Thursday, November 19, 2026

ಪ್ರಾಯೋಗಿಕ ಆವೃತ್ತಿ

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಕರಾಟೆ ತರಬೇತಿ- ಲೋಕೇಶ್ ಮೊದಲಿಯಾರ್

ಸರ್ಕಾರಿ ಶಾಲೆಯಲ್ಲಿ ಓದುತ್ತ ಕರಾಟೆ ಕಲಿಯುತ್ತಿರುವವರಿಗೆ ರಾಜ್ಯ, ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಲು ತರಬೇತಿ ನೀಡುತ್ತಿದ್ದೇವೆ ಎಂದು ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಲೋಕೇಶ್ ಮೊದಲಿಯಾರ್ ಹೇಳಿದರು.

ಮಂಡ್ಯ ನಗರದ ಗಾಂಧಿಭವನದಲ್ಲಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಯೋಜಿಸಿದ್ದ ಉಚಿತ ಕರಾಟೆ ತರಬೇತಿ ಕಾರ್ಯಾಗಾರ ಹಾಗೂ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಓದಿನೊಂದಿಗೆ ವಿವಿಧ ಕರಾಟೆ ಮಾಸ್ಟರ್‌ಗಳಿಂದ ತರಬೇತಿ ಪಡೆಯುತ್ತಿರುವವರಿಗೆ ಒಂದೇ ಕಡೆ ಉಚಿತವಾಗಿ ಉತ್ತಮ ತರಬೇತಿ ನೀಡಿ, ರಾಜ್ಯ, ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಲಿ ಎನ್ನುವುದು ಕರಾಟೆ ಅಸೋಸಿಯೇಷನ್ ಸದುದ್ದೇಶವಾಗಿದೆ ಎಂದು ನುಡಿದರು.

ತರಬೇತಿ ಪಡೆದವರು ಮೈಸೂರು, ಶಿವಮೊಗ್ಗ ಸೇರಿದಂತೆ ರಾಷ್ಟ್ರಮಟ್ಟದ ವಿವಿಧ ರಾಜ್ಯಗಳಿಗೆ ಹೋಗಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ದಿನಗಳಲ್ಲೂ ಅಂತರಾಷ್ಟ್ರೀಯ ಮಟ್ಟದಲ್ಲೂ ಕರಾಟೆ ಪ್ರದರ್ಶನಕ್ಕೆ ಹೋಗುವವರಿಗೆ ತರಬೇತಿ ನೀಡಲಾಗುತ್ತದೆ ಎಂದರು.

ಉಪಾಧ್ಯಕ್ಷ ಶಿಹಾನ್ ವಿನಯ್‌ಕುಮಾರ್ ಮಾತನಾಡಿದರು. ಇದೇ ಸದಂರ್ಭದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರವ ಹರ್ಷ ಮೌರ್ಯ, ಲೋಚನ್‌ಗೌಡ, ಪ್ರಣಮ್ಯಶೆಟ್ಟಿ, ಪನ್ವಿತಾ ಇವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಸೆನ್ಸಾಯ್ ಕೆ.ಎಂ.ಮನು, ಸೆನ್ಸಾಯ್ ಎನ್.ವೆಂಕಟೇಶ್, ಸೆನ್ಸಾಯ್ ಶಿವಣ್ಣ, ಸೆನ್ಸಾಯ್ ಭರತ್, ಸೆನ್ಸಾಯ್ ಹೇಮಂತ್, ಸೆನ್ಸಾಯ್ ಪ್ರೇಮಕುಮಾರ್, ಸೆನ್ಸಾಯ್ ಅರುಣ್ ಮತ್ತು ತರಬೇತಿದಾರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ