Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರ: ಮುಜಿಬುರ್ ರೆಹಮಾನ್ ಪ್ರತಿಮೆ ಧ್ವಂಸ

ಬಾಂಗ್ಲಾದಲ್ಲಿನ ಅಶಾಂತಿ ಉಲ್ಬಣದಲ್ಲಿ, ನೂರಾರು ಪ್ರತಿಭಟನಾಕಾರರು ಸೋಮವಾರ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದರು, ದೇಶದ ರಾಜಧಾನಿ ಢಾಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಪ್ರತಿಭಟನಾಕಾರರು ಬಾಂಗ್ಲಾದೇಶದ ಗೌರವಾನ್ವಿತ ವ್ಯಕ್ತಿ, ಶೇಖ್ ಹಸೀನಾ ಅವರ ತಂದೆ ಮತ್ತು ರಾಷ್ಟ್ರದ ಸಂಸ್ಥಾಪಕ ನಾಯಕ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದರು. ಪ್ರತಿಮೆಯ ತಲೆಯ ಮೇಲೆ ಕೊಡಲಿಯಿಂದ ಜಖಂಗೊಳಿಸಲು ಪ್ರಯತ್ನ ನಡೆಸುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಾಂಗ್ಲಾದೇಶದಲ್ಲಿ ಹದಗೆಟ್ಟ ರಾಜಕೀಯ ಪರಿಸ್ಥಿತಿಯನ್ನು ಉಲ್ಲೇಖಿಸಿ ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ಕೆಲವೇ ದಿನಗಳಲ್ಲಿ ಅಶಾಂತಿ ಭುಗಿಲೆದ್ದಿತು. ಆಕೆಯ ಹಠಾತ್ ನಿರ್ಗಮನವು ದೇಶವನ್ನು ಪ್ರಕ್ಷುಬ್ಧಗೊಳಿಸಿದೆ, ವ್ಯಾಪಕ ಪ್ರತಿಭಟನೆಗಳು ಮತ್ತು ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆದಿವೆ.

ಸಹೋದರಿಯೊಂದಿಗೆ ದೇಶ ತೊರೆದ ಶೇಖ್ ಹಸೀನಾ

ಶೇಖ್ ಹಸೀನಾ ಮತ್ತು ಆಕೆಯ ಸಹೋದರಿ ಶೇಖ್ ರೆಹಾನಾ ಅವರು ಅಜ್ಞಾತ ಸ್ಥಳಕ್ಕಾಗಿ ಢಾಕಾದಿಂದ ಪಲಾಯನ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್, ಫ್ಲೈಟ್ ರಾಡಾರ್ ಬಾಂಗ್ಲಾದೇಶದ ವಾಯುಪಡೆಯ ವಿಮಾನ ಬಾಂಗ್ಲಾದೇಶದಿಂದ ಹೊರಟು ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿದೆ ಎಂದು ವರದಿ ಮಾಡಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಈ ವಿಮಾನದಲ್ಲಿದ್ದರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

“>

 

ಧನ್ಮಂಡಿಯಲ್ಲಿರುವ ಅವಾಮಿ ಲೀಗ್ ಅಧ್ಯಕ್ಷ ಶೇಖ್ ಹಸೀನಾ ಅವರ ಕಚೇರಿಗೂ ಚಳವಳಿಗಾರರು ಬೆಂಕಿ ಹಚ್ಚಿದರು. ಶೇಖ್ ಹಸೀನಾ ರಾಜೀನಾಮೆ ಸುದ್ದಿ ಕೇಳಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸುತ್ತಿದ್ದರು.

ಶಾಂತವಾಗಿರುವಂತೆ ಸೇನಾ ಮುಖ್ಯಸ್ಥರ ಮನವಿ

ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಜ್-ಝಮಾನ್ ದೂರದರ್ಶನದ ಭಾಷಣದಲ್ಲಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶವನ್ನು ತೊರೆದಿದ್ದಾರೆ ಎಂದು ದೃಢಪಡಿಸಿದರು. ರಾಷ್ಟ್ರೀಯ ಭಾಷಣದಲ್ಲಿ ಜಮಾನ್ ಪ್ರತಿಭಟನಾಕಾರರಿಗೆ ಶಾಂತವಾಗಿರಲು ಮತ್ತು ಮನೆಗೆ ಮರಳಲು ಮನವಿ ಮಾಡಿದರು. ಹಿಂಸಾಚಾರವನ್ನು ಕೊನೆಗೊಳಿಸುವಂತೆ ನಾಗರಿಕರನ್ನು ಒತ್ತಾಯಿಸಿದರು. ಕರ್ಫ್ಯೂ ಅಥವಾ ತುರ್ತು ಕ್ರಮಗಳ ಅಗತ್ಯವಿಲ್ಲ ಎಂದು ಹೇಳಿದರು.

“>

 

“ಇದೀಗ ರಾಜಕೀಯ ಸ್ಥಿತ್ಯಂತರ ಕಾಲ ನಡೆಯುತ್ತಿದ್ದು, ಮಧ್ಯಂತರ ಸರ್ಕಾರ ರಚನೆಯಾಗಲಿದೆ” ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ. “ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ, ನೀವು ನನ್ನ ಮೇಲೆ ನಂಬಿಕೆ ಇಡಿ, ಜೊತೆಯಾಗಿ ಕೆಲಸ ಮಾಡೋಣ. ದಯವಿಟ್ಟು ಸಹಾಯ ಮಾಡಿ, ಹೋರಾಟದಿಂದ ನಮಗೆ ಏನೂ ಸಿಗುವುದಿಲ್ಲ. ಸಂಘರ್ಷ ತಪ್ಪಿಸಿ, ನಾವೆಲ್ಲರೂ ಸೇರಿ ಸುಂದರ ದೇಶವನ್ನು ಕಟ್ಟಿದ್ದೇವೆ” ಎಂದರು.

ಅಶಾಂತಿಗೆ ಕಾರಣವೇನು?

ನಿರಾಶೆಗೊಂಡ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗಗಳಿಗೆ ಕೋಟಾ ವ್ಯವಸ್ಥೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳು ಶಾಂತಿಯುತವಾಗಿ ಪ್ರಾರಂಭವಾದವು. ಆದರೆ, ಈ ಹೋರಾಟಗಳು ಹಸೀನಾ ಮತ್ತು ಅವರ ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ವಿರುದ್ಧದ ದಂಗೆಯಾಗಿ ಮಾರ್ಪಟ್ಟಿವೆ. ಇತ್ತೀಚಿನ ವಾರಗಳಲ್ಲಿ ಕನಿಷ್ಠ 11,000 ಜನರನ್ನು ಬಂಧಿಸಲಾಗಿದೆ. ಅಶಾಂತಿಯು ದೇಶಾದ್ಯಂತ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ಮುಚ್ಚುವುದಕ್ಕೆ ಕಾರಣವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!