Sunday, November 22, 2026

ಪ್ರಾಯೋಗಿಕ ಆವೃತ್ತಿ

ಚುನಾವಣಾ ಜಯಭೇರಿ | ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ

ರಾಜ್ಯದ ಮೂರು ಕ್ಷೇತ್ರದ ವಿಧಾನ ಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದಕ್ಕೆ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮನ್ ಮುಲ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕೆಬ್ಬಳ್ಳಿ ರಾಜು ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು ಪ್ರತಿಯೊಂದು ಮನೆಗೆ ತಲುಪಿ ಜನರು ಕಾಂಗ್ರೆಸ್ ಪರ ಇದ್ದೇವೆ ಎಂಬುದನ್ನು ಈ ಉಪಚುನಾವಣೆಯಲ್ಲಿ ತೋರಿಸಿದ್ದಾರೆ ಎಂದರು.

ವಿರೋಧ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕು ಕೆಟ್ಟ ಪ್ರಚಾರ, ಇಲ್ಲಸಲ್ಲದ ಆರೋಪ ಮಾಡಿ ಚುನಾವಣೆ ಗೆಲ್ಲುತ್ತೇವೆ ಎನ್ನುವುದು ಅವರ ಮೂರ್ಖತನದ ಪರಮಾವಧಿ. ಜನತೆಯ ನೋವಿಗೆ ಬಡವರ ಸಂಕಷ್ಟಕ್ಕೆ ಸ್ಪಂದನೆ ಮಾಡಿದರೆ ಜನ ನಮ್ಮ ಪರವಾಗಿ ಇರುತ್ತಾರೆ ಎಂಬುದಕ್ಕೆ ಈ ಉಪಚುನಾವಣೆಯ ಗೆಲುವು ಉದಾಹರಣೆ ಎಂಬುದು ಎಂದು ತಿಳಿಸಿದರು.

ರಾಜ್ಯದ ಮೂರು ಕ್ಷೇತ್ರಗಳಲ್ಲಿ ಸ್ಪಷ್ಟವಾದ ಜನಾದೇಶವನ್ನು ಕಾಂಗ್ರೆಸ್ ಪರವಾಗಿ ಜನರು ಕೊಟ್ಟಿದ್ದಾರೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸುಭದ್ರವಾಗಿದೆ ಎಂಬುದನ್ನ ತೋರಿಸಿದ್ದಾರೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್. ಅಪ್ಪಾಜಿ, ನಗರ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ,ಕಾರ್ಮಿಕ ವಿಭಾಗದ ಶಿವರುದ್ರ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಚಿನಕುರಳಿ ರಮೇಶ್, ಕಾಡ ಮಾಜಿ ಸದಸ್ಯ ಹಂಚಹಳ್ಳಿ ಲೋಕೇಶ್,ಚಂದಗಾಲು ವಿಜಯಕುಮಾರ್, ಕಾಂಗ್ರೆಸ್ ನಾಯಕ ಶಿವನಂಜು, ನಗರಸಭಾ ಸದಸ್ಯ ಶ್ರೀಧರ್, ಪೇಟೆ ಬೀದಿ ರಾಜು, ವಿಜಯಲಕ್ಷ್ಮಿ ರಘುನಂದನ್, ಎಲ್.ಸಂದೇಶ್, ಸಿ.ಎಂ.ದ್ಯಾವಪ್ಪ, ಉಮ್ಮಡಹಳ್ಳಿ ನಾಗೇಶ್, ಚನ್ನಪ್ಪ, ಪ್ರಕಾಶ್, ದೇವರಾಜು ಮತ್ತಿತರರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ