Saturday, October 19, 2024

ಪ್ರಾಯೋಗಿಕ ಆವೃತ್ತಿ

ಸ್ವಾಭಿಮಾನದ ಸಂಕೇತ ಭೀಮಾ ಕೋರೆಗಾಂವ್ ಇತಿಹಾಸ ಅಳಿಸಲು ಕೋಮುವಾದಿಗಳ ಯತ್ನ: ಶರದ್ ಪವಾರ್

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಭೀಮಾ ಕೋರೆಗಾಂವ್‌ನ ಇತಿಹಾಸವು ಜನರ ತ್ಯಾಗದ ಇತಿಹಾಸವಾಗಿದ್ದು, ಆದರೆ ಕೆಲವು ಕೋಮುವಾದಿಗಳು ಅದನ್ನು ಅಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. 1818 ರ ಕೋರೆಗಾಂವ್ ಭೀಮಾ ಕದನದಲ್ಲಿ ದಲಿತರನ್ನು ಒಳಗೊಂಡ ಬ್ರಿಟಿಷ್ ಸೈನ್ಯವು ಪೇಶ್ವೆಗಳನ್ನು ಸೋಲಿಸಿತ್ತು. ಈ ಹೋರಾಟವನ್ನು ದಲಿತ ಸ್ವಾಭಿಮಾನದ ಸಂಕೇತವಾಗಿ ಇತಿಹಾಸದಲ್ಲಿ ದಾಖಲಾಗಿದೆ.

ಈ ಯುದ್ಧದ ಸ್ಮರಣಾರ್ಥವಾಗಿ 2017 ರ ಡಿಸೆಂಬರ್ 31 ರಂದು ಪುಣೆಯಲ್ಲಿ ಎಲ್ಗರ್ ಪರಿಷತ್ ಸಮಾವೇಶವನ್ನು ಆಯೋಜಿಸಿತ್ತು. ಆದರೆ ಒಂದು ದಿನದ ನಂತರ ಅಲ್ಲಿ ಹಿಂಸಾಚಾರ ಭುಗಿಲೆದ್ದಿತು. ಹಿಂಸಾಚಾರದ ಕುರಿತು ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರವು ಫೆಬ್ರವರಿ 2018 ರಲ್ಲಿ ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆಎನ್ ಪಟೇಲ್ ಅವರ ನೇತೃತ್ವದಲ್ಲಿ ಕೋರೆಗಾಂವ್ ಭೀಮಾ ವಿಚಾರಣಾ ಆಯೋಗವನ್ನು ರಚಿಸಿತು.

ಈ ಆಯೋಗದ ಮುಂದೆ ಕೆಲವು ಸಾಕ್ಷಿಗಳನ್ನು ಪ್ರತಿನಿಧಿಸುತ್ತಿರುವ ವಕೀಲ ರಾಹುಲ್ ಮಖರೆ ಅವರು ಎನ್‌ಸಿಪಿ (ಎಸ್‌ಪಿ) ಗೆ ಸೇರ್ಪಡೆಗೊಂಡಿದ್ದಾರೆ. ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ಶರದ್ ಪವಾರ್, ಹಿಂಸಾಚಾರವು ರಾಜ್ಯ ಮತ್ತು ದೇಶದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡಿದೆ ಎಂದು ಹೇಳಿದ್ದಾರೆ.

”ಒಂದು ದಿನ ಆಯೋಗದ ಮುಂದೆ ಹಾಜರಾಗುವಂತೆ ನನಗೆ ಸಮನ್ಸ್ ಬಂದಿತ್ತು. ಅಡ್ಡಪರೀಕ್ಷೆಯ ವೇಳೆ ಕೆಲವರು ಕೆಲವು ವಿಷಯಗಳನ್ನು ಹೇಳುವಂತೆ ಒತ್ತಾಯಿಸಿದರು. ಕೋರೆಗಾಂವ್ ಭೀಮಾ ಇತಿಹಾಸವು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಜನರ ಇತಿಹಾಸವಾಗಿದೆ. ಆದರೆ ಕೆಲವು ಕೋಮುವಾದಿಗಳು ಆ ಇತಿಹಾಸವನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದರು.

“ಕೆಲವು ಯುವಕರು ಸಮಾಜದ ಮುಂದೆ ಸತ್ಯವನ್ನು ಹೇಳುತ್ತಿದ್ದಾರೆ. ಅವರಲ್ಲಿ ಮಖರೆ ಕೂಡ ಇದ್ದಾರೆ” ಎಂದು ಶರದ್ ಪವಾರ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜಕ್ಕೆ ಅಪಾಯಕಾರಿ ಮತ್ತು ಅವರ ಮನಸ್ಸಿನಲ್ಲಿರುವ ಚಿಂತನೆಯು “ಸಮಾನತೆಗೆ ಹಾನಿಕಾರಕ” ಎಂದು ಪವಾರ್ ಹೇಳಿದ್ದಾರೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನಕ್ಕೆ ಇಂದಿನ ಸರ್ಕಾರ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಪವಾರ್ ಹೇಳಿದ್ದು, ಬಿಜೆಪಿಯ ನಾಯಕರು ತಮ್ಮ ಪಕ್ಷವು 400 ಸ್ಥಾನಗಳನ್ನು ಪಡೆದರೆ ಸಂವಿಧಾನವನ್ನು ಬದಲಾಯಿಸುತ್ತದೆ ಎಂದು 2024ರ ಲೋಕಸಭೆ ಚುನಾವಣೆ ಹೇಳಿದ್ದಾರೆ ಎಂದು ಅವರು ಉಲ್ಲೇಖಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!