Friday, October 18, 2024

ಪ್ರಾಯೋಗಿಕ ಆವೃತ್ತಿ

ಎಲ್ಲರ ಒಳಗೊಳ್ಳುವಿಕೆಗೆ ಪ್ರತಿಯೊಬ್ಬರಲ್ಲೂ ಸೋದರತ್ವ ಅಗತ್ಯ : ರಾಹುಲ್ ಗಾಂಧಿ

ಬಹುಜನರಿಗೆ ಅವರ ಹಕ್ಕುಗಳನ್ನು ನೀಡುವ ಸಂವಿಧಾನವನ್ನು ಕಾಂಗ್ರೆಸ್ ರಕ್ಷಿಸುತ್ತದೆ. ಆದರೆ, ಸಮಾಜದಲ್ಲಿ ಎಲ್ಲರ ಒಳಗೊಳ್ಳುವಿಕೆ ಮತ್ತು ಸಮಾನತೆ ಸಿಗಬೇಕಾದರೆ, ಪ್ರತಿಯೊಬ್ಬ ಭಾರತೀಯರು ತಮ್ಮ ಹೃದಯದಲ್ಲಿ ಸಹೋದರತ್ವದ ಮನೋಭಾವದಿಂದ ಶ್ರಮಿಸಿದಾಗ ಮಾತ್ರ ಸಾಧ್ಯ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.

ದಲಿತರ ಮನೆಯೊಂದರಲ್ಲಿ ಊಟ ಮಾಡಿದ ಅವರ ಇತ್ತೀಚಿನ ಸಂವಾದದ ವೀಡಿಯೊವನ್ನು ರಾಹುಲ್ ಗಾಂಧಿಯವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ಇಂದಿಗೂ ದಲಿತರ ಅಡುಗೆ ಮನೆಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಶಾಹು ಪಟೋಲೆ ಹೇಳಿದಂತೆ, ದಲಿತರು ಏನು ತಿನ್ನುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಅವರು ಏನು ತಿನ್ನುತ್ತಾರೆ, ಅವರು ಹೇಗೆ ಅಡುಗೆ ಮಾಡುತ್ತಾರೆ ಎಂಬುದರ ಸಾಮಾಜಿಕ ಮತ್ತು ರಾಜಕೀಯ ಪ್ರಾಮುಖ್ಯತೆಯ ಬಗ್ಗೆ ಆಸಕ್ತಿ ಹೊಂದಿದ್ದೇನೆ. ನಾನು ಅಜಯ್ ತುಕಾರಾಂ ಸನಡೆ ಮತ್ತು ಅಂಜನಾ ತುಕಾರಾಂ ಸನದೆ ಅವರೊಂದಿಗೆ ಮಧ್ಯಾಹ್ನವನ್ನು ಕಳೆದಿದ್ದೇನೆ” ಎಂದು ರಾಹುಲ್ ಗಾಂಧಿ ವೀಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

“>

 

“ಅವರು ನನ್ನನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ತಮ್ಮ ಮನೆಗೆ ಅಡುಗೆಮನೆಯಲ್ಲಿ ಸಹಾಯ ಮಾಡಲು ಆಹ್ವಾನಿಸುವ ಮೂಲಕ ನನ್ನನ್ನು ಗೌರವಿಸಿದರು. ನಾವು ಒಟ್ಟಿಗೆ ‘ಚಾನೆ ಕೆ ಸಾಗ್ ಕಿ ಸಬ್ಜಿ’, ‘ಹರಭಾರಿಯಾಚಿ ಭಾಜಿ’ ಮತ್ತು ಬದನೆಯೊಂದಿಗೆ ದಾಲ್’ ಅಡುಗೆ ಮಾಡಿದ್ದೇವೆ” ಎಂದು ಅವರು ಹೇಳಿದ್ದಾರೆ.

ಜಾತಿ ಮತ್ತು ತಾರತಮ್ಯದೊಂದಿಗೆ ಪಟೋಲೆ ಮತ್ತು ಸಾನಡೆ ಕುಟುಂಬದ ವೈಯಕ್ತಿಕ ಅನುಭವಗಳನ್ನು ಚಿತ್ರಿಸುತ್ತಾ, “ದಲಿತರ ತಿನಿಸುಗಳ ಬಗ್ಗೆ ಅರಿವಿನ ಕೊರತೆ ಮತ್ತು ಈ ಸಂಸ್ಕೃತಿಯನ್ನು ದಾಖಲಿಸುವ ಮಹತ್ವವನ್ನು ನಾವು ಚರ್ಚಿಸಿದ್ದೇವೆ” ಎಂದು ಅವರು ಹೇಳಿದರು.

“ಸಂವಿಧಾನವು ಬಹುಜನರಿಗೆ ಪಾಲು ಮತ್ತು ಹಕ್ಕುಗಳನ್ನು ನೀಡಿದೆ. ನಾವು ಆ ಸಂವಿಧಾನವನ್ನು ರಕ್ಷಿಸುತ್ತೇವೆ” ಎಂದು ಅವರು ಪ್ರತಿಪಾದಿಸಿದರು. “ಆದರೆ, ಪ್ರತಿಯೊಬ್ಬ ಭಾರತೀಯರು ತಮ್ಮ ಹೃದಯದಲ್ಲಿ ಸಹೋದರತ್ವದ ಮನೋಭಾವದಿಂದ ಶ್ರಮಿಸಿದಾಗ ಮಾತ್ರ ಸಮಾಜದಲ್ಲಿ ಎಲ್ಲರಿಗೂ ನಿಜವಾದ ಒಳಗೊಳ್ಳುವಿಕೆ ಮತ್ತು ಸಮಾನತೆ ಸಾಧ್ಯ” ಎಂದು ಅವರು ಹೇಳಿದರು.

ವೀಡಿಯೊದಲ್ಲಿ, ರಾಹುಲ್ ಗಾಂಧಿ ಅಡುಗೆಮನೆಯಲ್ಲಿ ಸಹಾಯ ಮಾಡಿದ್ದು, ನಂತರ ಅವರ ಮನೆಯಲ್ಲಿ ಕುಟುಂಬದೊಂದಿಗೆ ಊಟ ಮಾಡುವುದನ್ನು ಕಾಣಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!