Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ನಟ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ ಯಶಸ್ವಿಗಾಗಿ ವಿಶೇಷ ಪೂಜೆ

ಮಳವಳ್ಳಿ ಪಟ್ಟಣದ ಹೊರವಲಯ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಡಾ.ರಾಜ್ ಕುಮಾರ್ ವಂಶದ ಅಭಿಮಾನಿ ದೇವರುಗಳ ಸೇನಾ ಸಮಿತಿ ವತಿಯಿಂದ ಡಾ.ಶಿವರಾಜಕುಮಾರ್ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನಾಗರಾಜು, ಇಂದು ಶಿವರಾಜ್ ಕುಮಾರ್ ಅವರಿಗೆ ಅಮೆರಿಕಾದ ಮಿಮೊರಿ ಆಸ್ಪತ್ರೆಯಲ್ಲಿ ನಡೆಯುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಅವರು ಬೇಗ ಗುಣಮುಖರಾಗಿ ಮುಂದಿನ ದಿನಗಳಲ್ಲಿ ಉತ್ತಮ ಜೀವನ ನಡೆಸಿ ನೂರಾರು ಕಾಲ ಬಾಳಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

ಖಜಾಂಚಿ ಸಿದ್ದೇಶ್ ಮಾತನಾಡಿ, ಡಾ.ಶಿವರಾಜ್​ಕುಮಾರ್ ಅವರು ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದು ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳಾದ ನಾವು ಶಿವಣ್ಣ ಗುಣಮುಖರಾಗಿ ತವರಿಗೆ ಮರಳಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದರು.

ಇದೆ ವೇಳೆಯಲ್ಲಿ ಕಾರ್ಯದರ್ಶಿ ಮೈಲಾರಿ ಮಂಜು, ರವಿ ರಾಣಾ, ರಾಜಣ್ಣ, ಚಿನ್ನಸ್ವಾಮಿ, ರಾಜಣ್ಣ, ಪುಟ್ಟಸ್ವಾಮಿ, ಬಳ್ಳಾರಿ ನಾಗ, ಗೋಪಿ, ನಾಗರಾಜು, ನಿತಿನ್ ರಾಜು, ಬಸವರಾಜು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ