Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಗತ್ ಸಿಂಗ್ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

ಎಐಡಿಎಸ್‌ಓ (ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್) ನೇತೃತ್ವದಲ್ಲಿ ಇದೇ ಸೆಪ್ಟೆಂಬರ್ 28 ರಂದು ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಅವರ 117 ನೇ ಜನ್ಮ ದಿನದ ಹಿನ್ನಲೆಯಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಗತ್ ಸಿಂಗ್‌ರ ಪಾತ್ರ ವಿಷಯದ ಕುರಿತು ರಾಜ್ಯ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸೆಪ್ಟೆಂಬರ್,ಅಕ್ಟೋಬರ್ ತಿಂಗಳಿನಾದ್ಯಂತ ಶಾಲಾ, ಕಾಲೇಜು ಮಟ್ಟದಲ್ಲಿ ಪ್ರತ್ಯೇಕವಾಗಿ ಈ ಸ್ಪರ್ಧೆಯು ನಡೆಯುತ್ತದೆ. ಭಗತ್‌ಸಿಂಗ್‌ ಆದರ್ಶ, ಮೌಲ್ಯ ಹಾಗೂ ವಿಚಾರಗಳನ್ನು ಪಸರಿಸುವ ಮೂಲಕ ಮಾನವತೆ ಮತ್ತು ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಈ ಸಾಂಸ್ಕ್ರತಿಕ ಸ್ಪರ್ಧೆಯನ್ನು ಈ‌ ಏರ್ಪಡಿಸಲಾಗಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಐಡಿಎಸ್‌ಓ  ಮಂಡ್ಯ ಜಿಲ್ಲಾ ಸಮಿತಿ ಸಹಾ ಸಂಚಾಲಕಿ ಚಂದ್ರಿಕ ಮನವಿ ಮಾಡಿದ್ದಾರೆ.

‘ಸ್ವಾತಂತ್ರ್ಯ ಚಳವಳಿಯಲ್ಲಿ ಭಗತ್ ಸಿಂಗ್ ಪಾತ್ರ’ ಕುರಿತು  ಕನ್ನಡದಲ್ಲಿ ಪ್ರಬಂಧ ಬರೆಯಬೇಕು ಹಾಗೂ ಮೂರು ವಿಭಾಗಗಳಿಗೆ ಪ್ರತ್ಯೇಕ ಸ್ಪರ್ಧೆ  ನಡೆಯಲಿಸಡ.  ಶಾಲೆ ಮಟ್ಟದ ಸ್ಪರ್ಧೆಗೆ 600 ಪದಗಳ ಮಿತಿ ಇರುತ್ತದೆ.

ಸ್ಪರ್ಧೆಯ ಶುಲ್ಕ: 10ರೂ, (2) ಪಿಯು (800 ಪದಗಳ ಮಿತಿ) ಸ್ಪರ್ಧೆಯ ಶುಲ್ಕ: 20ರೂ, (3).ಪದವಿ/ಇಂಜನಿಯರಿಂಗ್/ಮೆಡಿಕಲ್ (1000 ಪದಗಳ ಮಿತಿ) ಸ್ಪರ್ಧೆಯ ಶುಲ್ಕ: 30ರೂ. ಇರುತ್ತದೆ. (ನಿಗದಿತ ದಿನಾಂಕದಂದು ನಿಮ್ಮ ಶಾಲೆ/ಕಾಲೇಜು/ಸಂಸ್ಥೆ/ನಗರದಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು). ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಮೂರು ಬಹುಮಾನ ವಿತರಣೆ ಇರುತ್ತದೆ. ಜಿಲ್ಲಾ ಮಟ್ಟದ ವಿಜೇತರ ಪ್ರಬಂಧಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುತ್ತವೆ.

ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 7795357457 ಇವರನ್ನು ಸಂಪರ್ಕಿಸಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!