Friday, September 20, 2024

ಪ್ರಾಯೋಗಿಕ ಆವೃತ್ತಿ

ಕೇರಳ ಭೂಕುಸಿತದಲ್ಲಿ ಕೆ.ಆರ್.ಪೇಟೆ ಮೂಲದ ಇಬ್ಬರೂ ಬಲಿ !

ಮಾಧವ್ ಗಾಡ್ಗೀಳ್ ವರದಿಯನ್ನು ಹುಡುಕಿ ಓದುವ ತುರ್ತು ಬಂದಿದೆ ಅಲ್ಲವೇ…….??…!!…??
ವಯನಾಡು……ಭೀಕರ…..ಮನುಷ್ಯ ತಲ್ಲಣ…. ಈ ದುರಂತದ ಶೋಕದಲ್ಲಿ ಮುಳುಗಿದ ಕೆ.ಆರ್.ಪೇಟೆಯ ಒಂದ ಕುಟುಂಬವು ಸೇರಿದೆ.

ಎಲ್ಲರನ್ನೂ ಬಹಳ ಕಷ್ಟಪಟ್ಟು ಸಾಕಿ ದಡ ಸೇರಿಸಿ ನೆಮ್ಮದಿಯಾಗಿದ್ದ ಕಾಲದಲ್ಲಿ ಭೀಕರವಾಗಿ ಸಾವನ್ನಪ್ಪಿದ ಲೀಲಾವತಿ ಮತ್ತು ಚಿಗುರೊಡಿಯುವ ಮುನ್ನವೇ ಜವರಾಯನ ಮುಡಿ ಸೇರಿದ ಮುದ್ದು ಕಂದ ನಿಹಾಲ್ ನಿಗೆ ನಮನಗಳು!

ಕಳೆದ ಮೂವತ್ತು ವರ್ಷಗಳ ಹಿಂದೆ ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ಹೆಣ್ಣು ಮಗಳಾದ ಲೀಲಾವತಿರವರನ್ನು ನಂಜನಗೂಡಿನ ಸರಗೂರಿನ ದೇವರಾಜು ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ನಂತರ ಅವರು ಕೆಲಸ ಹುಡುಕಿಕೊಂಡು ಕೇರಳಕ್ಕೆ ವಲಸೆ ಹೋಗಿ ವಯನಾಡಿನ ಹಳ್ಳಿಯೊಂದರಲ್ಲಿ ವಾಸವಾಗಿದ್ದರು. ಇವರಿಗೆ ಅನಿಲ್ ಮತ್ತು ಸಂತೋಷ್ ಇಬ್ಬರು ಗಂಡು ಮಕ್ಕಳು ಹಾಗೂ ಮಂಜುಳಾ ಎಂಬ ಒಬ್ಬಳು ಹೆಣ್ಣು ಮಗಳು ಇದ್ದಾರೆ. ಮಂಜುಳರವರನ್ನು ಕೆ.ಆರ್.ಪೇಟೆಗೆ ಮದುವೆ ಮಾಡಿಕೊಟ್ಟು ಅವರು ಕೆ.ಆರ್.ಪೇಟೆಯ ಶತಮಾನದ ಶಾಲೆಯ ಮಕ್ಕಳ ಮನೆ ವಿಭಾಗದಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಅಲ್ಲದೆ ಅವರ ಇಬ್ಬರು ಗಂಡು ಮಕ್ಕಳೂ ಕೂಡ ನಮ್ಮ ಕೆ.ಆರ್.ಪೇಟೆಯ ಹೆಣ್ಣು ಮಕ್ಕಳುಗಳನ್ನೇ ಮದುವೆ ಆಗಿದ್ದರು. ಅವರ ಮಗನಾದ ಅನಿಲ್ ಗೆ ಕತ್ತರಘಟ್ಟ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಕುಳ್ಳಮ್ಮ- ಜಗದೀಶರವರ ಮಗಳಾದ ಝಾನ್ಸಿರಾಣಿ ಮದುವೆ ಮಾಡಿ ಕೊಡಲಾಗಿತ್ತು…. ಇದೇ ದಂಪತಿಗೆ  ಎರಡೂವರೆ ವರ್ಷದ ನಿಹಾಲ್ ಎಂಬ ಮುದ್ದಾದ ಮಗನಿದ್ದ. ಅನಿಲ್ ಸೌದಿ ಆರೆಬೀಯಾ ದೇಶದಲ್ಲಿ ಉದ್ಯೋಗ ಮಾಡುತ್ತಿದ್ದು, ಇತ್ತೀಚಿಗೆ ರಜೆಯ ನಿಮಿತ್ತ ಊರಿಗೆ ಬಂದಿದ್ದ. ಇವರ ಕುಟುಂಬ ಮೊನ್ನೆಯೇ ಅಂದರೆ ದುರಂತ ಸಂಭವಿಸಿದ ದಿನವೇ ಕತ್ತರಘಟ್ಟಕ್ಕೆ ಹೊರಟಿದ್ದರು, ಆದರೆ ವಿಪರೀತ ಮಳೆಯ ಕಾರಣ ಒಂದು ದಿನ ಮುಂದೂಡಿ ಮಲಗಿದ್ದರು.

ಇನ್ನೂ ಮುಂದಿನದು ನಮಗೆಲ್ಲಾ ಈಗ ತಿಳಿದಿದೆ……ಮೊನ್ನೆ ಮದ್ಯರಾತ್ರಿ ಸಂಭವಿಸಿದ ಭೀಕರ ಭೂಕುಸಿತವಾದಾಗ ಅಪ್ಪ ದೇವರಾಜು, ಅಮ್ಮ ಲೀಲಾವತಿ, ಮಗ ಅನಿಲ್, ಸೊಸೆ ಝಾನ್ಸಿರಾಣಿ ಹಾಗೂ ಮೊಮ್ಮಗ ನಿಹಾಲ್ ಗಾಢವಾದ ನಿದ್ರೆಯಲ್ಲಿದ್ದರು. ಇದ್ದಕ್ಕಿದ್ದಂತೆ ಕಿರುಚಾಟದ ಶಬ್ದ ಕೇಳಿಸಿದಾಗ ಅಪ್ಪ ದೇವರಾಜು ಎದ್ದಿದ್ದಾರೆ. ತಕ್ಷಣವೇ ತಾವು ಮಲಗಿದ್ದ ಮನೆಯೇ ಕುಸಿದು ಜಾರಲು ಪ್ರಾರಂಭಿಸಿದೆ. ತಕ್ಷಣವೇ ದೇವರಾಜು ಎಲ್ಲರನ್ನು ಎಬ್ಬಿಸುವ ಪ್ರಯತ್ನ ಮಾಡಿದರೂ ಸಹ ಕೆಲವೇ ಕ್ಷಣಗಳಲ್ಲಿ ಎಲ್ಲರೂ ಕಣ್ಮರೆ ಆಗಿದ್ದಾರೆ. (ಅವರ ಮೊತ್ತೊಬ್ಬ ಪುತ್ರನಾದ ಸಂತೋಷ್ ಮೂರು ದಿನಗಳ ಹಿಂದೆ ನಮ್ಮೂರಿನ ಅಜ್ಜಿಯ ಮನೆಗೆ ಬಂದಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾನೆ)

ಝಾನ್ಸಿರಾಣಿಯೂ ಸಹ ಮಗವನ್ನು ಎತ್ತಿಕೊಂಡು ಮನೆಯಿಂದ ಹೊರಕ್ಕೆ ಓಡುವ ಸಂದರ್ಭದಲ್ಲಿ ಅವಳ ಮೇಲೆ ಗೋಡೆ ಬಿದ್ದಿದೆ…..ನಂತರ ಅವಳಿಗೆ ಏನಾಯ್ತೋ ಗೊತ್ತಿಲ್ಲದಂತೆ ಆಗಿದೆ……ನಂತರ ಅವಳನ್ನು ಯಾರೋ ರಕ್ಷಣೆ ಮಾಡಿದ್ದಾರೆ…..ನೀರಿನಲ್ಲಿ ತೇಲಿ ಹೋಗುತ್ತಿದ್ದ ಅನಿಲ್ ನ್ನು ಸಹ ಯಾರೋ ರಕ್ಷಣೆ ಮಾಡಿದ್ದಾರೆ….. ಆದರೆ ಅವರ ಅಮ್ಮ ಲೀಲಾವತಿ ಹಾಗೂ ಮೊಮ್ಮಗ ನಿಹಾಲ್ ನಾಪತ್ತೆಯಾಗಿದ್ದಾರೆ…… ನಿನ್ನೆ ಬೆಳಿಗ್ಗಿನ ಜಾವ ಕಾರ್ಯಾಚರಣೆಗೆ ಬಂದ ರಕ್ಷಣಾ ಪಡೆ ಬದುಕುಳಿದಿದ್ದವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ನಾಪತ್ತೆಯಾದವರ ಪತ್ತೆ ಹೆಲಿಕಾಪ್ಟರ್ ಗಳ ಮೂಲಕ ತೀವ್ರವಾಗಿ ಪ್ರಯತ್ನಿಸಿದ ಕಾರಣ ನಿನ್ನೆ ಸಂಜೆ ಮಣ್ಣಿನಲ್ಲಿ ಊತಿಹೋಗಿದ್ದ ಲೀಲಾವತಿರವರ ದೇಹವನ್ನು ಹಾಗೂ ಪೊದೆಯಲ್ಲಿ ಸಿಲುಕಿ ಪ್ರಾಣ ಬಿಟ್ಟಿರುವ ಮುದ್ದಾದ ಮಗು ನಿಹಾಲ್ ಮೃತ ದೇಹ ಪತ್ತೆಯಾಗಿದೆ……

ಬದುಕುಳಿದವರು ಸಹ ಇವರಿಬ್ಬರ ಸಾವಿಗೆ ಶಾಕ್ ಆಗಿದ್ದಾರೆ…… ಎಲ್ಲರನ್ನೂ ಬಹಳ ಕಷ್ಟಪಟ್ಟು ಸಾಕಿ ದಡ ಸೇರಿಸಿ ನೆಮ್ಮದಿಯಾಗಿದ್ದ ಕಾಲದಲ್ಲಿ ಬೀಕರವಾಗಿ ಸಾವನ್ನಪ್ಪಿದ ಲೀಲಾವತಿ ಮತ್ತು ಚಿಗುರೊಡಿಯುವ ಮುನ್ನವೇ ಜವರಾಯನ ಮುಡಿ ಸೇರಿದ ಮುದ್ದು ಕಂದ ನಿಹಾಲ್ ನಿಗೆ ನಮನಗಳು!

ಈ ದುರಂತಕ್ಕೆ ಕಾರಣ ನಮಗೆಲ್ಲಾ ಗೊತ್ತೆಯಿದೆ ಆದರೂ ಸಹ….. ಈಗಲಾದರೂ ನಾವು ಮಾಧವ್ ಗಾಡ್ಗೀಳ್ ರವರ ವರದಿಯನ್ನು ಓದಬೇಕಿದೆ…….

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!