Thursday, September 19, 2024

ಪ್ರಾಯೋಗಿಕ ಆವೃತ್ತಿ

ನೀಟ್ ಅಗತ್ಯವಿಲ್ಲ, ರದ್ದುಗೊಳಿಸಿ ಎಂದು ಧ್ವನಿಯೆತ್ತಿದ ತಮಿಳು ನಟ ವಿಜಯ್

ನೀಟ್ ವಿರುದ್ಧದ ನಿರ್ಣಯವನ್ನು ಸ್ವಾಗತಿಸುವ ಮೂಲಕ ನಿರ್ಣಯಕ್ಕೆ ಬೆಂಬಲ ಸೂಚಿಸಿದ ತಮಿಳು ನಟ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ “ದೇಶಕ್ಕೆ ನೀಟ್ ಅಗತ್ಯವಿಲ್ಲ, ಅದನ್ನು ರದ್ದುಗೊಳಿಸುವುದೊಂದೇ ಪರಿಹಾರ” ಎಂದು ಹೇಳಿದ್ದಾರೆ.

ತಮಿಳುನಾಡಿನ ಚೆನ್ನೈನಲ್ಲಿ ಟಿವಿಕೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಟ ವಿಜಯ್, “ಜನರು ಈಗ ನೀಟ್ ಪರೀಕ್ಷೆಯಲ್ಲಿದ್ದ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಈಗ ದೇಶಕ್ಕೆ ನೀಟ್ ಅಗತ್ಯವಿಲ್ಲ. ನೀಟ್‌ ಪರೀಕ್ಷೆ ರದ್ದುಗೊಳಿಸುವುದೊಂದೇ ಪರಿಹಾರ” ಎಂದು ಅಭಿಪ್ರಾಯಿಸಿದರು.

“>

 

“ನಾನು ನೀಟ್ ವಿರುದ್ಧದ ನಿರ್ಣಯವನ್ನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇನೆ. ತಮಿಳುನಾಡಿನ ಜನರ ಭಾವನೆಗಳನ್ನು ಗೌರವಿಸುವಂತೆ ನಾನು ಕೇಂದ್ರ ಸರ್ಕಾರವನ್ನೂ ವಿನಂತಿಸುತ್ತೇನೆ” ಎಂದು ಹೇಳಿದರು. ನೀಟ್ ವಿರುದ್ಧ ನಿರ್ಣಯವನ್ನು ತಮಿಳುನಾಡು ಸರ್ಕಾರ ಅಂಗೀಕರಿಸಿದೆ.

“ಮಧ್ಯಂತರ ಪರಿಹಾರವಾಗಿ, ಭಾರತೀಯ ಸಂವಿಧಾನವನ್ನು ‘ವಿಶೇಷ ಸಮಕಾಲೀನ ಪಟ್ಟಿ’ ರಚಿಸಲು ತಿದ್ದುಪಡಿ ಮಾಡಬೇಕು. ಶಿಕ್ಷಣ ಮತ್ತು ಆರೋಗ್ಯವನ್ನು ಅದರ ಅಡಿಯಲ್ಲಿ ಸೇರಿಸಬೇಕು” ಎಂದು ನಟ ವಿಜಯ್ ಅಭಿಪ್ರಾಯಿಸಿದರು.

ನೀಟ್ ಯುಜಿ 2024ರ ಪರೀಕ್ಷೆಯನ್ನು ಸುಮಾರು 23.33 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವಾರು ಅಕ್ರಮಗಳ ಸಂಬಂಧ ಸದ್ಯ ಸಿಬಿಐ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ಮೇ 5ರಂದು ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪದಲ್ಲಿ ತನಿಖಾ ಸಂಸ್ಥೆ ಜೂನ್ 23ರಂದು ಎಫ್‌ಐಆರ್ ದಾಖಲಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!