾಕ್ತಿದ್ಯ
ಸಂಚು : ಈಗಾ ಅದೇ ಟ್ರೆಂಡಿಂಗ್ ಕಣೋ ನಿಂದು ಒಂದ್ ಫೋಟೋ ಕಳ್ಸು ಎಡಿಟ್ ಮಾಡಿ ಕೊಡ್ತೀನಿ
ಪಂಚು : ಸೋಷಿಯಲ್ ಮೀಡಿಯಾದಲ್ಲಿ ಎಲ್ಲೂ ಕೂಡಾ ನಿನ್ ಫೋಟೋ ಹಾಕ್ತಿರ್ಲಿಲ್ಲ ಅಲ್ವಾ,
ಸಂಚು : ಹೌದು
ಪಂಚು : ಯಾಕೆ ಅಂತ ಹೇಳಿದಿಕ್ಕೆ ಏನ್ ಹೇಳ್ದೆ ನೀನು

ಸಂಚು : ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ಹಾಕುದ್ರೆ ಮಿಸ್ ಯೂಸ್ ಆಗುತ್ತೆ, ಅಂತ ಹೇಳಿದ್ದೆ..
ಪಂಚು : ಈಗಾ ghibli ಎಡಿಟ್ ಹೇಗ್ ಮಾಡ್ದೇ ನೀನು ಹೇಳು..
ಸಂಚು : ಅಯ್ಯೋ ಅದೊಂದು ದೊಡ್ಡ ಕಥೆ, ಮೂರ್ನಾಲ್ಕು ವೆಬ್ ಸೈಟ್ ವಿಸಿಟ್ ಮಾಡಿ ಫೋಟೋ ಅಪ್ಲೋಡ್ ಮಾಡಿದ್ರು ಪ್ರಯೋಜನ ಆಗ್ಲಿಲ್ಲ, ಕೊನೆಗೆ ಯೂಟ್ಯೂಬ್ ವಿಡಿಯೋ ನೋಡ್ಕೊಂಡು ಒಂದೆರಡು ಅಪ್ಲಿಕೇಶನ್ ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ ಮೇಲೆ ಎಡಿಟ್ ಆಯ್ತು…
ಪಂಚು : ತುಂಬ ಕಷ್ಟ ಬಿದ್ದಿದ್ಯಾ ಅನ್ಸುತ್ತೆ..
ಸಂಚು : ಯಾಕ್ ಕೇಳ್ತಿಯಾ ಎಪ್ಪಾ ತಲೆ ಕೆಟ್ಟೋಗಿತ್ತು..
ಪಂಚು : ಸ್ವಲ್ಪ ತಿಂಗಳು ಅಥವಾ ವರ್ಷಗಳ ಹಿಂದೆ, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡುವ ಮುಂಚೆ ಎಚ್ಚರ ಎಚ್ಚರ, ಅಂತ ನ್ಯೂಸ್ ಬಿತ್ತಿದವರೆಲ್ಲ ಈ ರೀತಿ ಯಾವ್ದೋ ವೆಬ್ ಸೈಟ್ ನಲ್ಲಿ ತಮ್ಮ ತಮ್ಮ ಫೋಟೋ ಅಪ್ಲೋಡ್ ಮಾಡ್ಕೊಂಡು, ಅದರಿಂದ ಬಂದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಬೇರೆಯವರನ್ನು ಕೂಡಾ ಇದೆ ರೀತಿ ಮಾಡಲು ಪ್ರೆರೇಪಿಸುತ್ತಿರುವುದನ್ನು ನೋಡಿದರೆ ಏನ್ ಆಗುತ್ತೋ ಏನೋ…
ಸಂಚು : ಏನು ಆಗಲ್ಲ ಮಣ್ಣು,
ಪಂಚು : ಸಾಮಾಜಿಕ ಜಾಲತಾಣದಲ್ಲಿ ನಾವು ಹಂಚಿಕೊಳ್ಳುವ ಫೋಟೋವನ್ನು, ದುರುಪಯೋಗ ಪಡಿಸಿಕೊಳ್ಳೋವ ಜಾಲಗಳು ಹೆಚ್ಚಾಗಿವೆ, ಜಾಗರೂಕವಾಗಿರಿ ಅಂತ ಎರಡು ವರ್ಷದ ಹಿಂದೆ, ದೊಡ್ಡ ದೊಡ್ಡ ಸುದ್ದಿಯಾಗಿತ್ತು…
ಸಂಚು : ಹೋಗೊ ಏನ್ ಆಗುತ್ತೋ ಮುಂದೆ ನೋಡ್ಕೊಳ್ಳೋಣ, ಸದ್ಯಕ್ಕೆ ಟ್ರೆಂಡಿಂಗ್ ತಕ್ಕಂತೆ ನಾವ್ ಇರ್ಬೇಕು ಅಷ್ಟೇ…
ಪಂಚು : ನಿಮ್ ಟ್ರೆಂಡ್ ನಿಮಗೆ ಒಳ್ಳೇದ್ ಮಾಡ್ಲಿ..




