Friday, November 20, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ ಯುವಕರಿಂದ 1600 ಯೂನಿಟ್ ರಕ್ತದಾನ- ನರೇಂದ್ರಸ್ವಾಮಿ ಪ್ರಶಂಸೆ

ಮಳವಳ್ಳಿ ಯುವಕ ಮಿತ್ರರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರದಲ್ಲಿ ಮಳವಳ್ಳಿ ಪಟ್ಟಣದ ರೋಟರಿ ಶಾಲೆಯಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ 1600ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹವಾಗುವುದರ ಮೂಲಕ ಹೊಸ ದಾಖಲೆಯನ್ನು ಸೃಷ್ಠಿಸಿದೆ.

ಶಾಸಕ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ಮಳವಳ್ಳಿ ಯುವಕ ಮಿತ್ರರು ಹಲವಾರು ವರ್ಷಗಳಿಂದ ರಕ್ತದಾನ ಶಿಬಿರ ಹಾಗೂ ಗಿಡ ನೆಡುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುವುದರ ಮೂಲಕ ದೇಶದಲ್ಲಿ ಮಾದರಿ ಯುವಕರ ತಂಡ ಎನಿಸಿಕೊಂಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಾವಿರಾರು ಯೂನಿಟ್ ರಕ್ತವನ್ನು ಒಂದೆ ಕಡೆಯಲ್ಲಿ ಸಂಗ್ರಹಿಸಿ ರೋಗಿಗಳಿಗೆ ನೀಡುವುದು ಸುಲಭದ ಮಾತಲ್ಲ, ಆದರೇ ಒಂದು ತಿಂಗಳಿಂದಲೂ ಸಾಮಾಜಿಕ ಜಾಲತಾಣ, ಬಿತ್ತಿ ಪತ್ರ ಹಂಚುವುದು, ಆಟೋ ಪ್ರಚಾರ, ವಿದ್ಯಾರ್ಥಿಗಳಿಂದ ಜಾಥ ಸೇರಿದಂತೆ ವಿಶೇಷ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸಿ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಿರುವ ಯುವಕ ಮಿತ್ರರಿಗೆ ಕ್ಷೇತ್ರದ ಶಾಸಕರಾಗಿ ಕೃತಜ್ಞತೆ ಸಲ್ಲಿಸುತ್ತೇನೆಂದು ತಿಳಿಸಿದರು.

ಮಳವಳ್ಳಿಯಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಇಲ್ಲಿನ ಯುವಕರ ಶ್ರಮದ ಫಲವಾಗಿದೆ, ತುರ್ತು ಪರಿಸ್ಥಿಯಲ್ಲಿರುವ ರೋಗಿಗಳಿಗೆ ರಕ್ತ ನೀಡುವುದು ಹಾಗೂ ಗಿಡ ಬೆಳೆಸುವ ಕಾಯಕ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.

ಸಾರ್ವಜನಿಕರು, ಪೊಲೀಸರು, ಪತ್ರಕರ್ತರು, ವಿಕಲಚೇತನರು, ಮಹಿಳೆಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ರಕ್ತದಾನಿಗಳು ಶಿಬಿರದಲ್ಲಿ ಭಾಗವಹಿಸಿ ರಕ್ತವನ್ನು ದಾನ ಮಾಡುವುದರ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದರು.

ರಕ್ತದಾನ ಶಿಬಿರದಲ್ಲಿ ಹೈಕೊರ್ಟ್ ನ್ಯಾಯಾಧೀಶರಾದ ರಾಚಯ್ಯ ಅವರು ಭಾಗವಹಿಸಿ ಮಾತನಾಡಿ, ಕೃತಕವಾಗಿ ತಯಾರಿಸಲು ಸಾಧ್ಯವಾಗದ ರಕ್ತವನ್ನು ಮತ್ತೊಬ್ಬರಿಗೆ ನೀಡಿ ಜೀವ ಉಳಿಸುವಂತಹ ಕಾಯಕದಲ್ಲಿ ತೊಡಗಿರುವ ಯುವಕ ಮಿತ್ರರ ಸೇವೆ ಶ್ಲಾಘನೀಯ, ರಕ್ತದಾನದ ಮಹತ್ವವನ್ನು ಅರಿತು ಮಳವಳ್ಳಿ ಪಟ್ಟಣದಲ್ಲಿ ದಾಖಲೆ ಪ್ರಮಾಣದ ರಕ್ತವನ್ನು ಸಂಗ್ರಹಿಸಿ ಅವಶ್ಯಕ ರೋಗಿಗಳಿಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಜಾಹೀರಾತು

ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ.ಮಾದೇಶ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮಮತ ಶಿವಪೂಜಿ, ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಚಿನ್‌ಕುಮಾರ್ ಶಿವಪೂಜಿ, ಸರ್ಕಲ್ ಇನ್ಸ್ಪೇಕ್ಟರ್ ಶ್ರೀಕಾಂತ್, ಕೆಪಿಸಿಸಿ ಪ್ರಧಾನಕಾರ್ಯದರ್ಶಿ ದಡದಪುರ ಶಿವಣ್ಣ, ಅದರ್ಶ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಮೂರ್ತಿ, ಭಗವಾನ್‌ಬುದ್ದ ಮಹಾವಿದ್ಯಾಲಯದ ಅಧ್ಯಕ್ಷ ಯಮದೂರು ಸಿದ್ದರಾಜು, ತಾಲ್ಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಸೇರಿದಂತೆ ಇತರೆ ನಾಯಕರು ಶಿಬಿರದಲ್ಲಿ ಭಾಗವಹಿಸಿ ಯಶಸ್ವಿಗೆ ಶುಭ ಕೋರಿದರು.

ಡಿಜಿಪಿ ನಂಜುಂಡಸ್ವಾಮಿ, ಮಾಜಿ ಯೋಧ ನಾಗರಾಜು, ಪುಸ್ತಕ ಪ್ರೇಮಿ ಅಂಕೇಗೌಡ, ಸಮಾಜ ಸೇವಕ ನಾಗರಾಜು,ಹಿರಿಯ ಪತ್ರಕರ್ತ ಪ್ರಭಾಕರ್ ಅವರನ್ನು ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಸ್ಮಾನಿಸಿ ಗೌರವಿಸಲಾಯಿತು.

ರಕ್ತದಾನ ಮಾಡಲು ಬಂದ ರಕ್ತದಾನಿಗಳಿಗೆ ಗಣ್ಯ ವ್ಯಕ್ತಿಗಳಿಗೆ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ವಿಶೇಷ ರೀತಿಯಲ್ಲಿ ಸ್ವಾಗತಿಸಿ ಬರಮಾಡಿಕೊಂಡರು. ನೆಲಮಾಕನಹಳ್ಳಿ ಗ್ರಾಮದ ನೂರಾರು ಯುವಕರು ಬೈಕ್ ಜಾಥದ ಮೂಲಕ ಬಂದು ರಕ್ತದಾನ ಮಾಡಿದರು. ವಿವಿಧ ಸಂಘ ಸಂಸ್ಥೆಗಳ ಸ್ವಯಂ ಸೇವಕರು ಶಿಬಿರಕ್ಕೆ ಬಂದ ರಕ್ತದಾನಿಗಳಿಗೆ ಹಾಲು ಹಣ್ಣುಗಳನ್ನು ಯಾವುದೇ ತೊಂದರೆಯಾಗದಂತೆ ವಿತರಣೆ ಮಾಡಿದರು.

ಸಮಾರೋಪ ಸಮಾರಂಭದಲ್ಲಿ ಡಿಜಿಪಿ ನಂಜುಂಡಸ್ವಾಮಿ, ಮಾಜಿ ಯೋಧ ನಾಗರಾಜು, ಪುಸ್ತಕ ಪ್ರೇಮಿ ಅಂಕೇಗೌಡ, ಸಮಾಜ ಸೇವಕ ನಾಗರಾಜು, ಹಿರಿಯ ಪತ್ರಕರ್ತ ಪ್ರಭಾಕರ್ ಅವರನ್ನು ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಸ್ಮಾನಿಸಿ ಗೌರವಿಸಲಾಯಿತು.

ರಕ್ತದಾನ ಮಾಡಲು ಬಂದ ರಕ್ತದಾನಿಗಳಿಗೆ ಗಣ್ಯ ವ್ಯಕ್ತಿಗಳಿಗೆ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ವಿಶೇಷ ರೀತಿಯಲ್ಲಿ ಸ್ವಾಗತಿಸಿ ಬರಮಾಡಿಕೊಂಡರು. ನೆಲಮಾಕನಹಳ್ಳಿ ಗ್ರಾಮದ ನೂರಾರು ಯುವಕರು ಬೈಕ್ ಜಾಥದ ಮೂಲಕ ಬಂದು ರಕ್ತದಾನ ಮಾಡಿದರು. ವಿವಿಧ ಸಂಘ ಸಂಸ್ಥೆಗಳ ಸ್ವಯಂ ಸೇವಕರು ಶಿಬಿರಕ್ಕೆ ಬಂದ ರಕ್ತದಾನಿಗಳಿಗೆ ಹಾಲು ಹಣ್ಣುಗಳನ್ನು ಯಾವುದೇ ತೊಂದರೆಯಾಗದಂತೆ ವಿತರಣೆ ಮಾಡಿದರು.

ಸಂಗ್ರಹಿಸಲಾದ ರಕ್ತವನ್ನು ಸರ್ಕಾರಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಮಂಡ್ಯ (ಮಿಮ್ಸ್), ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ-ಬೆಂಗಳೂರು, ಚಾಮರಾಜನಗರ ಸರ್ಕಾರಿ ಜಿಲ್ಲಾಸ್ಪತ್ರೆ, ಕೆ.ಆರ್.ಆಸ್ಪತ್ರೆ-ಮೈಸೂರು ಇಲ್ಲಿನ ಒಳರೋಗಿಗಳಿಗೆ ರಕ್ತವನ್ನು ರವಾನಿಸಲಾಯಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ