ಗ್ರಾಮೀಣ ಭಾರತದ ಹಣಕಾಸು ಸಾಕ್ಷರತೆಯ ಅಭಿವೃದ್ಧಿಗೆ ತಂತ್ರಜ್ಞಾನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಡಿಸೆಂಬರ್ 7 ಮತ್ತು 8 ರಂದು ಬೆಳಿಗ್ಗೆ 9:30 ರಿಂದ 24 ಗಂಟೆಗಳ ಹ್ಯಾಕಥಾನ್ ಆಯೋಜಿಸಲಾಗಿದೆ. ಕರ್ನಾಟಕದ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.
ಪಾಂಡವಪುರದ ವಿಜಯ ಕಾಲೇಜು ಕ್ಯಾಂಪಸ್ ನಲ್ಲಿ ಸ್ಪರ್ಧೆಯು ನಡೆಯಲಿದ್ದು, ಸ್ಪರ್ಧೆಯಲ್ಲಿ ₹60,000 ನಗದು ಬಹುಮಾನಗಳನ್ನು ಗೆಲ್ಲಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ:
ಡಾ. ಚೈತ್ರ ಎನ್ – [email protected]
ಪ್ರೊ. ಪವನ್ ಎಸಿ – [email protected] ಅವರನ್ನು ಸಂಪರ್ಕಿಸಬಹುದು.
ಹಣಕಾಸು ಸಾಕ್ಷರತೆಯನ್ನು ಗ್ರಾಮೀಣ ಸಮುದಾಯಗಳಿಗೆ ತಲುಪಿಸುವ ಉದ್ದೇಶಕ್ಕಾಗಿ ಹ್ಯಾಕ್ ಮಾಡಿ ಮತ್ತು ಬದಲಾವಣೆಯ ಭಾಗವಾಗಿರಿ ಎಂದು ರೈತರ ಶಾಲೆ ಮುಖ್ಯಸ್ಥ ಪ್ರೊ. ಸತ್ಯಮೂರ್ತಿ ಮನವಿ ಮಾಡಿದ್ದಾರೆ.




