Tuesday, November 24, 2026

ಪ್ರಾಯೋಗಿಕ ಆವೃತ್ತಿ

“ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಾಡೂಟ” : ಅ.ಭಾ. ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಗೋಷ್ಠಿ

ಬಿ.ಪೀರ್ ಬಾಷಾ, ಸಾಹಿತಿ

ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬೇಕು ಎಂದು ಯಾವತ್ತೂ ಯಾರೂ ಕೇಳಿರಲಿಲ್ಲ. ಆದರೆ ಮದ್ಯ ಮತ್ತು ತಂಬಾಕಿನ ಜೊತೆ ಸೇರಿಸಿ ಬಹುಜನರ ಊಟದ ಬಗ್ಗೆ ಕೀಳು ನುಡಿದ ಬಳಿಕ, ಒಂದು ಊಟವನ್ನು ” ನಿಷೇಧ ” ವೆಂದು ಸಾರಿದರೆಂದ ಬಳಿಕ ಕೇಳಲೇಬೇಕಾಗುತ್ತದೆ;

“ನಮ್ಮ ಊಟವೇಕೆ ಕೀಳು, ಏಕೆ ನಿಷೇಧ?
ಹಾಗಾದರೆ ನಮಗದೇ ಬೇಕು! ನೀವು ಕೊಡಲ್ಲ ಅಂದ್ರೆ ಬುತ್ತಿ‌ಕಟ್ಟಿಕೊಂಡು ಬಂದು ಅಲ್ಲೇ ಕುಂತು ತಿಂತೀವಿ. ಏನು ಮಾಡ್ಕೋತೀರಿ‌ ನೀವು?

ನನ್ನ ಆಹಾರದ ಹಕ್ಕನ್ನೇ ನಿರಾಕರಿಸುವ ಸಾಹಿತ್ಯ ಸಮ್ಮೇಳನಕ್ಕೆ ನನ್ನ ಧಿಕ್ಕಾರವಿದೆ..
ಸಾಹಿತ್ಯ ಪರಿಷತ್ತಿನ ಈ ಫ್ಯೂಡಲ್ ಮನೋಸ್ಥಿತಿಗೆ, ರೋಗಗ್ರಸ್ಥ ಶ್ರೇಷ್ಠತೆಯ ವ್ಯಸನಕ್ಕೆ ನನ್ನ ಧಿಕ್ಕಾರವಿದೆ. ಇದು ಕಾಲದ ತುರ್ತು ಅಗತ್ಯ. ಅದಕ್ಕೆ ಸ್ಪಂದಿಸುವುದು ಬಹುಜನರ ಹಕ್ಕಿನ ಕೂಗಿಗೆ ಸ್ಪಂದಿಸಿದಂತೆ. ಇಂತಹ ದನಿಯ ಹತ್ತಿಕ್ಕುವ ಅಥವಾ ವ್ಯಂಗ್ಯ ದೃಷ್ಟಿಕೋನದಿಂದ ನೋಡುವ ಯಾವುದೇ ಮನೋಸ್ಥಿತಿಗಳು ಕೂಡ ರೋಗಗ್ರಸ್ಥವಾಗಿವೆ ಎಂದೇ ಅರ್ಥ.
ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಇವರ ಮನೆಯ ಮಡಿವಂತಿಕೆಯ ಗರ್ಭಗುಡಿಯಲ್ಲಿ ಅಲ್ಲ. ಅನ್ನುವ ಜ್ಞಾನದ ಕೊರತೆ ಇದೆಯಾ ಇವರಿಗೆ?
-ದೇವರಾಜ್ ಹುಣಸಿಕಟ್ಟಿ

ಇಷ್ಟರ ಮಟ್ಟಿಗೆ ಕೂಳಿನ ಶ್ರೇಷ್ಠತೆಯ ರೋಗ ನಿಮಗೆ ಬಡಿದಿದೆ ಎಂದಾದರೆ, ಅದನ್ನು ಬಿಡಿಸಲೇ ಬೇಕಾಗ್ತದೆ! ಎನ್ನುವುದೂ ಕನ್ನಡ ಸಮಾಜದ ಸ್ವಾಭಿಮಾನದ ಪ್ರಶ್ನೆಯೇ ಆಗ್ತದೆ.

ಕನ್ನಡಿಗರ ಅನ್ನವನ್ನು ನಿಂದಿಸಿದವರು ಕನ್ನಾಡ ದ್ರೋಹಿಗರು.
ಕನ್ನಡಿಗರ ಅನ್ನವನ್ನು ತುಚ್ಚೀಕರಿಸಿ ಕನ್ನಡ ಸಾಹಿತ್ಯವನ್ನು ಮೆರವಣಿಗೆ ಮಾಡಬೇಕಿಲ್ಲ.

“ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಾಡೂಟ” ವೂ ಒಂದು ಅವಿಭಾಜ್ಯ ಸಾಂಸ್ಕೃತಿಕ ವಾಸ್ತವ. ಹಾಗಾಗಿ ಸಾಹಿತ್ಯ ಸಮ್ಮೇಳನದಲ್ಲಿ ಈ ಕುರಿತಂತೆ‌ ಒಂದು ವಿಶೇಷ ಗೋಷ್ಠಿಯಾಗಲಿ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ