Thursday, September 19, 2024

ಪ್ರಾಯೋಗಿಕ ಆವೃತ್ತಿ

ಗಗನಚುಕ್ಕಿ ಜಲಪಾತ ಅಂತರಾಷ್ಟ್ರೀಯ ಖಾತ್ಯಿಗಳಿಸಲಿ : ಡಾ.ಸುಧಾಕರ್

ಮಂಡ್ಯ ಜಿಲ್ಲೆಯಲ್ಲಿ ಇರುವ ಐತಿಹಾಸಿಕ ಗಗನಚುಕ್ಕಿ ಜಲಪಾತದ ಸೊಬಗನ್ನು ಆನಂದಿಸುವುದರ ಜೊತೆಗೆ ಪ್ರವಾಸಿ ತಾಣವನ್ನು ಮತ್ತಷ್ಟು ಅಭಿವೃದ್ದಿ ಪಡಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕಿದೆ ಎಂದು ಶಿಕ್ಷಣ ಉನ್ನತ ಸಚಿವ ಎಂ.ಸಿ. ಸುಧಾಕರ್ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದ ಗಗನಚುಕ್ಕಿ ಜಲಪಾತದ ಸಮೀಪದ ನಡೆದ ಜಲಪಾತೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ಕೃತಕವಾಗಿ ಸೃಷ್ಠಿಸಿರುವ ಜಲಪಾತಕ್ಕಿಂತ ಪ್ರಕೃತಿಯಲ್ಲಿ ಮೂಡಿ ಬಂದಿರುವ ಗಗನ ಚುಕ್ಕಿ ಜಲಪಾತ ಅದ್ಬುತವಾಗಿದ್ದು, ಈಗಾಗಲೇ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಪಡಿಸಬೇಕಿತ್ತು, ಮುಂದಾದರೂ ಇಂತರ ಪ್ರವಾಸಿ ತಾಣಗಳು ಅಭಿವೃದ್ದಿ ಕಾಣಲಿ ಎಂದರು.

ಕಾವೇರಿ ನದಿಯ ಸುಂದರ ಸೊಬಗನ್ನು ಆನಂದಿಸಲು ಉತ್ತಮ ಕಾರ್ಯಕ್ರಮವಾಗಿದೆ. ಗಗನಚುಕ್ಕಿ ಪ್ರಕೃತಿಯ ಸೌಂದರ್ಯಕ್ಕೆ ಪ್ರೇಕ್ಷಣಿಯ ಪ್ರವಾಸೋಧ್ಯವಾಗಿ ಮಾಡಬೇಕಿದೆ, ನಮ್ಮಲಿರುವ ಪ್ರಕೃತಿಯ ಸೊಬಗನ್ನು ಸರಿಯಾಗಿ ಬಳಿಸಿಕೊಳ್ಳಬೇಕು, ಮಾಲಿನ್ಯ ಮಾಡಲು ಮುಂದಾಗಬಾರದು, ಪ್ರಕೃತಿಯ ಸೌಂದರ್ಯವನ್ನು ಆನಂದಿಸಿ ಎಂದು ತಿಳಿಸಿದರು.

ಬಯಲು ಸೀಮೆಯನು ಇಂತಹ ಸೌಂದರ್ಯವನ್ನು ನೋಡಲು ಸಾಧ್ಯವಿಲ್ಲ, ನಮ್ಮ ಸಮೀಪವೇ ಇರುವ ಗಗನಚುಕ್ಕಿ ಜಲ ವೈಭವ ಎಲ್ಲೆಲ್ಲಿಯೂ ಫಸರಿಸಲಿ,ಜಲ, ಸಾಂಸ್ಕೃತಿಕ ಹಾಗೂ ವಿದ್ಯುತ್ ದೀಪಾಲಾಂಕಾರ ವೈಭವ ಪ್ರತಿವರ್ಷ ನಡೆಯಲಿ ಎಂದು ಆಶಿಸಿದರು.

ಶಾಸಕ ಪಿ.ಎಂ ನರೇಂದ್ರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಲಪಾತದ ಸೌಂದರ್ಯ ಹಾಗೂ ಸಾಂಸ್ಕೃತಿಕ ಸೌಂದರ್ಯವನ್ನು ನಾಡಿನ ಜನತೆ ಸವಿಯಲಿ ಎನ್ನುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ, ನೈಸರ್ಗಿಕ ಸೌಂದರ್ಯಕ್ಕೆ ವಿದ್ಯುತ್ ದೀಪ ಹಾಗೂ ಲೇಸರ್ ಕಿರಣಗಳ ಮೂಲಕ ಮತ್ತಷ್ಟು ಮೆರಗು ನೀಡಲಾಗಿದೆ, ಗಗನಚುಕ್ಕಿ ಜಲಪಾತೋತ್ಸವ ಯಶಸ್ವಿಗೆ ಶ್ರಮಿಸಿದ ಎಲ್ಲಾರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಕೆ.ಆರ್ ನಗರ ಶಾಸಕ ರವಿಶಂಕರ್, ರವಿಕುಮಾರ್ ಗಣಿಗ, ಉದಯ್, ವಿಧಾನ ಪರಿಷತ್ ಸದಸ್ಯ ಸುಧಾಂ ದಾಸ್, ಹಿರಿಯ ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ, ನಂಜುಂಡಸ್ವಾಮಿ, ಚಾಮರಾಜನಗರ ಅಪಾರ ಜಿಲ್ಲಾಧಿಕಾರಿ ಮೋನಾ ರಾವತ್, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಉಪವಿಭಾಗಧಿಕಾರಿ ಶಿವಮೂರ್ತಿ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!