Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಿವಿಧ ಬೇಡಿಕೆಗಳ ಮುಂದಿಟ್ಟು ಸಂಸದರಿಗೆ ರೈತಸಂಘಟನೆಗಳ ಮನವಿ

ದೇಶದದಲ್ಲಿ ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೂ C2+50% ದರದಲ್ಲಿ ಕಾಯ್ದೆಬದ್ಧ ಕನಿಷ್ಠ ಬೆಂಬಲ ಬೆಲೆ ಮತ್ತು ಸಂಪೂರ್ಣ ಉತ್ಪನ್ನದ ಸಂಗ್ರಹಣೆಯ ಖಾತರಿ, ರೈತರು ಮತ್ತು ಕೃಷಿ ಕಾರ್ಮಿಕರನ್ನು ಸಾಲದ ಶೂಲದಿಂದ, ಆತ್ಮಹತ್ಯೆಗಳಿಂದ ಹಾಗೂ ಸಂಕಷ್ಟ ವಲಸೆಯಿಂದ ರಕ್ಷಿಸಲು ಸಮಗ್ರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾದ ಮೇರೆ ಮಂಡ್ಯದಲ್ಲಿ ವಿವಿಧ ಸಂಘಟನೆಗಳು ಸಂಸದ ಕಚೇರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಭರತ್ ರಾಜ್ ನೇತೃತ್ವದಲ್ಲಿ ಮಂಡ್ಯ ಲೋಕಸಭಾ ಸದಸ್ಯರ ಕಚೇರಿಗೆ ಹಲವು ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.

ವಿದ್ಯುಚ್ಛಕ್ತಿ ವಲಯದ ಖಾಸಗೀಕರಣ ಮತ್ತು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳ ಪ್ರಸ್ತಾಪ ಕೈಬಿಡಬೇಕು. ರಸಗೊಬ್ಬರ, ಬೀಜ, ಕ್ರಿಮಿ/ಕಳೆ ನಾಶಕಗಳು, ವಿದ್ಯುತ್ತು, ನೀರಾವರಿ, ಯಂತ್ರೋಪಕರಣಗಳು, ಬಿಡಿ ಭಾಗಗಳು ಹಾಗೂ ಟ್ರಾಕ್ಟರ್‌ಗಳಂತಹ ಕೃಷಿ ಒಳಸುರಿಗಳ ಮೇಲೆ ಜಿಎಸ್‌ಟಿ ಹಾಕಬಾರದು. ಕೃಷಿ ಒಳಸುರಿಗಳಿಗೆ ಸಬ್ಸಿಡಿ ಪುನಃ ಜಾರಿ ಮಾಡಬೇಕು. ಸರ್ಕಾರಿ ಯೋಜನೆಗಳ ಲಾಭವನ್ನು ಪಾಲು-ಬೆಳೆಗಾರರು ಮತ್ತು ಗೇಣಿದಾರ ರೈತರಿಗೂ ವಿಸ್ತರಿಸಬೇಕು ಮನವಿ ಮಾಡಿದರು.

ಎಲ್ಲಾ ಕೃಷಿ ಮತ್ತು ಪಶುಸಂಗೋಪನೆ ವ್ಯವಸ್ಥೆಗಳಿಗೂ ಸಾರ್ವಜನಿಕ ವಲಯದಲ್ಲಿ ಸಂಪೂರ್ಣ ವಿಮೆ ಸೌಲಭ್ಯ ಕಲ್ಪಿಸಬೇಕು. ಕಾರ್ಪೊರೇಟ್ ಪರವಾದ PMFBY ಸ್ಕೀಂ ಅನ್ನು ರದ್ದುಪಡಿಸಬೇಕು. ಆಹಾರ ಉತ್ಪಾದಕರಾದ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ಹಕ್ಕನ್ನು ಮಾನ್ಯ ಮಾಡಬೇಕು ಹಾಗೂ 60 ವರ್ಷ ವಯಸ್ಸಿನ ನಂತರ ತಿಂಗಳಿಗೆ 10,000 ರೂ. ನೀಡಬೇಕೆಂದು ಒತ್ತಾಯಿಸಿದರು.

ಭೂ ಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ಕಾಯ್ದೆ (LARR ACT) 2013ನ್ನು, ಅದರಲ್ಲಿ ಎರಡು ವರ್ಷಕ್ಕೊಮ್ಮೆ ಸರ್ಕಲ್ ದರವನ್ನು ಪರಿಷ್ಕರಣೆ ಮಾಡುವುದನ್ನು ಕಡ್ಡಾಯಗೊಳಿಸಿ, ಕಾರ್ಯಗತಗೊಳಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ವಲಯದ ಯೋಜನೆಗಳೆರಡಕ್ಕಾಗಿಯೂ ಕಡಿಮೆ ಸರ್ಕಲ್ ದರದಲ್ಲಿ ಸ್ವಾಧೀನಪಡಿಸಿಕೊಂಡ ಎಲ್ಲಾ ಭೂಮಿಗೂ ಪರಿಹಾರ ನೀಡಬೇಕು, ಪರಿಹಾರ ‘ಮತ್ತು ಪುನರ್ವಸತಿಗಳನ್ನು ನೀಡದೆ ಯಾವುದೇ ಭೂ ಸ್ವಾಧೀನ ಮಾಡಕೂಡದು. ಮುಂಚಿತವಾಗಿ ಪುನರ್ವಸತಿ ಕಲ್ಪಿಸದೆ ಯಾವುದೇ ಸ್ಲಂ ಮತ್ತು ಅಂತಹ ವಸತಿ ಪ್ರದೇಶಗಳನ್ನು ನೆಲಸಮ ಮಾಡಬಾರದು. ‘ಬುಲ್‌ಡೋಜರ್ ಆಡಳಿತ’ವನ್ನು ಕೊನೆಗೊಳಿಸಬೇಕು. ಪೂರ್ಣ ಪರಿಹಾರ ನೀಡದೆ ಯಾವುದೇ ಕೃಷಿ ಭೂಮಿಯ ಮೇಲೆ ಹೈ ವೋಲೇಜ್ ವಿದ್ಯುತ್ ಮಾರ್ಗಗಳನ್ನು ಬಲವಂತವಾಗಿ ನಿರ್ಮಿಸಬಾರದು ಎಂದು ಒತ್ತಾಯಿಸಿದರು.

ಅರಣ್ಯ ಹಕ್ಕು ಕಾಯ್ದೆ (FRA) ಮತ್ತು ಪಂಚಾಯತ್ (ಶೆಡ್ಯೂಲ್ಡ್ ಏರಿಯಗಳಿಗೆ ವಿಸ್ತರಣೆ) ಕಾಯ್ದೆ (PESA) ಇವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ರೂಪಿಸಬೇಕು; ಮನುಷ್ಯ ಜೀವಹಾನಿಗೆ 1 ಕೋಟಿ ರೂ. ಹಾಗೂ ಬೆಳೆ ಮತ್ತು ಸಾಕುಪ್ರಾಣಿಗಳ ನಷ್ಟಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!