Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಭತ್ತದ ಫಸಲಿನ ಮೆದೆಗೆ ಬೆಂಕಿ: ₹1.50 ಲಕ್ಷ ನಷ್ಟ

ಮಂಡ್ಯ ತಾಲ್ಲೂಕಿನ ಉಮ್ಮಡಹಳ್ಳಿ ಗ್ರಾಮದಲ್ಲಿ ಕಟವು ಮಾಡಿ ಮೆದೆ ಹಾಕಲಾಗಿದ್ದ ಭತ್ತದ ಫಸಲಿಗೆ ಆಕಸ್ಮಿಕ ಬೆಂಕಿ ಬಿದ್ದು, ಫಸಲು ಸುಟ್ಟುಹೋಗಿರುವ ಜೊತೆ ₹1.50 ಲಕ್ಷ ಉಂಟಾಗಿರುವ ಘಟನೆ ನಡೆದಿದೆ.

ಉಮ್ಮಡಹಳ್ಳಿ ಗ್ರಾಮದ ಲೇಟ್ ಬೋರಯ್ಯರ ಮಗ ಸಿದ್ದರಾಮು ಅವರಿಗೆ ಸೇರಿದ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಭತ್ತದ ಫಸಲು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಬಾಳುವ ಮೀನಾಕ್ಷಿ ತಳಿಯ ಭತ್ತವನ್ನು ರೈತ ಸಿದ್ದರಾಮು ಬೆಳೆದಿದ್ದರು, ಕೂಯ್ಲು ಮಾಡಿ ಜಮೀನಿನಲ್ಲಿ ಮೆದೆ ಹಾಕಿದ್ದು, ಭತ್ತ ಬಡಿಯಲು ಸಿದ್ಧತೆ ಮಾಡಿಕೊಂಡಿದ್ದಾಗ ಫಸಲಿಗೆ ಬೆಂಕಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.

ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರು, ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಬೆಂಕಿ ನಂದಿಸುವಷ್ಟರಲ್ಲಿ ಫಸಲು ಸಂಪೂರ್ಣವಾಗಿ ಭಸ್ಮವಾಗಿತ್ತು

ಸ್ಥಳಕ್ಕೆ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ