Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಪೊಲೀಸರ ಕಾರ್ಯಾಚರಣೆ: ನಾಲ್ವರು ಸರಗಳ್ಳರ ಬಂಧನ

ಮಂಡ್ಯ ಉಪ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಸರಗಳ್ಳತನ ಹಾಗೂ ಮನೆಗಳಲ್ಲಿ ಕಳ್ಳತನ ನಡೆಸುತ್ತಿದ್ದ 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮೈಸೂರಿನ ಯರಗನಹಳ್ಳಿ ವಾಸಿ ಮಂಜು ಅಲಿಯಾಸ್ ಬಿಳಿ ಮಂಜ(32), ಮೈಸೂರಿನ ಕುವೆಂಪು ನಗರ ವಾಸಿ ಕಾರ್ತಿಕ್ ಅಲಿಯಾಸ್ ಕೆ.ಕೆ (21), ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ನಿವಾಸಿ ಮಂಜ ಕುಮಾರ್ (43) ಹಾಗೂ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ವಾಸಿ ಜಮಾಲ್ ಸಾಬ್ (30) ಬಂಧಿತ ಆರೋಪಿಗಳು.

ಮಂಡ್ಯ ಉಪವಿಭಾಗದ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಪತ್ತೆ ಬಗ್ಗೆ ಮೇಲೆ ಅಪರ ಪೋಲಿಸ್ ಅಧೀಕ್ಷಕರಾದ ಸಿ.ಇ‌.ತಿಮ್ಮಯ್ಯ ಹಾಗೂ ಮಂಡ್ಯ ಉಪ ವಿಭಾಗದ ಪೋಲಿಸ್ ಉಪ ಅಧೀಕ್ಷಕ ಶಿವಮೂರ್ತಿ.ಜಿ.ಆರ್ ಅವರ ಮಾರ್ಗದರ್ಶನದಲ್ಲಿ ಮಂಡ್ಯ ಗ್ರಾಮಾಂತರ ಠಾಣೆಯ ಶಿವಪ್ರಸಾದ್ ರಾವ್ ರವರ ನೇತೃತ್ವದಲ್ಲಿ, ಮಂಡ್ಯ ಉಪ ವಿಭಾಗದ ಪಿಎಸ್‌ಐಗಳಾದ ಮಹೇಶ್, ಶೇಷಾದ್ರಿ ಕುಮಾರ್, ರವಿಕುಮಾರ್, ಎಎಸ್‌ಐಗಳಾದ ಲಿಂಗರಾಜು, ಚಿಕ್ಕಯ್ಯ ಹಾಗೂ ಸಿಬ್ಬಂದಿಗಳಾದ ಲೋಕೇಶ, ಮಂಜು, ರಾಜೇಂದ್ರ ಅವರಗಳ ತಂಡವನ್ನು ರಚಿಸಲಾಗಿತ್ತು.

ಈ ಪತ್ತೆ ತಂಡವು ತನಿಖೆ ಕೈಗೊಂಡು 4 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳ ಬಂಧನದಿಂದಾಗಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ 7 ಸರಗಳ್ಳತನ ಹಾಗೂ 1 ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ.

ಆರೋಪಿಗಳಿಂದ 14,98,000 ರೂ.ಮೌಲ್ಯದ
ಒಟ್ಟು 304 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿ ಕೊಳ್ಳಲಾಗಿದೆ‌.ಹಾಗೆಯೇ ಕೃತ್ಯ ನಡೆಸಲು ಬಳಸಿದ್ದ ಒಂದು ಬೈಕ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ಮಂಡ್ಯ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವನ್ನು ಮಾನ್ಯ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್ ಶ್ಲಾಘಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!