Thursday, September 19, 2024

ಪ್ರಾಯೋಗಿಕ ಆವೃತ್ತಿ

10 ವರ್ಷಕೊಮ್ಮೆ ಆಧಾರ್ ಅಪ್ ಡೇಟ್ ಕಡ್ಡಾಯ: ಡಾ.ಹೆಚ್.ಎಲ್ ನಾಗರಾಜು

ಸರ್ಕಾರಿ ಸವಲತ್ತು, ಯೋಜನೆ, ಸಹಾಯಧನ ಪಡೆಯುವಾಗ, ಬ್ಯಾಂಕ್ ನಲ್ಲಿ ಖಾತೆಗೆ ಆಧಾರ್ ಜೋಡಣೆ ಮಾಡುವುದು ಸರ್ವೆ ಸಾಮಾನ್ಯ. ಆಧಾರ್ ಕಾಡ್೯ನ್ನು ತಪ್ಪದೇ ಹತ್ತು ವರ್ಷಕ್ಕೆ ಒಮ್ಮೆಯಾದರು ಅಪ್ ಡೇಟ್ ಮಾಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ತಿಳಿಸಿದರು.

ಇತ್ತೀಚೆಗೆ ಆಧಾರ್ ಅಪ್ ಡೇಟ್ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದರು. 10 ವರ್ಷಕೊಮ್ಮೆಯಾದರೂ ಆಧಾರ್ ಅಪ್ ಡೇಟ್ ಮಾಡಿಸಿಕೊಳ್ಳದಿದ್ದಲ್ಲಿ ಸರ್ಕಾರ ಆರ್.ಟಿ.ಜಿ.ಎಸ್ ಮೂಲಕ ನೀಡುವ ಸಹಾಯಧನ, ಪಿಂಚಣಿಗಳು ಖಾತೆಗೆ ಪಾವತಿಯಾಗದೇ ಇಲಾಖೆಗಳ ಬಳಿಯೇ ಉಳಿದು ತೊಂದರೆಯಾಗುತ್ತದೆ. ಈ ಹಿನ್ನಲೆಯಲ್ಲಿ ತಪ್ಪದೇ ಸಾರ್ವಜನಿಕರು ಆಧಾರ್ ಅಪಡೇಟ್ ಮಾಡಿಸಿ ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ 1983248 ಜನರು ಆಧಾರ್ ಕಾಡ್೯ ಹೊಂದಿದ್ದು, ಅದರಲ್ಲಿ 0-5 ವರ್ಷದೊಳಗಿನವರು- 68783,
5-18 ವರ್ಷದೊಳಗಿನವರು-310032 ಹಾಗೂ 18 ವರ್ಷ ಮೇಲ್ಪಟ್ಟ- 1604433 ಜನರು ಆಧಾರ್ ಕಾರ್ಡ ಹೊಂದಿದ್ದಾರೆ ಎಂದರು.

ಆಧಾರ್ ಕಾಡ್೯ನಲ್ಲಿ ಮುಖ್ಯವಾಗಿ ಬಯೋಮೆಟ್ರಿಕ್ ಅಪ್ ಡೇಟ್ ಮಾಡಬೇಕಿದ್ದು, ಜಿಲ್ಲೆಯಲ್ಲಿ 5 ವರ್ಷ ಮೇಲ್ಪಟ್ಟ-84,637 ಹಾಗೂ 15 ವರ್ಷ ಮೇಲ್ಪಟ್ಟ- 56029 ಒಟ್ಟು 1,40,666 ಆಧಾರ್ ಕಾಡ್೯ ಹೊಂದಿರುವವರ ಆಧಾರ್ ಕಾಡ್೯ ಬಯೋಮೆಟ್ರಿಕ್ ಅಪ್ ಡೇಟ್ ಬಾಕಿ ಇರುತ್ತದೆ.

ಆಧಾರ್ ಕಾಡ್೯ಗೆ ಮೊಬೈಲ್ ಸಂಖ್ಯೆ ಜೋಡಣೆಗೆ ಸಂಬಂಧಿಸಿದಂತೆ 18,51,821 ಜನರು ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿದ್ದು, ಇನ್ನೂ1,31,427 ಜನರ ಮೊಬೈಲ್ ಸಂಖ್ಯೆ ಜೋಡಣೆ ಬಾಕಿ ಇರುತ್ತದೆ ಎಂದರು.

ಡಿ.14ರೊಳಗಾಗಿ ಆಧಾರ್ ಅಪ್ ಡೇಟ್ ಮಾಡಿಸಿ ಜಿಲ್ಲೆಯಲ್ಲಿ ಒಟ್ಟು 5,13,941 ಆಧಾರ್ ಅಪ್ ಡೇಟ್ ಆಗಬೇಕಿರುತ್ತದೆ. ಈವರೆಗೆ 1,44,148 ಜನರು ಮಾತ್ರ ಆಧಾರ್ ಅಪ್ ಡೇಟ್ ಮಾಡಿಸಿಕೊಂಡಿದ್ದು, ಉಳಿದವರು ಡಿಸೆಂಬರ್‌ 14 ರೊಳಗಾಗಿ ತಮ್ಮ ಆಧಾರ್ ಕಾಡ್೯ ಗಳನ್ನು ಅಪ್ ಡೇಟ್ ಮಾಡಿಸಿಕೊಳ್ಳಿ ಎಂದರು.

ಜಿಲ್ಲೆಯಲ್ಲಿ 141 ಆಧಾರ್ ಕೇಂದ್ರ ಗಳಿದ್ದು, 50 ರೂ ಪಾವತಿಸಿ ಆಧಾರ್ ಅಪ್ ಡೇಟ್ ಮಾಡಿಸಿಕೊಳ್ಳಬಹುದು.ಜಿಲ್ಲೆಯಲ್ಲಿ ಆಕ್ರಮ ಆಧಾರ್ ನೋಂದಣಿ ಕಂಡು ಬಂದಲ್ಲಿ ಆಧಾರ್ ಜಿಲ್ಲಾ ಸಮಿತಿಯವರ ಗಮನಕ್ಕೆ ತರಬೇಕು ಎಂದರು.

ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್, ಪೊಲೀಸ್ ಇನ್ಸ್ ಪೆಕ್ಟರ್ ಮಂಜೇಗೌಡ ಎಚ್.ಜಿ,ಆಧಾರ್ ಕೋಆರ್ಡಿನೇಟರ್ ವೇಣುಗೋಪಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!