Saturday, May 18, 2024

ಪ್ರಾಯೋಗಿಕ ಆವೃತ್ತಿ

ಹೆಚ್.ಡಿ.ಕುಮಾರಸ್ವಾಮಿಯೇ ಮಂಡ್ಯಕ್ಕೆ ಮೈತ್ರಿ ಅಭ್ಯರ್ಥಿ: ಸಿ.ಎಸ್.ಪುಟ್ಟರಾಜು

ನೂರಕ್ಕೆ ನೂರು ಕುಮಾರಣ್ಣನೇ ಮಂಡ್ಯ ಲೋಕಸಭೆಗೆ ಮೈತ್ರಿ ಅಭ್ಯರ್ಥಿ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಸ್ಪಷ್ಟಪಡಿಸಿದ್ದಾರೆ.

ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೆ ನಿಂತು ಕುಮಾರಣ್ಣನ ಚುನಾವಣೆ ಮಾಡಲಿದ್ದೇನೆ. ಅತ್ಯಂತ ಪ್ರಚಂಡವಾಗಿ ಅವ್ರನ್ನ ಗೆಲ್ಲಿಸಲಿದ್ದೇವೆ. ಕುಮಾರಣ್ಣ ಅರ್ಜಿ ಹಾಕಿದ್ರೆ ಸಾಕು ಚುನಾವಣೆ ನಾವು ಮಾಡ್ತೇವೆ. ದೇವೇಗೌಡರ ಆಶಿರ್ವಾದ, ಮೋದಿಯವ್ರ ಸಹಕಾರದಿಂದ ಅತ್ಯಂತ ಬಹುಮತದಿಂದ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋಲಾರ, ಮಂಡ್ಯ, ಹಾಸನ ಕ್ಷೇತ್ರಗಳಿಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಿದ್ದೇವೆ. ಸಣ್ಣಪುಟ್ಟ ವ್ಯತ್ಯಸಗಳನ್ನ ಬಗೆ ಹರಿಸುವುದಾಗಿ ಬಿವೈ ವಿಜಯೇಂದ್ರ ತಿಳಿಸಿದ್ದಾರೆ. ನಾಳೆ ಬಿಜೆಪಿ ಹೈಕಮಾಂಡ್ ಜೆಡಿಎಸ್ ಗೆ ಯಾವ ಕ್ಷೇತ್ರಗಳು ಎಂದು ತಿಳಿಸಲಿದೆ ಎಂದರು.

ಕಾಂಗ್ರೆಸ್ ನಾಯಕರು ಪುಟ್ಟರಾಜುಗೆ ಗಾಳ ಹಾಕಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ದೇವೇಗೌಡರ ಮನೆ ಮಗನಾಗಿದ್ದೇನೆ. ನನ್ನ ಕೊನೆ ಉಸಿರು ಇರುವವರೆಗೂ ದೇವೇಗೌಡರ ಮನೆ ಮಗನಾಗೆ ಇರ್ತಿನಿ ಎಂದರು.

ಸುಮಲತಾ ಅಂಬರೀಶ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೆ ರಾಜಕೀಯವಾಗಿ ವ್ಯತ್ಯಾಸಗಳು ಆಗಿವೆ.
ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಮಿತ್ರರೂ ಅಲ್ಲಾ. ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದರು.

ಸ್ವಂತ ನಿರ್ಧಾರಗಳನ್ನ ಜೆಡಿಎಸ್ ಮಾಡಲು ಆಗ್ತಿಲ್ಲ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ಉತ್ತರಿಸಿದ ಅವರು, ಚಲುವರಾಯಸ್ವಾಮಿ ನಮ್ಮ ಎಡ್ ಮಾಸ್ಟರ್. ಚಲುವರಾಯಸ್ವಾಮಿ ಹೇಳಿದಾಗೆ ನಾವು ನಡೆದುಕೊಳ್ತಿವಿ.
ಅವ್ರಿಲ್ಲದೆ ನಾವು ಈಗ ಕಂಗಾಲಾಗಿದ್ದೇವೆ. ಅವ್ರು ಇದನ್ನ ಹೇಳಬೇಕಾದದ್ದೆ ಹೇಳಿದ್ದಾರೆ ಎಂದರು.

ಸ್ಟಾರ್ ಚಂದ್ರು ಸ್ಥಳಿಯ ಅಭ್ಯರ್ಥಿ ಎಂದು ಮತ ಕೇಳ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಣ್ಣನ ತೋಟದ ಮನೆಗೆ 20 ನಿಮಿಷದ ಜರ್ನಿ ಅಷ್ಟೆ. ಸ್ಟಾರ್ ಚಂದ್ರು ಮನೆ ಇರೋದು ಡಾಲರ್ಸ್ ಕಾಲೋನಿಯಲ್ಲಿ.
ಅವ್ರ ಮನೆಗೆ ಹೋಗಲು ಒಂದುವರೆ ಗಂಟೆ ಬೇಕು. ಯಾರು ದೂರದಲ್ಲಿದ್ದಾರೆ ಅಂತ ಮಂಡ್ಯ ಜನ ತೀರ್ಮಾನ ಮಾಡ್ತಾರೆ. ಮಂಡ್ಯ ಜನ ಕುಮಾರಣ್ಣನನ್ನ ಹೃದಯದಲ್ಲಿ ಇಟ್ಕೊಂಡಿದ್ದಾರೆ. ಸ್ಟಾರ್ ಚಂದ್ರು ಯಾವುದೋ ದುಡ್ಡು ತಂದು ಟೆಂಪ್ರವರಿ ಮನೆ ಸೆಟಪ್ ಮಾಡಿದ್ರೆ ಮಂಡ್ಯ ಜನ ಮೆಚ್ಚಲ್ಲ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!