Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಗಣೇಶೋತ್ಸವದಲ್ಲಿ ರಕ್ತದಾನ ಮಾಡಿದ ಹಿಂದೂ-ಮುಸ್ಲಿಂ ಯುವಕರು!

ಮಂಡ್ಯ ನಗರದ ಶಂಕರನಗರದಲ್ಲಿ ಶಂಕರನಗರ ಗೆಳೆಯರ ಬಳಗ ಹಾಗೂ ಡಾ.ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನ ಸಹಯೋಗದೊಂದಿಗೆ ಆಯೋಜಿಸಿದ್ದ 5ನೇ ವರ್ಷ ಪುಷ್ಪಮಂಟಪೋತ್ಸವ ಅಂಗವಾಗಿ ಬೃಹತ್ ರಕ್ತದಾನ ಅಭಿಯಾನ ನಡೆಯಿತು. ಸಂಚಾರಿ ವಾಹನದಲ್ಲಿ 40ಕ್ಕೂ ಹೆಚ್ಚು ರಕ್ತದಾನಿಗಳಿಂದ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ ಸಿಬ್ಬಂದಿಗಳು ರಕ್ತ ಸಂಗ್ರಹಿಸಿಕೊಂಡರು.

ಬಳಿಕ ಮಾತನಾಡಿದ ಡಾ.ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನದ ವ್ಯವಸ್ಥಾಪಕ ರಾಹುಲ್, ಪ್ರಗತಿಪರ ಹೋರಾಟಗಾರ ಡಾ.ಎಂ.ಬಿ.ಶ್ರೀನಿವಾಸ್ ಸ್ಮರಣಾರ್ಥ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ, ಇಂದು ಶಂಕರನಗರದಲ್ಲಿರುವ ಗೆಳೆಯ ಬಳಗದಿಂದ ರಕ್ತದಾನ ಅಭಿಯಾನ ನಡೆಯುತ್ತಿದೆ, ಗಣೇಶ ಪುಷ್ಪಮಂಟಪದಿಂದ ಸಾಕಷ್ಟು ಗೆಳೆಯರು ಒಗ್ಗೂಡಿ, ಒಮ್ಮತ ಬೆಸೆಯುತ್ತಿದೆ ಎಂದರು.

ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಅನ್ಯ ಕೋಮುಗಳ ನಡುವೆ ಗಲಭೆ ಶುರುವಾಯಿತು, ಆದರೆ ಇಲ್ಲಿ ಮುಸ್ಲಿಂ ಯುವಕರು, ಗಣೇಶ ಮಂಟಪದಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ, ಗಣೇಶ ಎಲ್ಲರಿಗೂ ಒಳಿತು ಮಾಡಲಿ, ಅಲ್ಲಹು ಕೂಡ ಎಲ್ಲರಿಗೂ ಒಳ್ಳಯದು ಮಾಡಿ ಎನ್ನುವ ಭಾವನೆ ನಮ್ಮದು ಎಂದು ಮುಸ್ಲೀಂ ಗೆಳೆಯುರು ಹೇಳುತ್ತಾರೆ ಎಂದು ತಿಳಿಸಿದರು.

ನಮ್ಮ ತಂದೆಯವರ ಹೆಸರಿನಲ್ಲಿ 3ನೇ ವರ್ಷ ರಕ್ತದಾನ ಅಭಿಯಾನ ಮಾಡುತ್ತಿದ್ದೇವೆ, ಜೀವ ಉಳಿಸುವ ನಿಟ್ಟಿನಲ್ಲಿ ಯುವಕರ ತಂಡ ನಿಂತಿದೆ, ಕಳೆದ ವರ್ಷ ಕಾಡು ಗ್ರಾಮದಲ್ಲಿ 73 ಮಂದಿ ರಕ್ತದಾನ ಮಾಡಿದ್ದೇವು, ಜೀವಧಾರೆ ಟ್ರಸ್ಟ್ ನಟರಾಜ್ ಮತ್ತು ಮಿಮ್ಸ್ ರಕ್ತನಿಧಿ ಕೇಂದ್ರ ತಂಡಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದರು ಸ್ಮರಿಸಿದರು.

ಪುಷ್ಪಮಂಟಪದ ಆವರಣದಲ್ಲಿ ವಿವಿಧ ಸೇವಾ ಕಾರ್ಯಗಳು, ಕ್ರೀಡಾಚಟುವಟಿಕೆಗಳು ನಡೆದು, ಭಾರಿ ಜನಮನ್ನಣೆಗಳಿಸಿದೆ, ವಿಶೇಷ ಮಹಾಶಿವಾವತಾರಿ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ವಿಸರ್ಜನೆ ದಿನ ಅನ್ನಸಂತರ್ಪಣೆ ಮತ್ತು ಜಾನಪದ ಕಲಾತಂಡಗಳ ಮೆರವಣಿಗೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜು, ಮಿಮ್ಸ್ ರಕ್ತನಿಧಿ ಕೇಂದ್ರ ರಫೀ, ರಾಜು, ಶಂಕರನಗರ ಗೆಳೆಯರ ಬಳಗ ಪ್ರಮೋದ್, ಅಭಿ, ಮಿತಿಲ್, ಲಕ್ಕನ್, ತೇಜಸ್, ಶ್ರೀನಿವಾಸ್, ಶಿವರಾಜ್, ಧನುಷ್, ಮನೀಸ್, ಇಂಬ್ರಾನ್, ಸೋಹ್ರ, ಉಶೇನ್, ಹಿಮು, ಆಕಾಶ್, ಚಿರಂಜೀವಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!