Friday, November 20, 2026

ಪ್ರಾಯೋಗಿಕ ಆವೃತ್ತಿ

ನಾಡಿಗೆ ನಾಲ್ವಡಿಯವರ ಕೊಡುಗೆ ಸಾರ್ವಕಾಲಿಕ: ಶಿವರಾಮೇಗೌಡ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯ ನೆನಪು ಸರ್ವಕಾಲಿಕ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮೇಗೌಡ ಹೇಳಿದರು.

ಮಂಡ್ಯ ನಗರದ ಪೊಲೀಸ್ ಕಾಲೋನಿಯ ಸರ್ಕಾರಿ ಕಾಲೇಜು ಮತ್ತು ಪೌಢಶಾಲೆ ಆವರಣದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನಚರಿತ್ರೆ, ಕೊಡುಗೆ, ಸಾಧನೆಗಳನ್ನು ಓದಿಕೊಳ್ಳಬೇಕು, ಸದಾ ಸ್ಮರಿಸಿಕೊಳ್ಳುವಂತಹ ದೂರದೃಷ್ಠಿತ್ವದ ಸೇವಾ ಕೊಡುಗೆಗಳು ಅಜರಾಮರವಾಗಿವೆ ಎಂದು ನುಡಿದರು.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು 1915 ರಲ್ಲಿ ಸ್ಥಾಪನೆ ಮಾಡುವ ಮೂಲಕ ಕನ್ನಡ ನಾಡು-ನುಡಿ ಹಾಗೂ ನೆಲ-ಜಲ ಮತ್ತು ಕನ್ನಡ ನಾಡಿನ ಪರಂಪರೆ, ಸಾಹಿತ್ಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದವರು ಎಂದು ಸ್ಮರಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಅಂದಿನ ಕಾಲದಲ್ಲಿಯೇ ಉದ್ಯೋಗದಲ್ಲಿ ಮೀಸಲಾತಿ, ಎಲ್ಲಾ ವರ್ಗದ ಮಕ್ಕಳಿಗೂ ಶಿಕ್ಷಣ ಹಕ್ಕು, ಮೂಲಭೂತ ಅಗತ್ಯಗಳಿಗೆ ಆದ್ಯತೆ, ಆಸ್ಪತ್ರೆಗಳು, ಗ್ರಾಮೀಣಾಭಿವೃದ್ಧಿ, ರಸ್ತೆಯ ಎಡಬಲ ವಿದ್ಯುತ್ ದೀಪ ಹೀಗೆ ನೂರಾರು ಕೊಡುಗೆಗಳನ್ನು ನೀಡಿದ ರಾಜಶ್ರೀ ನಾಲ್ವಡಿ ಅವರನ್ನು ಮರೆಯೋದುಂಟೆ ಎಂದು ಸ್ಮರಿಸಿದರು.

ಮಂಡ್ಯ ಜಿಲ್ಲೆಯ ಅಭಿವೃದ್ದಿ ಮತ್ತು ರೈತರ ಅಭ್ಯುಧಯಕ್ಕೆ ಕನ್ನಂಬಾಡಿ ಕಟ್ಟೆ ಕಟ್ಟಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಮತ್ತು ಸಾಧನೆ ಕನ್ನಡಿಗರಿಗೆ ಸ್ಫೂತಿಯಾಗಿದೆ. ಅವರು ನೀರಾವರಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ಬ್ಯಾಂಕ್, ರಸ್ತೆ ಮತ್ತು ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ನಾಡಿನ ವಿವಿಧ ಕ್ಷೇತ್ರದಲ್ಲಿ ಗಣನೀಯವಾದ ಸೇವೆ ಮಾಡಿ ಲೋಕಮಾನ್ಯರಾಗಿದ್ದಾರೆ. ಕನ್ನಡಿಗರ ಮಹಾರಾಜರಾಗಿದ್ದ ಇವರು ಸರ್ವಧರ್ಮ ಸಹಿಷ್ಣುತೆ ಪಾಲನೆ ಮಾಡುವ ಮೂಲಕ ಕನ್ನಡ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಲೋಕ ಶ್ರೀಮಂತಗೊಳಿಸಿದದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಇತಿಹಾಸ ತಜ್ಞ ಡಾ.ಲಿಂಗರಾಜು, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು, ಪತ್ರಕರ್ತ ನವೀನ್‌ ಚಿಕ್ಕಮಂಡ್ಯ, ಪ್ರಾಂಶುಪಾಲ ಲಿಂಗೇಗೌಡ, ಮುಖ್ಯೋಪದ್ಯಾಯನಿ ಶಬಾನ, ನೆಲದನಿ ಬಳಗ ಅಧ್ಯಕ್ಷ ಮಂಗಲ ಲಂಕೇಶ್, ಚಿತ್ರ ನಿರ್ದೇಶಕ ಅಭಿಗೌಡ ಸೇರಿದಂತೆ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ