ಕಾವೇರಿ ನದಿ ಪಾತ್ರದಲ್ಲಿ ಮಳೆ ಮುಂದುವರಿದಿದ್ದು ಕೆ.ಆರ್.ಎಸ್ ನೀರಿನ ಮಟ್ಟ ಬುಧವಾರ ಬೆಳಿಗ್ಗೆ 8 ಗಂಟೆಯ ವೇಳೆಗೆ 98.10 ಅಡಿಗೆ ತಲುಪಿದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 21.357 ಟಿಎಂಸಿ ನೀರು ಸಂಗ್ರಹವಾಗಿದ್ದು, 14,135 ಕ್ಯೂಸೆಕ್ ಒಳ ಹರಿವು ಹರಿದು ಬರುತ್ತಿದೆ. 532 ಕ್ಯೂಸೆಕ್ ಹೊರ ಹರಿವಿದೆ.
ನಿನ್ನೆ ಒಳಹರಿವಿನ ಪ್ರಮಾಣ 8,787 ಕ್ಯೂಸೆಕ್ ದಾಖಲಾಗಿತ್ತು. ಇಂದು ಒಳಹರಿವಿನ ಪ್ರಮಾಣ ಗಣನೀಯ ಹೆಚ್ಚಳ ಕಂಡಿದ್ದು 14,135 ಕ್ಯೂಸೆಕ್ ತಲುಪಿದೆ. ಇದೇ ಪ್ರಮಾಣದ ಒಳಹರಿವಿದ್ದರೆ, ಸದ್ಯದಲ್ಲೇ ನೀರಿನ ಮಟ್ಟವು 100 ಅಡಿ ದಾಟಲಿದೆ.