Tuesday, November 24, 2026

ಪ್ರಾಯೋಗಿಕ ಆವೃತ್ತಿ

ಠಾಣೆಗೆ ಬಂದ ಯುವಕನ ಮೇಲೆ ಹಲ್ಲೆ | ಪೊಲೀಸರ ವಿರುದ್ದವು ಕ್ರಮಕ್ಕೆ ಆಗ್ರಹ

ಪಾಂಡವಪುರ ಟೌನ್ ಪೊಲೀಸ್ ಠಾಣೆಗೆ ಪ್ರಕರಣವೊಂದರ ವಿಚಾರಣೆಗೆ ಬಂದ ಸಾಗರ್ ಎಂಬ ಯುವಕನ ಮೇಲೆ ಅಭಿಷೇಕ್‌ ಗೌಡ ಎಂಬ ಪೇದೆ ಏಕಾಏಕಿ ಹಲ್ಲೆ ಮಾಡಿರುವ ಘಟನೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದಿದ್ದು, ವಿಡಿಯೋದಲ್ಲಿ ಇರುವಂತೆ ಯುವಕ ಠಾಣೆಗೆ ಬಂದಾಗ ಪೊಲೀಸ್ ಪೇದೆ ಅಭಿಷೇಕ್‌ ಗೌಡ ಯುವಕನ ಮೇಲೆ ದಿಢೀರನೆ ಹಲ್ಲೆ ಮಾಡಿದ್ದು, ವಿಡಿಯೋದಲ್ಲಿ ದಾಖಲಾಗಿದ್ದು, ಆದ್ದರಿಂದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಭಾನುವಾರ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ದೂರು ನೀಡಿದ್ದಾರೆ.

ಠಾಣೆಗೆ ಬಂದ ಯುವಕನಿಗೆ ಮೊದಲು ಪೊಲೀಸ್ ಪೇದೆ ಹಲ್ಲೆ ನಡೆಸಿದ್ದು, ಪ್ರತಿಯಾಗಿ ಯುವಕ ಯಾಕೆ ನನ್ನ ಮೇಲೆ ಹಲ್ಲೆ ಮಾಡುತ್ತೀಯಾ ಎಂದು ಹೇಳಿ ತಿರುಗಿ ಬೀಳುತ್ತಾನೆ. ಆನಂತರ ಉಳಿದ ಮಹಿಳಾ ಸಿಬ್ಬಂದಿಗಳು ಸೇರಿದಂತೆ ಇತರ ಪೊಲೀಸರು ಬರುತ್ತಾರೆ. ನಡೆಯುತಿದ್ದ ಘಟನೆಯನ್ನು ಬಿಡಿಸಿ ಸರಿ ಪಡಿಸಬೇಕಾದ ಉಳಿದ ಸಿಬ್ಬಂದಿಗಳು ಕೂಡ ಸಾಗರ್ ಮೇಲೆ ಸಾಮೂಹಿಕ ಹಲ್ಲೆ ಮಾಡಿರುತ್ತಾರೆ. ಈ ಘಟನೆ ವಿಡಿಯೋದಲ್ಲಿದೆ. ಇದು ಎಷ್ಟರ ಮಟ್ಟಿಗೆ ಸರಿ ? ಆದ್ದರಿಂದ ತಪ್ಪಿತಸ್ಥ ಪೊಲೀಸರ ಮೇಲೆ ಕ್ರಮ ಜರುಗಿಸಬೇಕೆಂದು ನಿವೃತ್ತ ಪ್ರಾಂಶುಪಾಲ ರಾದ ಎಂ.ವಿ.ಕೃಷ್ಣ ಮಳವಳ್ಳಿ. ಶಿವಲಿಂಗಯ್ಯ ಕೆಂಬೂತಗೆರೆ, ಮಹಿಳಾ ಮುನ್ನಡೆ ಪೂರ್ಣಿಮಾ, ಶಿಲ್ಪ, ಕರ್ನಾಟಕ ಜನಶಕ್ತಿ ನಗರಕೆರೆ ಜಗದೀಶ್, ಜಾಗೃತ ಕರ್ನಾಟಕದ ಚೇತನ್ ಕಾಗೇಪುರ ಹಾಗೂ ರಾಹುಲ್ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪತ್ರಿಕೆಗಳಲ್ಲಿ ತಿಳಿದು ಬಂದಂತೆ ಈ ಘಟನೆಯ ಸಂಬಂಧ ಯುವಕನ ವಿರುದ್ಧ ಪೇದೆ ಅಭಿಷೇಕ್‌ ಗೌಡ ದೂರು ನೀಡಿದ್ದು, ಆತನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಪಾಂಡವಪುರ ಪುರಸಭೆ ಮಾಜಿ ಅಧ್ಯಕ್ಷ ಪಿ.ಎಸ್.ಜಗದೀಶ್ ಪುತ್ರ ಪಿ.ಜಿ.ಸಾಗರ್ ಎಂದು ತಿಳಿದು ಬಂದಿದೆ.

ಜಮೀನು ವಿವಾದ ಪ್ರಕರಣ ಸಂಬಂಧ ಸಾಗರ್ ವಿರುದ್ಧ ಲಕ್ಷ್ಮಿನಾರಾಯಾಣ ಎಂಬುವರು ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ದೂರವಾಣಿ ಕರೆ ಮಾಡಿ ಸಾಗ‌ರ್ ಅವರನ್ನು ಠಾಣೆಗೆ ಬರುವಂತೆ ಹೇಳಿದೆ. ಠಾಣೆಗೆ ಬಂದ ಸಾಗರ್ ಮತ್ತು ದೂರುದಾರ ಲಕ್ಷ್ಮಿನಾರಾಯಣ್ ನಡುವೆ ಮಾತಿನ ಚಕಮಕಿ ನಡೆಯಿತು. ಬಿಡಿಸಲು ಹೋದ ನನ್ನ ಮೇಲೆ ಸಾಗರ್ ಹಲ್ಲೆ ಮಾಡಿದ ಎಂದು ಪೇದೆ ಅಭಿಷೇಕ್‌ಗೌಡ ದೂರು ನೀಡಿದ್ದಾರೆ. ಜಗಳ ಬಿಡಿಸಲು ಹೋದಾಗ ನನ್ನ ಮೇಲೆ ಸಾಗರ್ ಹಲ್ಲೆ ನಡೆಸಿದ್ದಲ್ಲದೆ, ಬಿಡಿಸಲು ಬಂದ ಮುಖ್ಯ ಪೇದೆ ಆನಂದ್, ಮಹಿಳಾ ಸಿಬ್ಬಂದಿಗಳಾದ ಲಕ್ಷ್ಮಿ ಲತಾಮಣಿ, ಇತರ ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾನೆ ಎಂದು ಪೇದೆ ಅಭಿಷೇಕ್‌ ಗೌಡ ಆರೋಪಿಸಿದ್ದು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಮೊದಲು ಹೊಡೆದು ಪ್ರಚೋದಿಸಿದವರು ಯಾರು ಎಂಬುದನ್ನು ಇಲ್ಲಿ ಪರಿಶೀಲಿಸಬೇಕಿದೆ. ನಂತರ ಅಲ್ಲಿರುವ ಪೊಲೀಸ್ ಸಿಬ್ಬಂದಿಗಳು ಕೂಡ ಹಲ್ಲೆ ಮಾಡುತ್ತಾರೆ. ತಪ್ಪು ಮಾಡಿದ ತಕ್ಷಣ ಪೊಲೀಸರಿಗೆ ಹೊಡೆಯಲು ಅಧಿಕಾರ ಇಲ್ಲ. ತಪ್ಪು ಮಾಡಿದವರ ಮೇಲೆ ಕೇಸು ಹಾಕಿ ಕೋರ್ಟಿಗೆ ಹಾಜರುಪಡಿಸಬೇಕು ಅಷ್ಟೇ ಪೊಲೀಸರಿಗೆ ಇರುವ ಅಧಿಕಾರ ಎಂದು ಮನವಿ ಪತ್ರದಲ್ಲಿ ನೆನಪಿಸಿದ್ದಾರೆ.

ಯಾವುದೇ ವ್ಯಕ್ತಿಯ ಮೇಲೆ ಹಲ್ಲೆ ಮಾಡಲು ಪೊಲೀಸ್ ಸಿಬ್ಬಂದಿಗಳಿಗೆ ಅಧಿಕಾರ ಕೊಟ್ಟವರಾರು?  ಪೊಲೀಸರೇನು ಗೂಂಡಾಗಳೇ? ವಿಡಿಯೋದಲ್ಲಿ ಯುವಕನ ಮೇಲೆ ಹಲ್ಲೆ ಮಾಡಿರುವುದು ಸ್ಪಷ್ಟವಾಗಿದೆ. ಈ ದೂರನ್ನು ಪರಿಗಣಿಸಿ ಪೊಲೀಸ್ ಸಿಬ್ಬಂದಿಗಳ ಮೇಲೂ ಕೂಡ ದೂರು ದಾಖಲಾಗಬೇಕು. ಪಾರದರ್ಶಕ ವಿಚಾರಣೆ ನಡೆದು ತಪ್ಪು ಮಾಡಿದ ಪೊಲೀಸ್ ಸಿಬ್ಬಂದಿಗಳ ಮೇಲೂ ದಂಡನೆ ಆಗಲೇಬೇಕು ಎಂಬುದು ಸಾರ್ವಜನಿಕರ ಆಗ್ರಹದ ಜೊತೆಗೆ ನಮ್ಮದೂ ಒತ್ತಾಯ ಆಗಿದೆ ಎಂದು ಅಗ್ರಹಿಸಿದ್ದಾರೆ.

ಪೊಲೀಸರಿಗೆ ಹೊಡೆಯುವ ಅಧಿಕಾರ ಕೊಟ್ಟವರು ಯಾರು. ಆ ವ್ಯಕ್ತಿ ತಿರುಗಿಸಿ ಹೊಡೆದದ್ದು ಕಾನೂನಿನ ಪ್ರಕಾರ ತಪ್ಪು, ಆದರೆ ಪೊಲೀಸ್ ಏಕಾಏಕಿ ಹೊಡೆದು ಪ್ರಚೋದಿಸದಿದ್ದರೆ ಆ ಯುವಕ ಹೊಡೆಯಲು ಅವಕಾಶವೇ ಇರಲಿಲ್ಲ, ಗಲಾಟೆ ನೋಡಿ ಬಂದಂತ ಉಳಿದ ಪೊಲೀಸರು ಸಿಬ್ಬಂದಿಗಳು ಕೂಡ ಹೊಡೆಯಲು ಶುರು ಮಾಡುತ್ತಾರೆ. ಹೊಡೆದ ವ್ಯಕ್ತಿಯ ಮೇಲೆ ಕೇಸ್ ಹಾಕಿ ನ್ಯಾಯಾಲಯಕ್ಕೆ ಕಳುಹಿಸುವ ಬದಲು ಹೊಡೆಯಲು ಯಾವ ಕಾಯಿದೆಯಲ್ಲಿ ಹೇಳುತ್ತೆ ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆದು ತಪ್ಪತಸ್ಥರಿಗೆ ದಂಡನೆ ಆಗಲಿ. ಎಲ್ಲರಿಗೂ ಒಂದೇ ಕಾನೂನು ಯಾರೇ ಹಲ್ಲೆ ಮಾಡಿದರೂ ಸಂವಿಧಾನದ ಪ್ರಕಾರ ತಪ್ಪೇ ಪೊಲೀಸ್ ಇಲಾಖೆಗೆ ಯಾರನ್ನು ಬೇಕಾದರೂ ಬೈಯ್ಯಬಹುದು, ಹೊಡೆಯಬಹುದು ನಮಗೆ ಅಧಿಕಾರ ಇದೆ ಎಂಬ ಮನಸ್ಥಿತಿ ಇದೆ. ಈ ಮನಸ್ಥಿತಿ ಬದಲಾಗಲೇಬೇಕು ಎಂದು ಒತ್ತಾಯಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ