Friday, September 20, 2024

ಪ್ರಾಯೋಗಿಕ ಆವೃತ್ತಿ

ವಯನಾಡು ಭೂಕುಸಿತ| ಸಾವು ನೋವಿಗೆ ಸಿಲುಕಿನ ಕೆ.ಆರ್.ಪೇಟೆಯ ಕುಟುಂಬ

ಕೇರಳದ ವಯನಾಡಿನ ಭೂಕುಸಿತದಲ್ಲಿ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಕುಟುಂಬವೊಂದು ಸಿಲುಕಿಕೊಂಡಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದು, ಮೂವರು ಅಪಾಯಕ್ಕೆ ಸಿಲುಕಿದ್ದಾರೆ.

ಕತ್ತರಘಟ್ಟ ಗ್ರಾಮದ ಜಗದೀಶ್ ಮತ್ತು ಕುಳ್ಳಮ್ಮ ದಂಪತಿ ಪುತ್ರಿ ಝಾನ್ಸಿರಾಣಿ, ಅಳಿಯ ಅನಿಲ್‌ಕುಮಾರ್, ಈತನ ತಂದೆ ದೇವರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.  ದುರಂತದಲ್ಲಿ ಮೊಮ್ಮಗ ನಿಹಾಲ್(3), ಅನಿಲ್‌ಕುಮಾರ್ ತಾಯಿ ಲೀಲಾವತಿ(55) ಸಾವಿಗೀಡಾಗಿದ್ದಾರೆ.

ನಂಜನಗೂಡು ತಾಲೂಕಿನ ಸರಗೂರು ಗ್ರಾಮದ ಅನಿಲ್‌ಕುಮಾರ್ ಎಂಬುವರಿಗೆ 2020ರಲ್ಲಿ ಝಾನ್ಸಿರಾಣಿಯನ್ನು ವಿವಾಹ ಮಾಡಿಕೊಡಲಾಗಿತ್ತು. ಅವರ ಕುಟುಂಬ ಹಲವು ವರ್ಷಗಳಿಂದ ಕೇರಳದ ಮುಂಡಕಾಯಿ ಗ್ರಾಮದಲ್ಲಿ ಬದುಕು ಕಟ್ಟಿಕೊಂಡಿದ್ದರು. ಅನಿಲ್‌ಕುಮಾರ್ ಜೀಪ್ ಚಾಲಕ ವೃತ್ತಿ ಮಾಡುತ್ತಿದ್ದರು. ಮುಂಡಕಾಯಿ ಗ್ರಾಮದಲ್ಲಿ ಸೋಮವಾರ ರಾತ್ರಿ ಭೂಕುಸಿತದಲ್ಲಿ ಕುಟುಂಬ ಸದಸ್ಯರು ಸಿಲುಕಿಕೊಂಡಿದ್ದರು. ಮಗಳು, ಅಳಿಯ, ಅಳಿಯನ ತಂದೆಯನ್ನು ಕಾರ್ಯಾಚರಣೆ ಮಾಡಿ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಇತ್ತ ಮೊಮ್ಮಗ, ಅಳಿಯನ ತಾಯಿ ಭೂಕುಸಿತದಿಂದ ಸಾವನ್ನಪ್ಪಿದ್ದಾರೆ. ಮಗಳ ಕುಟುಂಬದಲ್ಲಿ ಎದುರಾಗಿರುವ ಅವಘಡಕ್ಕೆ ತಂದೆ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ‌. ಕತ್ತರಘಟ್ಟ ಗ್ರಾಮದಲ್ಲಿ ಮೌನ ಆವರಿಸಿದೆ.  ಕುಟುಂಬದ ಸದಸ್ಯರು ಮಗಳು ಮತ್ತವರ ಕುಟುಂಬದ ರಕ್ಷಣೆಗೆಂದು ಕೇರಳಕ್ಕೆ ತೆರಳಿದ್ದಾರೆ. ಕತ್ತರಘಟ್ಟ ಗ್ರಾಮಕೆ, ಕೆ.ಆರ್.ಪೇಟೆ ಶಾಸಕ ಎಚ್ ಟಿ ಮಂಜುನಾಥ್ ಭೇಟಿ ನೀಡಿ ಸಾಂತ್ವನ ಹೇಳಿದ್ದು, ಮೃತದೇಹವನ್ನು ತರಲು ಇಲಾಖೆ ಅಧಿಕಾರಿಗಳೊಂದಿಗೆ ತಿಳಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ನಿಸರ್ಗ ಪ್ರಿಯ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!