Sunday, November 22, 2026

ಪ್ರಾಯೋಗಿಕ ಆವೃತ್ತಿ

ಅಭಿಷೇಕ್ ಅಂಬರೀಶ್-ಅವಿವಾ ದಂಪತಿಗೆ ಗಂಡು ಮಗು ಜನನ

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಟ ಅಭಿಷೇಕ್ ಅಂಬರೀಷ್‌- ಅವಿವಾ ದಂಪತಿಗೆ ಗಂಡು ಮಗು ಜನನವಾಗಿದ್ದು, ಅಂಬರೀಷ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅವಿವಾ ಅವರು ಇಂದು ಬೆಳಗ್ಗೆ 8.30 ರ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

2023 ರಲ್ಲಿ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಗು ಮುದ್ದಾಡಿದ ಸುಮಲತಾ ಅಭಿಷೇಕ್ ಅವರ ತಾಯಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಆಸ್ಪತ್ರೆಯಲ್ಲಿ ಮೊಮ್ಮಗನನ್ನು ಅಪ್ಪಿ ಮುದ್ದಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮಗುವಿನ ಜೊತೆ ಸುಮಲತಾ ಫೋಟೋಗೆ ಫೋಸ್ ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದ ಸುಮಲತಾ ಅಂಬರೀಶ್‌ಗೆ ಇಂದು ಸಿಕ್ಕಾಪಟ್ಟೆ ಖುಷಿಯಾಗಿದೆ.ಈ ಸುದ್ದಿ ತಿಳಿದ ಅಂಬರೀಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿ,ಪೋಸ್ಟ್ ಹಾಕಿದ್ದಾರೆ.
ಮಗುವಿನ ರೂಪದಲ್ಲಿ ಮತ್ತೆ ಅಂಬರೀಶ್ ಅವರೇ ಹುಟ್ಟಿಬಂದಿದ್ದಾರೆ,ಮರಿ ಅಂಬರೀಶ್ ಜನನವಾಗಿದೆ, ‘ಜ್ಯೂನಿಯ‌ರ್ ರೆಬೆಲ್‌ ಸ್ಟಾ‌ರ್ ಆಗಮನವಾಗಿದೆ’ ಅಂತೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ