ಮಂಡ್ಯ ಜಿಲ್ಲೆಗೆ ಚಡ್ಡಿ ಗ್ಯಾಂಗ್ ಪ್ರವೇಶ ಮಾಡಿದ್ದು ದರೋಡೆಗೆ ಯತ್ನ ನಡೆಸಿದೆ. ಆದ್ದರಿಂದ ಜನಸಾಮಾನ್ಯರು ಹಾಗೂ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಕಟ್ಟೇಚ್ಚರ ವಹಿಸುವಂತೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ನೀಡಿದ್ದಾರೆ.
ನ.19 ರಂದು ಕೆ.ಆರ್.ಪೇಟೆ ಟೌನ್ ಗೆ ಚಡ್ಡಿ ಗ್ಯಾಂಗ್ ಬಂದಿದ್ದು ಎನ್.ಜಿ ಇಂದಿರಾ ಕೋಂ ಎ ರಂಗನಾಥ್. ವೆಂಕಟೇಶ್ವರ ನಿಲಯ, ಹಳೇ ಮೈಸೂರು ರಸ್ತೆ, ಕೆ.ಆರ್. ಪೇಟೆ ಟೌನ್ ರವರ ಮನೆಯ ಬಾಗಿಲ ಬೀಗ ಹೊಡೆದು ಮನೆಯಲ್ಲಿ ಕಳ್ಳತನ ಮಾಡಲು ಪ್ರಯತ್ನಿ ಮನೆಯ ಬಟ್ಟೆ, ಪೈಲ್ ಹಾಗೂ ಇನ್ನಿತರೆ ದಸ್ತುಗಳನ್ನು ಚಿಲ್ಲಾಪಿಲ್ಲಿ ಮಾಡಿದ್ದು, ಈ ಸಂಬಂಧ ಸದರಿ ಚಡ್ಡಿ ಗ್ಯಾಂಗ್ ಬೇರೆ ನಗರ ಅಥವಾ ಗ್ರಾಮಗಳನ್ನು ಪ್ರವೇಶಿಸಿ ಸ್ವತ್ತು ಕಳವು ಮಾಡುವ ಸಾಧ್ಯತೆಗಳು ಇದೆ.
ಆದ್ದರಿಂದ ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಸದರಿ ಚಡ್ಡಿ ಗ್ಯಾಂಗ್ ಮೇಲೆ ಹೆಚ್ಚಿನ ನಿಗಾ ಇಡುವುದು ಹಾಗೂ ತಮ್ಮ ಶಾಖಾ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟಗಳಿಗೆ ಸಿಬ್ಬಂದಿಗಳನ್ನು ನೇಮಿಸಿಕೊಂಡು ಸದರಿ ಚಡ್ಡಿ ಗ್ಯಾಂಗ್ ಗಳ ಬಗ್ಗೆ ವಾಹನವನ್ನು ಚೆಕ್ ಮಾಡುವುದು, ಅಲ್ಲದೇ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ಗಸ್ತು ಸಂಬಂಧ ನೇಮಿಸಿಕೊಂಡು ಗಸ್ತು ನಡೆಸುವಂತೆ ಸೂಚಿಸಿದ್ದಾರೆ.
ಆಯಾ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸುವುದು ರಾತ್ರಿವೇಳೆಯಲ್ಲಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಪದೇ ಪದೇ ಓಡಾಡುವ ಮತ್ತು ನಿಂತಿರುವ ವಾಹನಗಳು ಹಾಗೂ ಜನರನ್ನು ವಿಚಾರಣೆ ಮಾಡುವುದು. ಈ ಬಗ್ಗೆ ನೀವು ಕೂಡಲೇ ಕ್ರಮ ಕೈಗೊಳ್ಳುವುದು. ಇನ್ನು ಮುಂದೆ ಸ್ವತ್ತು ಕಳವು ಪ್ರಕರಣಗಳಲ್ಲಿ ಈ ಕಛೇರಿಯ ಡಿಸಿಆರ್ ಬಿ ವಿಭಾಗದಿಂದ ನೀಡುವ ಎಲ್ಲಾ ಸಲಹೆ ಸೂಚನೆಗಳನ್ನು ಪಾಲಿಸಿ ಸಂಬಂಧಪಟ್ಟ ಪಿಎಸ್ಐ/ಪಿಐ/ಸಿಪಿಐ ರವರು ಈ ಜ್ಞಾಪನಾ ತಲುಪಿದ ಕೂಡಲೇ ಪಾಲನಾ ವರದಿಯನ್ನು ಸಲ್ಲಿಸುವುದು ಈ ವಿಚಾರದಲ್ಲಿ ನಿರ್ಲಕ್ಷತೆ ತೋರಬಾರದೆಂದು ಎಸ್ಪಿ ಸೂಚನೆ ನೀಡಿದ್ದಾರೆ.




