Friday, September 27, 2024

ಪ್ರಾಯೋಗಿಕ ಆವೃತ್ತಿ

ಹೆಚ್ಚು ಹಾಲು ಸರಬರಾಜಿನಲ್ಲಿ ಮಂಡ್ಯ ಜಿಲ್ಲೆ ಪ್ರಥಮ: ರಘುನಂದನ್

ಮಂಡ್ಯ ಜಿಲ್ಲೆ ಕರ್ನಾಟಕದಲ್ಲೇ ಹೆಸರುವಾಸಿಯಾಗಿದೆ ಅದರಲ್ಲೂ ಕರ್ನಾಟಕದಲ್ಲಿ ಅತಿಹೆಚ್ಚು ಹಾಲು ಸರಬರಾಜು ಮಾಡುವಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಮನ್ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ತಿಳಿಸಿದರು.

ಶುಕ್ರವಾರ ಮನ್ಮುಲ್ ಮಂಡ್ಯ ಉಪ ಕಚೇರಿಯಲ್ಲಿ ಮರಣ ಹೊಂದಿದ್ದ ರಾಸುಗಳಿಗೆ ಗುಂಪು ವಿಮೆ ರಾಸು ಪರಿಹಾರದ ಚೆಕ್, ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ನಿವೃತಿಯೊಂದಿದ ಹಾಗೂ ಮರಣ ಹೊಂದಿದ ಕಾರ್ಯದರ್ಶಿಗಳಿಗೆ 4 ಲಕ್ಷ ರೂಗಳ ಪರಿಹಾರದ ಚೆಕ್, ಹಾಲು ಕರೆಯುವ ಯಂತ್ರಕ್ಕೆ ಶೇಕಡಾ 50ರಷ್ಟು ಸಹಾಯಧನ, ಸಹಕಾರ ಸಂಘಗಳನ್ನೂ ಡಿಜಿಟಲೀಕರಣ ಮಾಡಲು ಕಂಪ್ಯೂಟರ್ ಗಳನ್ನೂ ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆ ಕರ್ನಾಟಕದಲ್ಲೇ ಹೆಸರುವಾಸಿಯಾಗಿದೆ ಅದರಲ್ಲೂ ಕರ್ನಾಟಕದಲ್ಲಿ ಅತಿಹೆಚ್ಚು ಹಾಲು ಸರಬರಾಜು ಮಾಡುವಲ್ಲಿ ಪ್ರಥಮಸ್ಥಾನದಲ್ಲಿದೆ ಎಂದರು. ನಮ್ಮ ತಾಲೂಕು ಕಳೆದ 5 ವರ್ಷಗಳಿಂದ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಲು ರೈತರು , ಆಡಳಿತಮಂಡಳಿ , ನೌಕರರ ಸಹಕಾರದಿಂದ ಪ್ರಥಮ ಅಥವಾ ದ್ವಿತೀಯ ಸ್ಥಾನದಲ್ಲಿದೆ ಎಂದರು. ಅಕ್ಟೋಬರ್ 1 ರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಕೆಎಂಎಫ್ ಸಹಯೋಗದಿಂದ ದೆಹಲಿಗೆ 2 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಸರಬರಾಜು ಮಾಡುವ ಅವಕಾಶ ಸಿಕ್ಕಿದೆ ಮುಂದಿನ ದಿನಗಳಲ್ಲಿ ಬರುವ ಲಾಭವನ್ನು ರೈತರಿಗೆ ಕೊಡುವ ಭರವಸೆ ನೀಡಿದರು.

ಮಾಜಿ ಮನ್ಮುಲ್ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಬಿ.ಆರ್.ರಾಮಚಂದ್ರ ಮಾತನಾಡಿ , ಜೆಡಿಎಸ್ , ಕಾಂಗ್ರೆಸ್ ಪಕ್ಷದವರಿದ್ದರು ನಾವು ಸಹಕಾರ ಸಂಘಗಳಿಗೆ ತೊಂದರೆ ಯಾಗದಂತೆ ಕೆಲಸ ನಿರ್ವಹಿಸುತ್ತಿದ್ದೇವೆ , ಮಂಡ್ಯ ತಾಲೂಕಿನಲ್ಲಿ ಗುಣಮಟ್ಟ , ಶಿಸ್ತು ಇದ್ದು ಯಾವುದೇ ಸಹಕಾರ ಸಂಘದಲ್ಲಿ ಅಹಿತಕರ ಘಟನೆ ನಡೆಯದೆ ಇರುವ ನಿಟ್ಟಿನಲ್ಲಿ ನಮ್ಮ ಕಾರ್ಯದರ್ಶಿಗಳು , ರೈತರು ಸಹಕಾರ ನೀಡುತ್ತಿದ್ದು ಇದೆ ರೀತಿ ಎಲ್ಲರು ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮನ್ಮುಲ್ ನಿರ್ದೇಶಕರಾದ ಯು.ಸಿ.ಶಿವಕುಮಾರ್ , ಉಪವ್ಯವಸ್ಥಾಪಕರಾದ ಡಾ.ಮಂಜೇಶ್ ಗೌಡ , ಸಹಾಯಕ ವ್ಯವಸ್ಥಾಪಕರುಗಳಾದ ಡಾ. ಹೊಂಬೆಗೌಡ , ಡಾ. ಯಶ್ವಂತ್ ಪ್ರತಾಪ್ , ವಿಸ್ತರಣಾಧಿಕಾರಿಗಳಾದ ಅರ್ಚನಾ, ಭರತ್, ತೇಜಸ್ವಿನಿ, ಲೋಕೇಶ್, ರಶ್ಮಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!