Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಗಾಂಜಾ ವಶ ಮಾರಾಟ ಮಾಡುತ್ತಿದ್ದ ಮಹಿಳೆ ಬಂಧನ; 1.90 ಕೆ.ಜಿ ಗಾಂಜಾ ವಶ

ಮಳವಳ್ಳಿ ಪಟ್ಟಣದ ಮಡಿವಾಳರ ಬೀದಿಯ ಮನೆಯೊಂದರ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿದ ಪಟ್ಟಣದ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿ ಸುಮಾರು 1.90 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕೋಟೆ ಮಡಿವಾಳರ ಬೀದಿಯ ಲಕ್ಷ್ಮಿ(58) ಬಂಧಿತ ಮಹಿಳೆ. ಮನೆಯಲ್ಲಿ ಗಾಂಜಾ ಮಾರಾಟದ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ವಿ.ಕೃಷ್ಣಪ್ಪ ಹಾಗೂ ಸಿಪಿಐ ಎಂ.ರವಿಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿದ ಪೊಲೀಸರು ಮಹಿಳೆಯನ್ನು ಬಂಧಿಸಿ ಮನೆಯ ಅಡುಗೆ ಕೋಣೆಯಲ್ಲಿದ್ದ 1 ಕೆ.ಜಿ.870 ಗ್ರಾಂ.ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ಜಯಲಕ್ಷ್ಮಮ್ಮ, ಎಎಸ್ಐ ಸುರೇಶ್, ಸಿಬ್ಬಂದಿಗಳಾದ ಹರ್ಷವರ್ಧನ್, ಮನೋಜ್, ಹರ್ಷವರ್ಧನ್, ಪ್ರಕಾಶ್, ಮಾದೇಶ್, ಮಧು ಇದ್ದರು.

ಈ ಸಂಬಂಧ ಮಳವಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!