ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ದಾಖಲಿಸಿರುವುದು ನಮ್ಮ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ದಿಗೆ ಸಿಕ್ಕ ಗೆಲುವು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಾಖ್ಯಾನಿಸಿದ್ದಾರೆ.
LIVE : ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ. https://t.co/1i0EirnR7k
— Karnataka Congress (@INCKarnataka) November 23, 2024
“>
ಚುನಾವಣೆಯ ಗೆಲುವಿನ ನಂತರ ಮಾತನಾಡಿ ಅವರು, ರಾಜ್ಯದ ಮತದಾರರು ಕಾಂಗ್ರೆಸ್ ʼಕೈʼ ಹಿಡಿದಿದ್ದಾರೆ. ಸಮೀಕ್ಷೆಗಳು ಸುಳ್ಳು ಆಗ್ತಾವೆ ಅಂತ ನಾನು ನಿನ್ನೆಯೇ ಹೇಳಿದ್ದೇ ಎಂದರು.
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ
ವಿಪಕ್ಷದ ಟೀಕೆಗಳಿಗೆ ಇದೇ ನಮ್ಮ ಉತ್ತರ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ವಿರೋಧ ಪಕ್ಷಕ್ಕೆ ಜನರು ಒಂದು ಸಂದೇಶ ಕೊಟ್ಟಿದ್ದಾರೆ. ಜನರ ಭಾವನೆ ಮೇಲೆ ರಾಜಕಾರಣ ಮಾಡಬೇಡಿ, ಬದುಕಿನ ಮೇಲೆ ಮಾಡಿ ಅಂತ ಜನರು ಸಂದೇಶ ಕೊಟ್ಟಿದ್ದಾರೆ. ಇವತ್ತು ಐದು ಗ್ಯಾರಂಟಿಗಳನ್ನು ಬೇರೆ ಬೇರೆ ವ್ಯಾಖ್ಯಾನಗಳು ಮಾಡಲಾಗಿತ್ತು. 55 ಸಾವಿರ ಕೋಟಿ ವರ್ಷಕ್ಕೆ ನೀಡಿ ನಾವು ಗ್ಯಾರಂಟಿ ನಡೆಸ್ತಿದ್ದೇವೆ. ಜನರು ಮನೆ ದೀಪ, ಬದುಕು, ಪ್ರಯಾಣ, ಹೀಗೆ ಜನರು ತಮ್ಮ ಬದುಕನ್ನು ಗ್ಯಾರಂಟಿಯಿಂದ ಉಳಿಸಿಕೊಂಡಿದ್ದಾರೆ ಎಂದು ಡಿಕೆಶಿ ಹೇಳಿದರು.
ಇದು ಜೆಡಿಎಸ್ ಸೋಲು
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ ಅಂತ ನಾನು ಹೇಳೋದಿಲ್ಲ. ಅದು ಜೆಡಿಎಸ್ನ ಸೋಲು. ನಿಮ್ಮ ಸಮೀಕ್ಷೆ ಸುಳ್ಳಾಗ್ತದೆ ಎಂದು ನಾನು ನಿನ್ನೆ ಸಂಜೆಯೇ ಹೇಳಿದ್ದೆ.ನಾನು ಮಾಡಿದ್ದ ಸಮೀಕ್ಷೆಯಲ್ಲಿ ಮೂರಕ್ಕೆ ಮೂರು ಗೆಲ್ಲುವ ವಿಶ್ವಾಸ ಇತ್ತು. ಕೆಲವು ಕ್ಷೇತ್ರದ ಸೋಲು, ಗೆಲುವು ನನ್ನದೇ ಎಂದು ಹೇಳಿದ್ದೆ ಎಂದು ಸ್ಮರಿಸಿದರು.
ನಿಖಿಲ್ ಕುಮಾರಸ್ವಾಮಿ ಸೋಲು ಎಂದು ನಾನು ಹೇಳೋದಕ್ಕೆ ಸಿದ್ಧನಿಲ್ಲ. ಅವರ ತಂದೆ ಅಲ್ಲಿಂದಲೇ ಗೆದ್ದು ಮುಖ್ಯಮಂತ್ರಿ, ಕೇಂದ್ರ ಸಚಿವ ಆಗೋಕೆ ಹೋದರು. ಇದರಿಂದಾಗಿ ಜನರು ಅವರಿಗೆ ಒಂದು ತೀರ್ಪನ್ನು ಕೊಟ್ಟಿದ್ದಾರೆ. ಭರತ್ ಬೊಮ್ಮಾಯಿ ಸುಪುತ್ರ ಭರತ್ ಗೂ ಇದೇ ಆಗಿದೆ. ಚನ್ನಪಟ್ಟಣದಲ್ಲಿ ಕಳೆದ ಚುನಾವಣೆಯಲ್ಲಿ ನಮಗೆ 15 ಸಾವಿರ ಮಾತ್ರ ಮತ ಬಂದಿತ್ತು. ಈಗ ಮತಗಳ ಪ್ರಮಾಣ ಹೆಚ್ಚಾಗಿದೆ ಎಂದರು.
ಇವೆಲ್ಲಾ ಜನರ ಗೆಲುವು ಅಲ್ಲವೇ? ಇದು ಅಭಿವೃದ್ಧಿಯಲ್ಲವೇ? ಇವರು ಬರಿ ಸುಳ್ಳು ಹೇಳಿ ರಾಜಕಾರಣ ಮಾಡ್ತಿದ್ದಾರೆ. ಸುಳ್ಳೇ ನಮ್ಮ ಮನೆ ದೇವರು ಅಂತ ಚುನಾವಣೆಗೆ ಹೋದರು. ಏನಾಯ್ತು ನೋಡಿ? ಬೊಮ್ಮಾಯಿ ಮಗ ಸೋತ ಅಂತರ ಎಷ್ಟು? ನಿಖಿಲ್ ಕುಮಾರಸ್ವಾಮಿ ಸೋತ ಮತದ ಅಂತರವೆಷ್ಟು ನೀವೇ ನೋಡಿ? ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಿಕ್ಕ ಮತ ಈಗ ಸಿಕ್ಕಿರುವ ಮತ ಎಷ್ಟು ಅಂತ ತಾಳೆ ಮಾಡಿ ಎಂದರು.
ಕಮಲ ಕೆಸರಲ್ಲಿದ್ರೆ ಚೆಂದ
ಕಮಲ ಕೆಸರಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ರೆ ಮಾತ್ರ ಚೆಂದ ಅನ್ನೋದು ಇದಕ್ಕೆ ನಾನು ಎಂದಿದ್ದಾರೆ. ಸಿದ್ದರಾಮಯ್ಯನವರನ್ನು ಯಾವ ರೀತಿ ಲೇವಡಿ ಮಾಡಿದ್ರು, ವಿಪಕ್ಷಗಳು ಇವರ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು ಏನೂ ಇಲ್ಲದೆ ಇವರು ಆರೋಪ ಮಾಡಿ, ದೊಡ್ಡದು ಮಾಡಿದ್ರಲ್ವಾ? ಜನರು ಏನು ಉತ್ತರ ಕೊಟ್ರು ಈಗ? ಚನ್ನಪಟ್ಟಣದಲ್ಲಿ ಆರಂಭದಲ್ಲೇ ಜನರು ಅವರ ತೀರ್ಮಾನ ಮಾಡಿದ್ರು. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಸರ್ಕಾರ ನಡೀಬೇಕು ಅಂತ ಜನ ಆಶಿಸಿದ್ದಾರೆ ಎಂದು ಡಿಕೆಶಿ ಹೇಳಿದರು.




