ಹಸುಗಳು ಅಪರೂಪಕ್ಕೊಮ್ಮೆ ಅವಳಿ ಕರುಗಳಿಗೆ ಜನ್ಮ ನೀಡುವುದನ್ನು ನಾವು ಗಮನಿಸಿದ್ದೇವೆ, ಆದರೆ ತ್ರಿವಳಿ ಕರುಗಳ ಜನನ ಅಪರೂಪದಲ್ಲೇ ಅಪರೂಪ ಎನ್ನಬಹುದು. ಆದರೆ ಅಂತಹ ಮೂರು ಹೆಣ್ಣು ಕರುಗಳಿಗೆ ಏಕಕಾಲದಲ್ಲಿ ಹಸುವೊಂದು ಜನ್ಮ ನೀಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ ನಡೆದಿದೆ.
ಅವಳಿಯಲ್ಲ; ತ್ರಿವಳಿ ಕರುಗಳ ಜನನ; ಮಾಲೀಕರಿಗೆ ತ್ರಿಬಲ್ ಧಮಾಕ!!
ಮಂಡ್ಯ ಜಿಲ್ಲೆ ಪಾಂಡುಪುರ ತಾಲೂಕು ಡಿಂಕ ಗ್ರಾಮದಲ್ಲಿ, ಹೆಚ್.ಎಫ್ ತಳಿಯ ಹಸುವೊಂದು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ಹಸು ಹಾಗೂ ಅದರ ಮೂರು ಕರುಗಳು ಆರೋಗ್ಯವಾಗಿವೆ. pic.twitter.com/MGOkZf7Xma
— ಪರಿಸರ ಪರಿವಾರ (@Parisara360) November 29, 2024
“>ಅವಳಿಯಲ್ಲ; ತ್ರಿವಳಿ ಹೆಣ್ಣು ಕರುಗಳ ಜನನದಿಂದ ಹಸುವಿನ ಮಾಲೀಕ ಚಂದ್ರು ಅವರು ಫುಲ್ ಖುಷಿಯಾಗಿದು, ತ್ರಿಬಲ್ ಧಮಾಕದ ಸಂತಸದಲ್ಲಿದ್ದಾರೆ. ಹೆಚ್.ಎಫ್ ತಳಿಯ ಹಸುವು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದ್ದು, ಹಸು ಹಾಗೂ ಅದರ ಮೂರು ಕರುಗಳು ಆರೋಗ್ಯವಾಗಿರುವುದು ವಿಶೇಷವಾಗಿದೆ.
ಈ ಬಗ್ಗೆ ನುಡಿಕರ್ನಾಟಕ.ಕಾಂ ಜೊತೆಗೆ ಮಾತನಾಡಿದ ಚಂದ್ರು, ಹಸುವು ಏಕಕಾಲದಲ್ಲಿ ಮೂರು ಕರುವಿಗೆ ಜನ್ಮನೀಡಿದೆ. ಮೊದಲಿಗೆ ಒಂದು ಕರುವನ್ನು ಸಣ್ಣದಾಗಿ ಹಾಕಿತು, ಇದೇನೂ ಸಣ್ಣದಾಗಿ ಹಾಕಿದೆ ಎಂದುಕೊಂಡೆವು, ಆನಂತರ ಮತ್ತೊಂದು ಕರುವನ್ನು ಹಾಕಿತು, ನಾವು ಹಸುವಿಗೆ ತಿಂಡಿಯನ್ನು ಕಲಸಿ ಇಟ್ಟೇವು. ಆನಂತರ ಮತ್ತೊಂದು ಕರುವಿಗೆ ಜನ್ಮ ನೀಡಿತು ಎಂದು ವಿವರಿಸಿದರು.
ನಮ್ಮ ಹಸುವನ್ನು ನೋಡಲು ರಾಗಿಮುದ್ದನಹಳ್ಳಿ, ಶೆಟ್ಟಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂಧ ಜನರು ಬಂದು ಹಸುವನ್ನು ನೋಡಿಕೊಂಡು ಹೋಗುತ್ತಿದ್ದಾರೆ ಇದು ನಮ್ಮ ಕುಟುಂಬಕ್ಕೆ ಸಂತಸ ತಂದಿದೆ ಎಂದರು.




