ಗುಜರಾತಿನಲ್ಲಿ ನಿನ್ನೆ ಅಪಘಾತದಲ್ಲಿ ಸಾವಿಗೀಡಾದ ಕೆ ಆರ್ ಎಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಲಿಂಗೇಗೌಡ ಅವರ ಪಾರ್ಥಿವ ಶರೀರವನ್ನು ಇಂದು ಸಂಜೆ 3.30ರ ವೇಳೆಗೆ ಮಂಡ್ಯನಗರದ ಕಾವೇರಿನಗರ (ಎಂಇಎಸ್ ಶಾಲೆ ಸಮೀಪ) 6ನೇ ತಿರುವಿನ ಅವರ ಸ್ವಗೃಹಕ್ಕೆ ತಂದು, ಕೆಲ ಕಾಲ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು.
ಬೆಂಗಳೂರು ವಿಮಾನ ನಿಲ್ದಾಣದಿಂದ ಇಂದು ಮಧ್ಯಾಹ್ನ 1.15 ವನ್ನು ಪಾರ್ಥಿವ ಶರೀರವನ್ನು ಹೊತ್ತ ವಾಹನ ಹೊರಟ್ಟಿದೆ, ಅಲ್ಲಿಂದ ಕೇಂಗೇರಿಯಲ್ಲಿ ಬಂದು ಅಲ್ಲಿ ಕೆಲ ಕಾಲ ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟು, ನಂತರ ಮಂಡ್ಯಕ್ಕೆ ತರಲಾಗುವುದು, ಅನಂತರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮ ಮದ್ದೂರು ತಾಲೂಕಿನ ಸೊಂಪುರ ಗ್ರಾಮಕ್ಕೆ ಕೊಂಡ್ಯೊಯ್ದು ಅಂತಿಮ ವಿಧಿ ವಿಧಾನಗಳನ್ನು ಪೂರೈಸಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.




