Sunday, October 20, 2024

ಪ್ರಾಯೋಗಿಕ ಆವೃತ್ತಿ

ನಿರ್ಮಲಕ್ಕನ ರಾಜೀನಾಮೆ ಕೇಳದೆ… ಸಿದ್ದು ರಾಜೀನಾಮೆ ಮಾತ್ರ ಕೇಳುವುದು ಕೂಡ ಭ್ರಷ್ಟಾಚಾರವಲ್ಲವೇ? ದೇಶದ್ರೋಹವಲ್ಲವೇ?

ಶಿವಸುಂದರ್

ಜಸ್ಟ್ ಆಸ್ಕಿಂಗ್

BJP ಗಳೇ….

ನಿರ್ಮಲಕ್ಕನ ರಾಜೀನಾಮೆ ಕೇಳದೆ…

ಸಿದ್ದು ರಾಜೀನಾಮೆ ಮಾತ್ರ ಕೇಳುವುದು ಕೂಡ..

ಭ್ರಷ್ಟಾಚಾರವಲ್ಲವೇ? ದೇಶದ್ರೋಹವಲ್ಲವೇ?

ರಾಜಕೀಯ ನೈತಿಕತೆಯ ದೃಷ್ಟಿಯಿಂದ MUDA ಆರೋಪದ FIR ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನವರ ರಾಜೀನಾಮೆಯನ್ನು ನಾಡಿನ ಜನತೆ ಕೇಳಬಹುದು…

ಆದರೆ..

56 ಕೋಟಿ ಆರೋಪಕ್ಕೆ ಸಿದ್ದು ರಾಜೀನಾಮೆ ಕೇಳುವ ಬಿಜೆಪಿಗಳು….

8000 ಕೋಟಿ ಆರೋಪದ FIR ಆದರೂ ನಿರ್ಮಲಕ್ಕನ ಸಮರ್ಥಿಸಿಕೊಳ್ಳುವುದೇ..

ಅತ್ಯಂತ ದೊಡ್ಡ ಭ್ರಷ್ಟಾಚಾರವಲ್ಲವೇ?

..ಮಾತ್ರವಲ್ಲ

…ದೇಶದ್ರೋಹ ಕೂಡ…ಅಲ್ಲವೇ?

ಏಕೆಂದರೆ….

..56 ಕೋಟಿ ಆರೋಪದ ಹಿಂದೆ ಇರುವುದು ಅಧಿಕಾರ ದುರ್ಬಳಕೆಯಿಂದ ಸ್ವಂತಕ್ಕೆ ಆಸ್ತಿ ಗಳಿಸಿದ ಆರೋಪ…

8000 ಕೋಟಿ ಆರೋಪದ ಹಿಂದೆ ಇರುವುದು ಅಧಿಕಾರ ದುರ್ಬಳಕೆ ಮಾಡಿಕೊಂಡು..

… ದೇಶದ ಪ್ರಜಾತಂತ್ರವನ್ನೇ ಬುಡಮೇಲು ಮಾಡಿದ ಆರೋಪ …

ದೇಶದ್ರೋಹಿ ಕೃತ್ಯ …

ಮೇಲಾಗಿ..

ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠವೆ ಇದರಲ್ಲಿ ಲಾಭಕ್ಕಾಗಿ ಅಧಿಕಾರದ ದುರ್ಬಳಕೆಯಾಗಿದೆ ಎಂದು ಒಪ್ಪಿಕೊಂಡು ಎಲೆಕ್ಟೊರಲ್ ಬಾಂಡ್ ಯೋಜನೆಯನ್ನೇ ರದ್ದೂಗೊಳಿಸಿದೆ..

ಹೀಗಾಗಿ 8000 ಕೋಟಿ ಗಳಿಕೆಯಲ್ಲಿ ಮೋದಿ ಸರ್ಕಾರದ ಅಧಿಕಾರದ ದುರ್ಬಳಕೆಯಾಗಿರುವುದು..

*ಕೇವಲ ಆರೋಪವಲ್ಲ…ಸಾಬೀತಾಗಿರುವ ಸಂಗತಿ…*

ಆದ್ದರಿಂದ 56 ಕೋಟಿ ಆರೋಪ ಹೊತ್ತಿರುವ ಸಿದ್ಧು ರಾಜೀನಾಮೆ ಕೊಡಬೇಕೆನ್ನುವುದು ನೈತಿಕ ಅಗತ್ಯವಾದರೆ…

ನಿರ್ಮಲಕ್ಕನ್ನು ಒಳಗೊಂಡಂತೆ ಇಡೀ ಮೋದಿ ಮಂತ್ರಿ ಮಂಡಲದ ಬಿಜೆಪಿ ನಾಯಕರು ರಾಜೀನಾಮೆ ಕೊಡಬೇಕಿರುವುದು ಕಾನೂನಾತ್ಮಕ ಅಗತ್ಯ….

ಅಲ್ಲವೇ?

ಹೀಗಾಗಿ ಅದನ್ನು ಮರೆಮಾಚುವುದೂ ಕೂಡ ಜನದ್ರೋಹವಲ್ಲವೇ?

ನಿಜವಾದ ದೇಶಪ್ರೇಮಿಗಳಾದವರು …

ಕಾಂಗ್ರೆಸ್ಸಿನ ಭ್ರಷ್ಟಾಚಾರವನ್ನು ವಿರೋಧಿಸುವಂತೆ…

ಬಿಜೆಪಿಯು ದೇಶಪ್ರೇಮದ ಹೆಸರಿನಲ್ಲಿ ಮಾಡುತ್ತಿರುವ ಭ್ರಹ್ಮಾಂಡ ಭ್ರಷ್ಟಾಚಾರವನ್ನು…

…. ಪ್ರಜಾತಂತ್ರದ ಬುಡಮೇಲು ಕೃತ್ಯಗಳನ್ನು ಇನ್ನು ಹೆಚ್ಚು ವಿರೋಧಿಸಬೇಕಲ್ಲವೇ….?

ಜಸ್ಟ್ ಆಸ್ಕಿಂಗ್

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!