ನಮ್ಮ ಜೊತೆಗೆ ಇದ್ದವನು ಹೀರೋ ಆಗಿದ್ದಾನೆ
ರಂಗಭೂಮಿ ಕಲಾವಿದ ನಾಟಕ ಮಾಡೋಕೆ ನಿಂತರೆ ಕಳೆದು ಹೋಗುವ ಹಾಗೆ ಅಭಿನಯ ಮಾಡ್ತಾನೆ. ಆತ್ಮೀಯ ಗೆಳೆಯ ಧೀರ ಭಗತ್ ರಾಯ್ ಹೀರೋ ನಮ್ಮ ಹುಡ್ಗ ನಮ್ಮ ಜೊತೆಗೆ ಇದ್ದವನು ಹೀರೋ ಆಗಿದ್ದಾನೆ ಅನ್ನೋದು ನಮ್ಮ ಹೆಮ್ಮೆ.

ಸರ್ಕಾರಿ ಶಾಲೆ ಉಳಿಸಿ ಅಭಿಯಾನ 16ನೇ ಶಾಲೆ ಇಂದ 53ನೇ ಶಾಲೆವರೆಗೂ ಎಷ್ಟೆ ದೊಡ್ಡ ಅಥವಾ ತುರ್ತು ಕಾರ್ಯ ಇದ್ರು ಜೊತೆಗೆ ಬಂದು ಶಾಲೆ ಕೆಲಸವೆಲ್ಲ ಪೂರ್ತಿಯಾಗಿ ಒಳ್ಳೆ ಸಹಕಾರದಿಂದ ಹೇಳಿದ ಪೈಂಟ್ ಕೆಲಸ ಮಾಡಿಕೊಂಡು ಪೈಂಟ್ ನಲ್ಲಿ ಮುಖ್ಯವಾಗಿ ಗೋಡೆ ಸಿಲಿಂಗ್ ಪೈಂಟ್ ಹಚ್ಚುವುದು ತುಂಬಾ ಸುಲಭದ ಮಾತಲ್ಲ ಅಚ್ಚುಕಟ್ಟಾಗಿ ಪೈಂಟ್ ಮಾಡಿ ಜೊತೆಗೆ ಬಂದ ಸಹ ಸದಸ್ಯರನ್ನು ರಾಕಿ ಕಲೆ ಆಟ ದಿಂದ ರಂಜಿಸಿ ಆಕ್ಟಿವ್ ಯಾವಾಗಲೂ ಶ್ರಮ ವಹಿಸಿ ಕೆಲಸ ಮಾಡುವ ಗೆಳೆಯ ಧೀರ ಭಗತ್ ರಾಯ್ ಸಿನಿಮಕ್ಕಾಗಿ ಸಿಕ್ಕಾಪಟ್ಟೆ ಶ್ರಮ ಹಾಕಿದ್ದಾರೆ.

ಜೊತೆಗೆ ಜೀವನದ ಮುಖ್ಯ ಸಮಯವನ್ನ ಸಿನಿಮಾ ಕ್ಕಾಗಿ ಮೀಸಲು ಇಟ್ಟಿದ್ದಾನೆ ,ಇವರ ಅಪ್ಪನು ದಳವಾಯಿ ರಂಗಭೂಮಿ ಕಲಾವಿದರು, ನಟನೆ ರಕ್ತದಲ್ಲಿಯೇ ಬಂದಿದೆ. ಸಿನಿಮಾಕ್ಕಾಗಿ ಹಾಕಿದ ಶ್ರಮ ಯಾವತ್ತೂ ವ್ಯರ್ಥ ಆಗೋಲ್ಲ, ಅಪ್ಪಟ ಬಡವರ ಮನೆ ಹುಡ್ಗ ಬೆಳೆದು ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಒಂದು ದೊಡ್ಡ ಮೈಲುಗಲ್ಲು ಆಗಲಿ, ಒಳ್ಳೇದು ಆಗ್ಲಿ, ಇದೆ ಡಿಸೆಂಬರ್ 6 ಕ್ಕೆ ಬಿಡುಗಡೆ ಆಗುತ್ತೆ, ಶ್ರಮಕ್ಕೆ ಪ್ರತಿಫಲಕ್ಕಾಗಿ ನೀವೆಲ್ಲ ಬಂದು ಸಿನಿಮಾ ನೋಡಿ… ಬಡವರ ಮನೆ ಮಗ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆ ಕನ್ನಡದ ಕಲಾವಿದನಾಗಿ ಬೆಳೆದು ನಿಲ್ಲಲಿ…
ನಮ್ಮ ರಾಕೇಶ್ ದಳವಾಯಿ ರಾಕಿ ಬಾಯ್ ತರ ದೊಡ್ಡ ಮಟ್ಟಕ್ಕೆ ಬೆಳೆದು ನಿಲ್ಲಲಿ.. ಇದೆ ಶುಕ್ರವಾರ ಬಿಡುಗಡೆ ಆಗುವ ಸಿನಿಮಾ ನೋಡಿ ಸಿನಿಮಾ ಬಗ್ಗೆ ಬರೆದು ಒಳ್ಳೆ ಪ್ರೋತ್ಸಾಹ ನೀಡಿ…
ನಾಯಿಗುತ್ತಿ ಪಾತ್ರಕ್ಕೆ ಜೀವ ತುಂಬಿದ ಕಲಾವಿದ
ಗೆಳೆಯ ರಾಕೇಶ್ ದಳವಾಯಿ ಮಲೆಗಳಲ್ಲಿ ಮದುಮಗಳು ರಂಗಪ್ರಯೋಗದಲ್ಲಿ ನಾಯಿಗುತ್ತಿ ಪಾತ್ರಕ್ಕೆ ಜೀವ ತುಂಬಿದ ಕಲಾವಿದ.

ಕುವೆಂಪು ಕಂಡ ನಾಯಿಗುತ್ತಿ ಹೀಗೇ ಇದ್ದನೇನೋ ಅನ್ನುವಷ್ಟು ಆ ಪಾತ್ರಕ್ಕೆ ನ್ಯಾಯ ಒದಗಿಸಿದವರು. ಈ ಒಂದು ಪಾತ್ರ ನಿರ್ವಹಣೆಯೇ ಸಾಕು ಅವರ ಅಭಿನಯದ ಕುರಿತು ರೇಟಿಂಗ್ಸ್ ಕೊಡಲು….
ಅಂತಹ ಅದ್ಭುತ ಪ್ರತಿಭೆ ಇದೀಗ ಧೀರ ಭಗತ್ ರಾಯ್ ಆಗಿ ಕನ್ನಡ ಚಿತ್ರರಂಗದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಭೂ ಸುಧಾರಣಾ ಕಾನೂನುಗಳು ಬಂದಾಗ ಉಳುವವರ ಮೇಲೆ ನಡೆದ ದೌರ್ಜನ್ಯದ ಸುತ್ತ ಹೆಣೆದ ಕಥೆ ಅನ್ನೋದು ಟ್ರೈಲರ್ ನೋಡಿದಾಗ ಅನ್ನಿಸಿದ್ದು.
“ದೇವರ ದೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು ಎಂಬುದು ನನಗೆ ಬೇಕಿಲ್ಲ, ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುವುದು ನನಗೆ ಬೇಕು” – ಎಂಬ ಬಾಬಾ ಸಾಹೇಬರ ಸಮಾನತೆಯ ಮಂತ್ರವನ್ನು ಸಾರುವ ಈ ಚಿತ್ರ ಯಶಸ್ಸು ಕಾಣಲಿ. ಗೆಳೆಯ ರಾಕೇಶ್ ಗೆ ಅಪಾರ ಅವಕಾಶಗಳು ಒಲಿದು ಬರಲಿ.
ಡಿಸೆಂಬರ್ 6 ರಂದು ತೆರೆಕಾಣುತ್ತಿರುವ ಈ ಚಿತ್ರವನ್ನು ಕನ್ನಡಿಗರು ಅಪ್ಪಿಕೊಳ್ಳುತ್ತಾರೆ ಎನ್ನುವ ಭರವಸೆ ಮೂಡಿದೆ.
ಪಾತ್ರಗಳಿಗೆ ಜೀವ ತುಂಬುವ ಕಲಾವಿದ
ರಾಕೇಶ್ ದಳವಾಯಿ ಅವರು ಮಲೆಗಳಲ್ಲಿ ಮಧುಮಗಳು ನಾಟಕದ ನಾಯಿಗುತ್ತಿ ಪಾತ್ರದ ಮೂಲಕ ನನಗೆ ಪರಿಚಿತರು. ರಾತ್ರಿಯಿಡೀ ನಡೆಯುವ ನಾಟಕದಲ್ಲಿ ಎಲ್ಲರೂ ಅತ್ಯುತ್ತಮವಾಗಿ ನಟಿಸಿದ್ದರು, ಅವರ ಶ್ರಮದಿಂದಾಗಿಯೇ ನಾಟಕ ನೂರಾರು ಪ್ರದರ್ಶನ ಕಂಡಿದ್ದು. ಆದರೆ ಎನರ್ಜಿಟಿಕ್ ಆಗಿ ಇಡೀ ನಾಟಕವನ್ನ ಆವರಿಸಿದ ಕೆಲವೇ ಪಾತ್ರಗಳಲ್ಲಿ ರಾಕೇಶ್ ಅವರೂ ಒಬ್ಬರು.

ನಾಟಕದ ಹಿನ್ನೆಲೆಯಿಂದ ಬಂದ ಹಲವು ನಟ ನಟಿಯರು ಇಂದು ಸಿನಿಮಾ ಕ್ಷೇತ್ರದಲ್ಲಿ ಪಾತ್ರಗಳಿಗೆ ಜೀವ ತುಂಬುತ್ತಾ ದೃಶ್ಯ ಮಾಧ್ಯಮವನ್ನ ಉಳಿಸಿಕೊಂಡು ಹೋಗುತ್ತಿದ್ದಾರೆ.
ಕನ್ನಡಕ್ಕಾಗಿ ಸಿನಿಮಾ ನೋಡೋಣ,
ಮೇಕಿಂಗ್ ಗಾಗಿ ಸಿನೆಮಾ ನೋಡೋಣ
ನಿರ್ಮಾಪಕರ ಹಣಕ್ಕಾಗಿ ಸಿನೆಮಾ ನೋಡೋಣ ಎಂದು ಹೇಳುತ್ತಾ ಸಿನೆಮಾ ಮಾಧ್ಯಮವನ್ನ ಅತೀ ಭಾವುಕತೆಯಡಿಯಲ್ಲಿ ನೂಕಿ ಪ್ರೇಕ್ಷಕ ಸಮುದಾಯವನ್ನ ದೂರ ಮಾಡಿಕೊಳ್ಳುತ್ತಿರುವವರ ಮಧ್ಯೆ,. ನಮ್ಮ ಸಿನೆಮಾದ ಕಂಟೆಂಟ್ ಚೆನ್ನಾಗಿಲ್ಲದೆ ಇದ್ರೆ ದಯವಿಟ್ಟು ನಿಮ್ಮ ನೇರ ಅಭಿಪ್ರಾಯ ಹಂಚಿಕೊಳ್ಳಿ ಎಂದು ಹೇಳುತ್ತಾ ಪ್ರಚಾರ ಮಾಡುತ್ತಿರುವ ಈ ತಂಡಕ್ಕೆ ನಿಜಕ್ಕೂ ಬೆಂಬಲ ಸಿಗಬೇಕು.
ಈಗಾಗಲೇ ರಾಕೇಶ್ ದಳವಾಯಿ ಅವರ ತಂಡ ಮೆಟ್ರೋ ನಿಲ್ದಾಣ ಬಸ್ ನಿಲ್ದಾಣ ಕಡ್ಲೆಕಾಯಿ ಪರಿಷೆ ಮುಂತಾದ ಕಡೆ ಕರಪತ್ರ ಹಿಡಿದು ಪ್ರಚಾರ ಮಾಡುತ್ತಿರುವುದನ್ನ ನಾವೆಲ್ಲರೂ ಗಮನಿಸಿದ್ದೇವೆ. ದುಡ್ಡಿನ ಮಾರುಕಟ್ಟೆಯಲ್ಲಿ ಒಂದು ಒಳ್ಳೆಯ ಕಂಟೆಂಟ್ ನ ಜನರಿಗೆ ತಲುಪಿಸುವುದು ಎಷ್ಟು ಕಷ್ಟ ಅನ್ನೋದು ನನಗೆ ತಿಳಿದಿದೆ.
ನಾನಂತು ಮೊದಲ ದಿನವೇ ಈ ಸಿನೆಮಾ ನೋಡ್ತೇನೆ, ಟ್ರೈಲರ್ ನೋಡಿ ನಿಮಗೆ ಇಷ್ಟವಾಗತ್ತೆ, ಇಷ್ಟವಾದರೆ ದಯವಿಟ್ಟು ನೀವೂ ನೋಡಿ ನಿಮ್ಮ ಸ್ನೇಹಿತರಿಗೂ ತಿಳಿಸಿ.
ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಯಾವುದೇ ಮುಲಾಜಿಲ್ಲದೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ, ಚೆನ್ನಾಗಿದ್ದರೆ ಸಂಕೋಚ ಬಿಟ್ಟು ನಾಲ್ಕು ಜನಕ್ಕೆ ನೋಡಲು ಹೇಳಿ.
ಹೊಸ ತಂಡಕ್ಕೆ ಒಳಿತಾಗಲಿ……




