Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಮಹದೇಶ್ವರ ಮಹಾದ್ವಾರ ಹೆಬ್ಬಾಗಿಲು ಲೋಕಾರ್ಪಣೆ

ನಾಗಮಂಗಲ ತಾಲೂಕಿನ ತೊಂಡಹಳ್ಳಿ ಬಂಗಲೆ ಗ್ರಾಮದ ಶ್ರೀಮಾದೇಶ್ವರ ಸ್ವಾಮಿ ಮಹಾದ್ವಾರ ಹೆಬ್ಬಾಗಿಲನ್ನು ಗೌರಮ್ಮ ಶಿವನಂಜೇಗೌಡರವರ ಪುತ್ರ ಪ್ರಕಾಶಗೌಡ ಟಿ ಎಸ್ ಹಾಗೂ ಕದಬಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪ್ರಿಯಾಪ್ರಕಾಶ್ ಗೌಡ ನಿರ್ಮಾಣ ಮಾಡಿಸಿದ್ದು ಇಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಮತ್ತು ಮಾಜಿ ಸಂಸದ ಶಿವರಾಮೇಗೌಡ ಲೋಕಾರ್ಪಣೆ ಮಾಡಿದರು.

ಮಹದೇಶ್ವರ ಸ್ವಾಮಿ ಮಹಾದ್ವಾರವನ್ನು ಉದ್ಘಾಟನೆ ಮಾಡಿ ವೇದಿಕೆ ಕಾರ್ಯಕ್ರಮವನ್ನು ಗಣ್ಯರೊಂದಿಗೆ ಉದ್ಘಾಟನೆ ಮಾಡಲಾಯಿತು.

ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿ, ಆತ್ಮೀಯನಾದ ಪ್ರಕಾಶ್ ಗೌಡ, ನನ್ನ ಹಳೆಯ ಸ್ನೇಹಿತರು. ಗ್ರಾಮಕ್ಕೆ ಒಂದು ದೇವರ ಹೆಬ್ಬಾಗಿಲು ಮಹಾದ್ವಾರ ನಿರ್ಮಾಣ ಮಾಡಿರುವುದು ಸಂತಸ ತರುತ್ತದೆ, ಅವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಮಾತನಾಡಿ, ಇತ್ತೀಚಿನ ದಿನದಲ್ಲಿ ಗ್ರಾಮವನ್ನು ತೊರೆದು ಬೇರೆ ನಗರಗಳಲ್ಲಿ ವಾಸಿಸುತ್ತಿರುವ ಹಳ್ಳಿಗರು, ತಮ್ಮ ಗ್ರಾಮದತ್ತ ಮುಖ ಮಾಡುವುದೇ ಮರೆತಿದ್ದಾರೆ, ಇದು ತಪ್ಪು ನಮ್ಮ ಸ್ವಂತ ಬೇರು ಜೀವನಾಡಿ ಇರುವುದು ನಾವು ಹುಟ್ಟಿ ಬೆಳೆದಂತ ಗ್ರಾಮಗಳಲ್ಲೇ, ನಾವು ನಮ್ಮ ಕುಟುಂಬ ನಮ್ಮ ಗ್ರಾಮ ಎಂಬ ಅಭಿಮಾನವನ್ನು ತೋರ್ಪಡಿಕೆ ಗಿಂತ ಅಂತರಾಳದಲ್ಲಿ ಇಟ್ಟುಕೊಂಡು ಜೀವಿಸಬೇಕು ಎಂದರು.  ನನ್ನ ಗೆಳೆಯ ಪ್ರಕಾಶ್ ಗೌಡರವರು ತನ್ನ ಗ್ರಾಮದ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದು ದೇವರ ಕಾರ್ಯಕ್ಕೆ ಮುಂದಾಗಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಕದಬಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾ ಪ್ರಿಯ ಪ್ರಕಾಶಗೌಡ, ಬಿಜೆಪಿ ಮುಖಂಡ ಎಲ್.ಎಸ್ ಚೇತನಗೌಡ, ಪಾಳ್ಯ ರಘು, ದೊರೆಸ್ವಾಮಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!