Saturday, May 18, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಕೊಬ್ಬರಿ ಖರೀದಿ ನೋಂದಣಿಯಲ್ಲಿ ಅವ್ಯವಹಾರ: ರೈತರ ಪ್ರತಿಭಟನೆ

ನಾಗಮಂಗಲ ತಾಲ್ಲೂಕಿನ ಕದಬಹಳ್ಳಿ ಎ.ಪಿ.ಎಂ.ಸಿ  ಉಪ ಮಾರುಕಟ್ಟೆ ಆವರಣದಲ್ಲಿ ನಾಫೆಡ್ ಮೂಲಕ ರೈತರ ಕೊಬ್ಬರಿಗಳು ಖರೀದಿ ಮಾಡುವ ನೋಂದಣಿ ಕೇಂದ್ರದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ನೈಜ್ಯ ರೈತರನ್ನು ನೋಂದಣಿ ಮಾಡದೆ ವಂಚಿಸಲಾಗಿದೆ ಎಂದು ಆರೋಪಿಸಿ ರೈತರು ಶನಿವಾರ ಪ್ರತಿಭಟನೆ ನಡೆಸಿದರು.

ಕೊಬ್ಬರಿ ಅಂಗಡಿ ಮಾಲೀಕರು ಮತ್ತು ದಳ್ಳಾಳಿಗಳ ಮೂಲಕ ಕೊಬ್ಬರಿಗಳನ್ನು ಪ್ರತಿ ಎಕರೆಗೆ ಲಂಚವಾಗಿ ಸಾವಿರ ರೂಪಾಯಿಗಳನ್ನು ಪಡೆದು, ಬೇರೆ ಬೇರೆ ಗ್ರಾಮಗಳಲ್ಲಿ ನೋಂದಣಿ ಮಾಡಿ, ಮೂರೇ ದಿನದಲ್ಲಿ ನ್ಯಾಫೆಡ್ ನೋಂದಣಿ ಕೇಂದ್ರವನ್ನು ಮುಚ್ಚಿದ್ದಾರೆ ಎಂದು ಆರೋಪಿಸಿ ಕೊಬ್ಬರಿ ಬೆಳೆದ ರೈತರು ಮತ್ತು ಮೂಲ ರೈತ ಸಂಘಟನೆ ವತಿಯಿಂದ ರಾಜ್ಯ ಸರ್ಕಾರ ಮತ್ತು ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ದ ಅವರಿಗೆ ಧಿಕ್ಕಾರ ಕೂಗಿ ಸಾಂಕೇತಿಕ ಪ್ರತಿಭಟನೆ ನಡೆಸಲಾಅಯಿತು.

ನಾಗಮಂಗಲ ಮೂಲ ರೈತ ಸಂಘಟನೆಯ ಅಧ್ಯಕ್ಷ ಎಲ್ ಸುರೇಶ್ ಮಾತನಾಡಿ, ನಮ್ಮ ತಾಲ್ಲೂಕಿನವರೇ ಆದ ಕೃಷಿ ಸಚಿವ ಚಲುವರಾಯಸ್ವಾಮಿ ಇದ್ದರು ಕೂಡ ನಾಗಮಂಗಲ ತಾಲೂಕಿನ ರೈತಾಪಿ ವರ್ಗದವರಿಗೆ ಅನ್ಯಾಯವಾಗುತ್ತಿದೆ, ನ್ಯಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡುತ್ತೇವೆ ಎಂದು ಹೇಳಿ ರೈತರಿಗೆ ಟೋಕನ್ ಗಳನ್ನು ನೀಡಿ ಅಕ್ರಮವಾಗಿ ಬೇರೊಂದು ಸ್ಥಳದಲ್ಲಿ ಕೊಬ್ಬರಿ ಅಂಗಡಿ ಮಾಲೀಕರು ಮತ್ತು ದಳ್ಳಾಳಿಗಳ ಜೊತೆಗೂಡಿ ನೊಂದಣಿ ಮಾಡಿಕೊಂಡಿದ್ದಾರೆ, ಇದರಿಂದ ಮೂಲ ರೈತರಿಗೆ ಅನ್ಯಾಯವಾಗಿದೆ ಎಂದು ದೂರಿದರು.

ಖಜಂಚಿ ಬೋರೇಗೌಡ ಮಾತನಾಡಿ, ಟೋಕನ್ ಗಳನ್ನು ನೀಡಿ ರೈತರಿಗೆ ಟೋಪಿ ಹಾಕಿದ್ದಾರೆ, ನಿಯಮ ಬದ್ಧವಾಗಿ ಕೊಬ್ಬರಿ ಖರೀದಿ ಮಾಡದೆ ದಳ್ಳಾಳಿಗಳ ಜೊತೆ ಸೇರಿ ರೈತರಿಗೆ ಅನ್ಯಾಯವೆಸಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

ಪ್ರತಿಭಟನೆಯಲ್ಲಿ ಮೂಲ ರೈತ ಸಂಘಟನೆಯ ಗೌರವಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಲೋಕೇಶ್, ಖಜಾಂಚಿ ಬೋರೇಗೌಡ, ಆದರ್ಶ, ರವಿಕಿರಣ್, ನಾಗೇಗೌಡ, ಪ್ರವೀಣ್, ಚೇತನ್, ರಘು, ರೈತರಾದ ಬಾಬು, ಪುಟ್ಟರಾಜು, ಮಧು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!